ಪ್ರತಿವರ್ಷ ಜನವರಿ 26 ರಂದು ಗಣರಾಜ್ಯೋತ್ಸವ ದಿನವನ್ನು (Republic Day 2026) ರಾಷ್ಟ್ರೀಯ ಹಬ್ಬವಾಗಿ ಆಚರಿಸುವುದು ಭಾರತೀಯರ ಹೆಮ್ಮೆ ಆಗಿದೆ. ದೇಶವು ಈ ಬಾರಿ 77ನೇ ಗಣರಾಜ್ಯೋತ್ಸವವನ್ನು ಆಚರಿಸಲಿದೆ. ಈ ಮಹತ್ವದ ದಿನವು ದೇಶದ ಸ್ವಾತಂತ್ರ್ಯ, ಸೌಹಾರ್ದ ಮತ್ತು ಸಂವಿಧಾನದ ಮಹತ್ವವನ್ನು ಗೌರವಿಸುವ ದಿನವಾಗಿದೆ. ಪ್ರತಿ ವರ್ಷದಂತೆ ಈ ಬಾರಿಯು ದೇಶದ ಎಲ್ಲಾ ರಾಜ್ಯಗಳಲ್ಲಿ ಸಂಭ್ರಮದ ಯಾತ್ರೆಗಳು, ಪೆರೇಡ್‌ಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಇನ್ನು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್ ದೇಶದ ಶಕ್ತಿ, ಸಾಮರ್ಥ್ಯದ ಪ್ರತೀಕವಾಗಿದೆ.
Also Read : ಬಿಡುಗಡೆಗೆ ಸಿದ್ಧವಾಗಿದೆ Vivo V70 Series; ನಿರೀಕ್ಷಿತ ಫೀಚರ್ಸ್ ಏನು ಮತ್ತು ಬೆಲೆ ಎಷ್ಟು ಇಲ್ಲಿ ತಿಳಿಯಿರಿ
ಗಣರಾಜ್ಯೋತ್ಸವವು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದಂತಹ ನಮ್ಮ ಸಾಂವಿಧಾನಿಕ ಮೌಲ್ಯಗಳನ್ನು ನೆನಪಿಸುತ್ತದೆ. ಈ ಹೆಮ್ಮೆಯ ದಿನದಂದು ನಿಮ್ಮ ಆತ್ಮೀಯರಿಗೆ, ಸ್ನೇಹಿತರಿಗೆ ಹಾಗೂ ಕುಟುಂಬ ಸದಸ್ಯರಿಗೆ ಗಣರಾಜ್ಯೋತ್ಸವದ ಶುಭಾಶಗಳನ್ನು ತಿಳಿಸಲು ಇಲ್ಲಿವೆ ನೋಡಿ ಕೆಲವು ಅತ್ಯುತ್ತಮ ಸಾಲುಗಳ ಆಯ್ಕೆ.
– ಗರ್ವದಿಂದ ತಲೆ ಎತ್ತಿ ಹೇಳೋಣ – ನಾವು ಭಾರತೀಯರು! ಗಣರಾಜ್ಯೋತ್ಸವದ ಶುಭಾಶಯಗಳು
– ನಮ್ಮ ದೇಶದ ಶಕ್ತಿ ಅದರ ಜನರಲ್ಲಿ ಇದೆ. ಆ ಶಕ್ತಿಯ ಭಾಗವಾಗಿರುವ ನಿಮಗೆ ಗಣರಾಜ್ಯೋತ್ಸವದ ಶುಭಾಶಯಗಳು.
– ಸ್ವಾತಂತ್ರ್ಯ, ಸಮಾನತೆ ಮತ್ತು ಬಾಂಧವ್ಯ – ಈ ಮೌಲ್ಯಗಳು ನಿಮ್ಮ ಬದುಕಲ್ಲೂ ಸದಾ ಉಳಿಯಲಿ. ಗಣರಾಜ್ಯೋತ್ಸವದ ಶುಭಾಶಯಗಳು.
