ಟೆಕ್ ದೈತ್ಯ ಎಂದು ಗುರುತಿಸಿಕೊಂಡಿರುವ Apple ಕಂಪನಿಯು ಇತ್ತೀಚೆಗೆ ತನ್ನ App Store Connect ಪ್ಲಾಟ್‌ಫಾರ್ಮ್‌ಗೆ ಮಹತ್ವದ ಅಪ್‌ಡೇಟ್ ಅನ್ನು ನೀಡಿದೆ. ಜಾಗತಿಕ ಬಳಕೆದಾರರನ್ನು ಇನ್ನಷ್ಟು ಸುಲಭವಾಗಿ ತಲುಪುವ ಉದ್ದೇಶದಿಂದ ಆಪಲ್ ಕಂಪನಿ ಇದೀಗ 11 ಹೊಸ ಭಾಷೆಗಳ ಬೆಂಬಲವನ್ನು ಸೇರಿಸಿದೆ. ಇದರೊಂದಿಗೆ ಆಪಲ್ ಕಂಪನಿಯ App Store ಈಗ ಒಟ್ಟು 50 ಭಾಷೆಗಳಿಗೆ ಸಪೋರ್ಟ್ ನೀಡುವಂತಾಗಿದೆ. ಇದೇ ಮಾರ್ಚ್ 31 ರಂದು Apple ಈ ಪ್ರಮುಖ ಬದಲಾವಣೆಯನ್ನು ಅಧಿಕೃತವಾಗಿ ಘೋಷಿಸಿದೆ. ಹಾಗಾದರೆ ಆಪಲ್ ಆಪ್ ಸ್ಟೋರ್ ಸೇರಿರುವ ಹೊಸ ಭಾಷೆಗಳು ಯಾವುವು ಹಾಗೂ ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : POCO M7 Plus ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಬಿಗ್ ಡಿಸ್ಕೌಂಟ್! ಆಫರ್ ಬೆಲೆ ನೋಡಿ
ಆಪಲ್ ಸಂಸ್ಥೆಯ ಈ ಹೊಸ ಅಪ್‌ಡೇಟ್‌ನಲ್ಲಿನ ಪ್ರಮುಖ ಹೈಲೈಟ್ ಎಂದರೆ ಹೊಸದಾಗಿ ಸೇರಿಸಲಾದ 11 ಭಾಷೆಗಳ ಪಟ್ಟಿಯಲ್ಲಿ ಕನ್ನಡಕ್ಕೂ ಸ್ಥಾನ ದೊರೆತಿರುವುದು. ಇದು ಕನ್ನಡ ಬಳಕೆದಾರರಿಗೆ ಸಂತಸದ ಸುದ್ದಿ. ಈಗ ಈ ಅಪ್‌ಡೇಟ್‌ನ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳೋಣ ಹಾಗೂ ಯಾವ ಯಾವ ಭಾಷೆಗಳು ಸೇರಿಸಲಾಗಿದೆ ಎಂಬುದನ್ನು ನೋಡೋಣ.
ಆಪಲ್ ಕಂಪನಿಯ ಪ್ರಾಥಮಿಕವಾಗಿ ದಕ್ಷಿಣ ಏಷ್ಯಾ ಮತ್ತು ಯುರೋಪಿನ ಕೆಲವು ಪ್ರದೇಶಗಳಲ್ಲಿನ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಈ ಭಾಷೆಗಳನ್ನು ಸೇರಿಸಿದೆ. ಹೊಸ ಭಾಷೆಗಳು:
– ಕನ್ನಡ
– ಗುಜರಾತಿ
– ಬಾಂಗ್ಲಾ
– ಮಲಯಾಳಂ
– ಮರಾಠಿ
– ಒಡಿಯಾ
– ಪಂಜಾಬಿ
– ತಮಿಳು
– ತೆಲುಗು
– ಉರ್ದು
– ಸ್ಲೊವೇನಿಯನ್
ಸ್ಥಳೀಯ ಭಾಷೆಗಳ ಬಳಕೆಯ ಬಳಕೆದಾರರಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಆಪ್ ಅಭಿವೃದ್ಧಿಪಡಿಸುವ ಡೆವಲಪರ್‌ಗಳು ತಮ್ಮ ಆಪ್‌ಗಳ ಹೆಸರು, ಅಪ್ಲಿಕೇಶನ್ ಹೆಸರು, ವಿವರಣೆ, ಸ್ಕ್ರೀನ್‌ಶಾಟ್‌ಗಳು ಮತ್ತು ಇತರ ಸಂಬಂಧಿತ ವಿವರಗಳಂತಹ ವಿಷಯಗಳನ್ನು ಕನ್ನಡ ಸೇರಿದಂತೆ ಹೊಸದಾಗಿ ಸೇರಿದ 11 ಭಾಷೆಗಳಲ್ಲಿ ನೇರವಾಗಿ ಸೇರ್ಪಡೆ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಬಳಕೆದಾರರು ಆಪ್ ಸ್ಟೋರ್‌ನಲ್ಲಿ ಯಾವುದಾದರೂ ಆಪ್ ಸರ್ಚ್ ಮಾಡುವಾಗ ಅದರ ಎಲ್ಲಾ ಮಾಹಿತಿಯನ್ನು ತಮ್ಮದೇ ಸ್ಥಳೀಯ ಭಾಷೆಯಲ್ಲಿ ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಇದು ಆಪ್ ಬಳಸುವ ಅನುಭವವನ್ನು ಇನ್ನಷ್ಟು ಸುಗಮ ಮತ್ತು ಬಳಕೆದಾರ ಸ್ನೇಹಿಯಾಗಿಸುತ್ತದೆ.