apple announces Apple Surprise and shine Event what to expect
Apple Launch Event 2026: ಜನಪ್ರಿಯ ಆಪಲ್ ಕಂಪನಿಯು ನಾಳೆ (ಸೆಪ್ಟೆಂಬರ್ 9 ರಂದು) ತನ್ನ ಪ್ರಮುಖ ವಾರ್ಷಿಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲು ಸಜ್ಜಾಗಿದೆ. Surprise and Shine ಹೆಸರಿನ ಈ ಕಾರ್ಯಕ್ರಮದಲ್ಲಿ ಹೊಸ iPhone 18 Pro ಮತ್ತು iPhone 18 Pro Max ಮಾದರಿಗಳನ್ನು ಪರಿಚಯಿಸುವ ನಿರೀಕ್ಷೆಯಿದೆ. ಇದರ ಜೊತೆಗೆ ಆಪಲ್ ತನ್ನ ಮೊದಲ ಮಡಿಸಬಹುದಾದ ಐಫೋನ್ ಅನ್ನು ಕೂಡ ಈ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಬಹುದು ಎಂಬ ಸೂಚನೆ ಇದೆ. ಅಲ್ಲದೇ ಹೊಸ ಆಪಲ್ ವಾಚ್ ಮತ್ತು AirPods ಮಾದರಿಗಳೂ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇನ್ನುಳಿದಂತೆ ಆಪಲ್ ಕಾರ್ಯಕ್ರಮ ಲೈವ್ ವೀಕ್ಷಣೆ ಹಾಗೂ ಇನ್ನಿತರ ಮಾಹಿತಿ ಮುಂದೆ ನೋಡೋಣ.
Also Read : OnePlus ಕಂಪನಿಯ ಈ ಪ್ರೀಮಿಯಂ ಸ್ಮಾರ್ಟ್ಫೋನ್ ಬೆಲೆಯಲ್ಲಿ ಈಗ ಭಾರೀ ರಿಯಾಯಿತಿ!
ಆಪಲ್ ಕಂಪನಿಯ Surprise and Shine ಕಾರ್ಯಕ್ರಮವು ನಾಳೆ (ಸೆಪ್ಟೆಂಬರ್ 9 ರಂದು) ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೊದಲ್ಲಿರುವ ಕಂಪನಿಯ ಕ್ಯಾಂಪಸ್ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮವು ಭಾರತೀಯ ಕಾಲಮಾನ ರಾತ್ರಿ 10:30ಕ್ಕೆ ಆರಂಭವಾಗಲಿದೆ. ಭಾರತದಲ್ಲಿರುವವರು ಆಪಲ್ನ ಅಧಿಕೃತ YouTube ಚಾನೆಲ್, Apple TV ಆಪ್ ಹಾಗೂ ಕಂಪನಿಯ ಅಧಿಕೃತ ವೆಬ್ಸೈಟ್ ಮೂಲಕ ಕಾರ್ಯಕ್ರಮವನ್ನು ಲೈವ್ ಆಗಿ ವೀಕ್ಷಿಸಬಹುದು.
ಈ ವರ್ಷದ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಆಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಎರಡೂ ಫೋನ್ಗಳು ಪ್ರಸ್ತುತ ಪ್ರೊ ಮಾದರಿಗಳ ವಿನ್ಯಾಸ ಮತ್ತು ಡಿಸ್ಪ್ಲೇ ಗಾತ್ರವನ್ನು ಬಹುತೇಕ ಉಳಿಸಿಕೊಂಡು, ಹಲವು ಹೊಸ ಅಪ್ಗ್ರೇಡ್ಗಳೊಂದಿಗೆ ಬರಬಹುದು ಎನ್ನಲಾಗಿದೆ. ಕಾರ್ಯಕ್ಷಮತೆಯ ವಿಚಾರದಲ್ಲಿ ಆಪಲ್ ತನ್ನ ಪ್ರೊ ಮಾದರಿಗಳಿಗೆ 2nm ಪ್ರೊಸೆಸ್ ಆಧಾರಿತ A20 Pro ಚಿಪ್ ಬಳಸಬಹುದು ಎಂಬ ವರದಿಗಳಿವೆ.
ಹಾಗೆಯೇ Dynamic Island ನ ಗಾತ್ರವನ್ನು ಮತ್ತಷ್ಟು ಕಡಿಮೆ ಮಾಡುವುದು, ವೇರಿಯಬಲ್-ಅಪರ್ಚರ್ ಕ್ಯಾಮೆರಾ ಮತ್ತು ಕ್ಯಾಮೆರಾ ಕಂಟ್ರೋಲ್ ಬಟನ್ನಲ್ಲಿ ಕೆಲವು ಬದಲಾವಣೆಗಳನ್ನು ಪರಿಚಯಿಸುವ ಸಾಧ್ಯತೆಯಿದೆ ಎಂದು ವರದಿಗಳು ಸೂಚಿಸಿವೆ.