– ನಮ್ಮ ಸಂವಿಧಾನ ನಮ್ಮ ಹೆಮ್ಮೆ. ಅದನ್ನು ಗೌರವಿಸುವ ದಿನದ ಶುಭಾಶಯಗಳು. ಹ್ಯಾಪಿ ರಿಪಬ್ಲಿಕ್ ಡೇ
– ಭಾರತೀಯರಾಗಿರುವ ಹೆಮ್ಮೆ ನಿಮ್ಮ ಹೃದಯದಲ್ಲಿ ಸದಾ ಜೀವಂತವಾಗಿರಲಿ. ಹ್ಯಾಪಿ ರಿಪಬ್ಲಿಕ್ ಡೇ 2026
– ದೇಶದ ಭವಿಷ್ಯ ನಿಮ್ಮಂತಹ ನಾಗರಿಕರ ಕೈಯಲ್ಲಿದೆ. ಗಣರಾಜ್ಯೋತ್ಸವದ ಶುಭಾಶಯಗಳು.
– ನಿಮಗೂ ನಿಮ್ಮ ಕುಟುಂಬಕ್ಕೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
– ನಮ್ಮ ಸಂವಿಧಾನದ ಮೌಲ್ಯಗಳನ್ನು ಗೌರವಿಸಿ, ದೇಶದ ಪ್ರಗತಿಗೆ ಕೈಜೋಡಿಸೋಣ. ಗಣರಾಜ್ಯೋತ್ಸವದ ಶುಭಾಶಯಗಳು
– ತ್ರಿವರ್ಣ ಧ್ವಜದಂತೆ ನಿಮ್ಮ ಜೀವನವೂ ಸಂತೋಷದಿಂದ ಕಂಗೊಳಿಸಲಿ. ಶುಭ ಗಣರಾಜ್ಯೋತ್ಸವ.
– ದೇಶಭಕ್ತಿಯ ಹೆಮ್ಮೆ ಸದಾ ನಿಮ್ಮ ಮನಸ್ಸಿನಲ್ಲಿ ಇರಲಿ. ಗಣರಾಜ್ಯೋತ್ಸವದ ಶುಭಾಶಯಗಳು.
ನಮ್ಮ ಸಂವಿಧಾನ ನಮ್ಮ ದಾರಿ ತೋರಿಸುವ ದೀಪ. ಗಣರಾಜ್ಯೋತ್ಸವದ ಶುಭಾಶಯಗಳು
– ನಮ್ಮ ಸಂವಿಧಾನದ ಬೆಳಕಿನಲ್ಲಿ ಸಾಗೋಣ. ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
– ಭಾರತದ ಸಂವಿಧಾನ ನಮ್ಮ ಪ್ರೇರಣೆ, ನಮ್ಮ ಹೆಮ್ಮೆ. ಗಣರಾಜ್ಯೋತ್ಸವದ ಶುಭಾಶಯಗಳು
– ದೇಶಕ್ಕಾಗಿ ಕನಸು ಕಾಣೋಣ, ಅದನ್ನು ಸಾಕಾರಗೊಳಿಸೋಣ. ಗಣರಾಜ್ಯೋತ್ಸವದ ಶುಭಾಶಯಗಳು
– ಜೈ ಹಿಂದ್! ನಮ್ಮ ದೇಶದ ಹೆಮ್ಮೆ ಸದಾ ಜೀವನದಲ್ಲಿ ಕಂಗೊಳಿಸಲಿ. ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
– ಸ್ವಾತಂತ್ರ್ಯ, ಗೌರವ ಮತ್ತು ಏಕತೆ ನಮ್ಮ ನಿಜವಾದ ಶಕ್ತಿ. ಈ ಗಣರಾಜ್ಯೋತ್ಸವವು ನಿಮ್ಮ ಜೀವನಕ್ಕೆ ಬೆಳಕು ತರುತ್ತಿರಲಿ.