ಡಿಸೆಂಬರ್ 2025 ರಂದು ಬಿಡುಗಡೆಯಾದ ರಣವೀರ್ ಸಿಂಗ್ ಅಭಿನಯದ Dhurandhar ಸಿನಿಮಾ ಚಿತ್ರಮಂದಿರಗಳಿಗೆ ರಿಲೀಸ್ ಆದಾಗಿನಿಂದ ಭಾರೀ ಗಮನ ಸೆಳೆಯುತ್ತಿದೆ. ಇದೀಗ ಧುರಂಧರ್ ಸಿನಿಮಾ OTT ಪ್ಲಾಟ್‌ಫಾರ್ಮ್ ಗೆ ಬರಲು ಸಜ್ಜಾಗಿದೆ. ಅಂದಹಾಗೆ ಇದೊಂದು ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಚಿತ್ರದಲ್ಲಿ ರಣವೀರ್ ಸಿಂಗ್ ಕರಾಚಿಯ ಕ್ರಿಮಿನಲ್ ಮತ್ತು ರಾಜಕೀಯ ಜಾಲದಲ್ಲಿ ಕಾರ್ಯನಿರ್ವಹಿಸುವ ರಹಸ್ಯ RAW ಏಜೆಂಟ್ ಆಗಿ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಆರಂಭದಿಂದ ಅಂತ್ಯವರೆಗೆ ಪ್ರೇಕ್ಷಕರ ಆಸಕ್ತಿಯನ್ನು ಹಿಡಿದಿಟ್ಟುಕೊಳ್ಳುವ ರೀತಿ ಚಿತ್ರದ ಕಥೆಯನ್ನು ಹೆಣೆಯುವಲ್ಲಿ ನಿರ್ದೇಶಕ ಆದಿತ್ಯ ಧಾರ್ ಗೆದ್ದಿದ್ದಾರೆ. ಧುರಂಧರ್ ಸಿನಿಮಾವು IC-814 ಅಪಹರಣ ಮತ್ತು 2001 ರ ಸಂಸತ್ತಿನ ದಾಳಿಯಂತಹ ನೈಜ್ಯ ಘಟನೆಗಳಿಂದ ಪ್ರೇರಿತವಾಗಿದೆ.
Also Read : ಸದ್ದಿಲ್ಲದೆ HP HyperX Omen 15 ಗೇಮಿಂಗ್ ಲ್ಯಾಪ್‌ಟಾಪ್ ಲಾಂಚ್; ಬೆಲೆ ಮತ್ತು ಫೀಚರ್ಸ್ ತಿಳಿಯಿರಿ
ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿರುವ Dhurandhar ಸಿನಿಮಾ OTT ಗೆ ರಿಲೀಸ್ ಆಗುತ್ತಿರುವುದು ಸಿನಿ ಪ್ರಿಯರಿಗೆ ಖುಷಿ ನೀಡಿದೆ. ಇನ್ನು OTTplay ಮಾಹಿತಿ ಪ್ರಕಾರ ಧುರಂಧರ್ ಇದೇ ಜನವರಿ 30, 2026 ರಂದು ಸ್ಟ್ರೀಮಿಂಗ್ ದೈತ್ಯ Netflix ತಾಣದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದಿದೆ. ಆದಾಗ್ಯೂ, ಡಿಜಿಟಲ್ ಸ್ಟ್ರೀಮಿಂಗ್ ತಾಣ Netflix ಅಥವಾ ಸಿನಿಮಾ ತಂಡ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ದೃಢೀಕರಿಸಿಲ್ಲ.
ಸಿನಿಮಾ ರಂಗದಲ್ಲಿ ಭಾರೀ ಸದ್ದು ಮಾಡಿರುವ Dhurandhar ಸಿನಿಮಾ ಜೈಲು ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ ಜಸ್ಕಿರತ್ ಸಿಂಗ್ ಅವರ ಕಥೆಯನ್ನು ಹೇಳುತ್ತದೆ. ಈ ಪಾತ್ರದಲ್ಲಿ ರಣವೀರ್ ಸಿಂಗ್ ಅಭಿನಯಿಸಿದ್ದಾರೆ. ಗುಪ್ತಚರ ದಳದ ಮುಖ್ಯಸ್ಥ ಅಜಯ್ ಸನ್ಯಾಲ್ (ಆರ್. ಮಾಧವನ್) ಜಸ್ಕಿರತ್‌ನನ್ನು ರಹಸ್ಯ ಮತ್ತು ಅಪಾಯಕಾರಿ ಕಾರ್ಯಾಚರಣೆಗೆ ಆಯ್ಕೆ ಮಾಡಿದಾಗ ಅವನ ಜೀವನ ಸಂಪೂರ್ಣವಾಗಿ ಬದಲಾಗುತ್ತದೆ.
ಮುಂದೆ ಜಸ್ಕಿರತ್ ಸಿಂಗ್‌ನನ್ನು ಫೇಕ್ ಐಡೆಂಟಿಟಿ ಬಳಸಿ ಕರಾಚಿಗೆ ಕಳುಹಿಸಲಾಗುತ್ತದೆ. ಅಪರಾಧ ಜಾಲಗಳಿಗೆ ಹೆಸರುವಾಸಿಯಾದ ಲಿಯಾರಿ ಪ್ರದೇಶಕ್ಕೆ ಪ್ರವೇಶಿಸುತ್ತಾನೆ. ಅವನು ಭೂಗತ ಜಗತ್ತಿನ ಭಾಗವಾಗುತ್ತಾನೆ. ಆದರೆ ಅವನ ನಿಜವಾದ ಗುರಿ ಐಎಸ್‌ಐ ಮತ್ತು ಭಯೋತ್ಪಾದಕ ಗುಂಪುಗಳ ನಡುವಿನ ಸಂಪರ್ಕವನ್ನು ಮುರಿಯುವುದು ಆಗಿರುತ್ತದೆ. ಪ್ರಬಲ ದರೋಡೆಕೋರ ರೆಹಮಾನ್ ಡಕೈತ್ ಆಗಮನದೊಂದಿಗೆ ಈ ಕಾರ್ಯಾಚರಣೆಯು ಹೆಚ್ಚು ಅಪಾಯಕಾರಿಯಾಗುತ್ತದೆ.
Dhurandhar ಸಿನಿಮಾವನ್ನು ಆದಿತ್ಯ ಧರ್ ನಿರ್ದೇಶಿಸಿದ್ದಾರೆ. ಈ ಸಿನಿಮಾದ ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್, ಆರ್. ಮಾಧವನ್ ಮತ್ತು ಅರ್ಜುನ್ ರಾಂಪಾಲ್ ನಟಿಸಿದ್ದಾರೆ. ಅಂದಹಾಗೆ ಈ ಸಿನಿಮಾ ಹಲವು ದಾಖಲೆ ಹಿಂದಿಕ್ಕಿ ಈಗಾಗಲೇ ಭಾರತದಲ್ಲಿ 1000 ಕೋಟಿ ರೂ.ಗಳನ್ನು ಗಳಿಸಿದೆ.