ಕಂಪನಿಯು ನೂತನ ಐಫೋನ್ ಸರಣಿಯ ಜೊತೆಗೆ ಹೊಸ ಆಪಲ್ ವಾಚ್ ಸರಣಿ 12 ಮತ್ತು ಆಪಲ್ ವಾಚ್ ಅಲ್ಟ್ರಾ 4 ಮಾದರಿಗಳನ್ನೂ ಆಪಲ್ ಪರಿಚಯಿಸಬಹುದು ಎನ್ನಲಾಗಿದೆ. ಆಪಲ್ ವಾಚ್ ಸರಣಿ 12 ನಲ್ಲಿ ಸೆರಾಮಿಕ್ ಕೇಸ್, ಹೊಸ ಬಣ್ಣಗಳ ಆಯ್ಕೆ ಮತ್ತು ಹೆಚ್ಚುವರಿ ಆರೋಗ್ಯ ಸಂಬಂಧಿತ ಫೀಚರ್ಗಳು ಸಿಗುವ ಸಾಧ್ಯತೆಯಿದೆ. ಮತ್ತೊಂದೆಡೆ, ಆಪಲ್ ವಾಚ್ ಅಲ್ಟ್ರಾ 4 ನಲ್ಲಿ ವಿನ್ಯಾಸ ಹಾಗೂ ಸೆನ್ಸರ್ಗಳಲ್ಲಿ ಕೆಲವು ಸುಧಾರಣೆಗಳನ್ನು ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.
ಇತ್ತೀಚಿನ ಲೀಕ್ ಮಾಹಿತಿ ಪ್ರಕಾರ ಆಪಲ್ ಕಂಪನಿಯ ಮುಂಬರುವ ಐಫೋನ್ 18 ಪ್ರೊ ಮ್ಯಾಕ್ಸ್ ಡಾರ್ಕ್ ಚೆರ್ರಿ ಕಲರ್ನಲ್ಲಿ ಹಾಗೂ ಐಫೋನ್ 18 ಪ್ರೊ ಬ್ಲೂ ಕಲರ್ ಆಯ್ಕೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಲೀಕ್ ಮಾಹಿತಿ ಪ್ರಕಾರ ಐಫೋನ್ 18 ಪ್ರೊ ಫೋನ್ 6.3 ಇಂಚಿನ ಡಿಸ್ಪ್ಲೇ ಹೊಂದಿರಲಿದೆ. ಹಾಗೆಯೇ ಐಫೋನ್ 18 ಪ್ರೊ ಮ್ಯಾಕ್ಸ್ ಫೋನ್ 6.9ವಇಂಚಿನ ಡಿಸ್ಪ್ಲೇಯೊಂದಿಗೆ ಎಂಟ್ರಿ ಕೊಡಬಹುದು. ಈ ಎರಡೂ ಮಾದರಿಗಳಲ್ಲಿ LTPO Super Retina XDR OLED ಪ್ಯಾನೆಲ್ ಇರುವ ನಿರೀಕ್ಷೆಯಿದ್ದು, 120Hz ರಿಫ್ರೆಶ್ ರೇಟ್ಗೆ ಸಪೋರ್ಟ್ ನೀಡಬಹುದು ಎನ್ನಲಾಗಿದೆ. ಹಾಗೆಯೇ ಇವುಗಳಲ್ಲಿ ಆಪಲ್ನ ಹೊಸ A20 Pro ಚಿಪ್ಸೆಟ್ ಬಳಕೆಯಾಗುವ ಸಾಧ್ಯತೆಯಿದೆ. ಇದರೊಂದಿಗೆ ಆಪಲ್ನ ಕಸ್ಟಮ್ C2 ಮಾದರಿಯೂ ಇರಬಹುದು ಎನ್ನಲಾಗಿದೆ.
ಇನ್ನು ಕ್ಯಾಮೆರಾ ವಿಭಾಗದಲ್ಲಿ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಎರಡೂ ಹಿಂಭಾಗದಲ್ಲಿ ಟ್ರಿಪಲ್ 48MP ಕ್ಯಾಮೆರಾ ರಚನೆ ಪಡೆದಿರುವ ಸಾಧ್ಯತೆಯಿದೆ. ಕ್ಯಾಮೆರಾ ಹಾರ್ಡ್ವೇರ್ ಮತ್ತು ಇಮೇಜ್ ಪ್ರೊಸೆಸಿಂಗ್ನಲ್ಲಿ ಆಪಲ್ ಮತ್ತಷ್ಟು ಸುಧಾರಣೆಗಳನ್ನು ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಬ್ಯಾಟರಿ ಸಾಮರ್ಥ್ಯದಲ್ಲೂ ಈ ಬಾರಿ ಹೆಚ್ಚಳವಾಗಬಹುದು ಎನ್ನಲಾಗಿದೆ. ಐಫೋನ್ 18 ಪ್ರೊ ಮಾದರಿಯು 4,288mAh ಬ್ಯಾಟರಿ ಹೊಂದುವ ನಿರೀಕ್ಷೆಯಿದೆ. ಮತ್ತೊಂದೆಡೆ, ಐಫೋನ್ 18 ಪ್ರೊ ಮ್ಯಾಕ್ಸ್ ಮಾದರಿಯ ಬ್ಯಾಟರಿ ಸಾಮರ್ಥ್ಯ 5,425mAh ನಿಂದ 5,567mAh ನಡುವೆ ಇರಬಹುದು ಎಂದು ಸೋರಿಕೆಗಳು ಸೂಚಿಸಿವೆ.