govt alert
Wireless Emergency Alerts: ಇಂದು ಮುಂಜಾನೆ ಅನೇಕ ಬಳಕೆದಾರರ ಸ್ಮಾರ್ಟ್‌ಫೋನ್‌ಗಳು ಇದ್ದಕ್ಕಿದ್ದಂತೆ ಜೋರಾಗಿ ಸೈರನ್ ಶಬ್ದದಂತೆ ರಿಂಗಣಿಸಿದವು. ಅನೇಕ ಬಳಕೆದಾರರು ತಮ್ಮ ಮೊಬೈಲ್ ಸ್ಕ್ರೀನ್‌ಗಳಲ್ಲಿ ‘ಎಮರ್ಜೆನ್ಸಿ ಸೆವಿಯರ್ ಅಲರ್ಟ್’ ಎಂಬ ಮೆಸಜ್ ನೋಡಿ ಗಾಬರಿಗೊಂಡರು. ಕೆಲವರು ಆರಂಭದಲ್ಲಿ ಇದು ತಮ್ಮ ಮೊಬೈಲ್‌ನಲ್ಲಿನ ತಾಂತ್ರಿಕ ದೋಷ ಎಂದು ಊಹಿಸಿದರು. ಮತ್ತೆ ಕೆಲವರು ಅದನ್ನು ವಂಚನೆಯ ಮೆಸೆಜ್ ಎಂದು ತಪ್ಪಾಗಿ ಭಾವಿಸಿದರು. ಆದರೆ ವಾಸ್ತವದಲ್ಲಿ ಇದು ಭಾರತ ಸರ್ಕಾರ ಕಳುಹಿಸಿದ ಅಧಿಕೃತ ಪರೀಕ್ಷಾ ಮೆಸೆಜ್ ಆಗಿತ್ತು. ದೂರಸಂಪರ್ಕ ಇಲಾಖೆಯು ಪ್ರಸ್ತುತ ಹೊಸ ‘ವೈರ್‌ಲೆಸ್ ತುರ್ತು ಎಚ್ಚರಿಕೆ ವ್ಯವಸ್ಥೆ’ಯ ರಾಷ್ಟ್ರವ್ಯಾಪಿ ಪ್ರಯೋಗವನ್ನು ನಡೆಸುತ್ತಿದೆ. ಈ ವ್ಯವಸ್ಥೆಯ ಪ್ರಾಥಮಿಕ ಉದ್ದೇಶವೆಂದರೆ ವಿಪತ್ತುಗಳು ಅಥವಾ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಏಕಕಾಲದಲ್ಲಿ ಮಾಹಿತಿಯನ್ನು ಪ್ರಸಾರ ಮಾಡಲು ಅನುವು ಮಾಡಿಕೊಡುವುದು.
Also Read : Oppo K14x 5G ಮೊಬೈಲ್ ಖರೀದಿಗೆ ಇದುವೇ ಅತ್ಯುತ್ತಮ ಸಮಯ! ಭಾರೀ ಡಿಸ್ಕೌಂಟ್
ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯು ಕಳುಹಿಸಿರುವ ಮೆಸೆಜ್ ವೈರ್‌ಲೆಸ್ ಎಮರ್ಜೆನ್ಸಿ ಅಲರ್ಟ್ಸ್ ಬಗ್ಗೆ ಸ್ಪಷ್ಟವಾಗಿ ಹೇಳುತ್ತದೆ. ಭಾರತ ಸರ್ಕಾರವು ಸಂಪೂರ್ಣವಾಗಿ ಸ್ಥಳೀಯ ತಂತ್ರಜ್ಞಾನದಿಂದ ನಡೆಸಲ್ಪಡುವ ‘ಸೆಲ್ ಬ್ರಾಡ್‌ಕಾಸ್ಟ್ ಅಲರ್ಟ್ ಸಿಸ್ಟಮ್’ ಅನ್ನು ಪ್ರಾರಂಭಿಸಿದೆ. ಈ ಸೇವೆಯ ಮೂಲಕ ಯಾವುದೇ ನೈಸರ್ಗಿಕ ವಿಕೋಪ ಅಥವಾ ತುರ್ತು ಪರಿಸ್ಥಿತಿಯ ಕುರಿತು ತಕ್ಷಣದ ಎಚ್ಚರಿಕೆಗಳನ್ನು ನಾಗರಿಕರ ಮೊಬೈಲ್ ಫೋನ್‌ಗಳಿಗೆ ನೇರವಾಗಿ ತಲುಪಿಸಲಾಗುತ್ತದೆ.
ದಯವಿಟ್ಟು ಗಮನಿಸಿ: ಇದು ಪರೀಕ್ಷಾ ಮೆಸೆಜ್ ಆಗಿದೆ. ಈ ಮೆಸೆಜ್ ಅನ್ನು ಸ್ವೀಕರಿಸಿದ ನಂತರ, ಸಾರ್ವಜನಿಕರು ಯಾವುದೇ ಕ್ರಮ ತೆಗೆದುಕೊಳ್ಳುವ ಅಥವಾ ಗಾಬರಿಗೊಳ್ಳುವ ಅಗತ್ಯವಿಲ್ಲ. ಭಾರತ ಸರ್ಕಾರ, ದೂರಸಂಪರ್ಕ ಇಲಾಖೆ.
ಇದು ‘ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್’ ಮೂಲಕ ರವಾನೆಯಾಗುವ ಮಾದರಿ ಪರೀಕ್ಷಾ ಮೆಸೆಜ್ ಆಗಿದೆ. ಈ ಮೆಸೆಜ್‌ಗೆ ಪ್ರತಿಕ್ರಿಯೆಯಾಗಿ ಬಳಕೆದಾರರು ಯಾವುದೇ ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ಅಭಿವೃದ್ಧಿಪಡಿಸಿದ ಉಪಕ್ರಮವಾದ ‘ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆ’ಯ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡಲು ಈ ಪ್ರಯೋಗವನ್ನು ನಡೆಸಲಾಗುತ್ತಿದೆ.
ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಸಕಾಲಿಕ ಎಚ್ಚರಿಕೆಗಳನ್ನು ತಲುಪಿಸಬಹುದೆಂದು ಖಚಿತಪಡಿಸಿಕೊಳ್ಳುವುದು ಇದರ ಪ್ರಮುಖ ಉದ್ದೇಶವಾಗಿದೆ. ಮುಖ್ಯವಾಗಿ ಪ್ರವಾಹ, ಭೂಕಂಪ, ಸುನಾಮಿಗಳು, ಚಂಡಮಾರುತಗಳು ಅಥವಾ ಇತರ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಈ ತಂತ್ರಜ್ಞಾನವು ಲಕ್ಷಾಂತರ ಜನರಿಗೆ ನಿರ್ಣಾಯಕ ಮಾಹಿತಿಯನ್ನು ಕೆಲವೇ ಸೆಕೆಂಡುಗಳಲ್ಲಿ ತ್ವರಿತವಾಗಿ ಪ್ರಸಾರ ಮಾಡಲು ಅನುವು ಮಾಡಿಕೊಡುತ್ತದೆ.