airtel announced adobe express access to all users
Airtel ಕಂಪನಿಯು ದೇಶದ ಎರಡನೇ ದೊಡ್ಡ ಟೆಲಿಕಾಂ ಸಂಸ್ಥೆಯಾಗಿ ಬಿಂಬಿತವಾಗಿದೆ. ಈಗಾಗಲೇ ಹಲವು ಬೊಂಬಾಟ್ ಯೋಜನೆಗಳ ಮೂಲಕ ತನ್ನದೇ ಚಂದಾದಾರರ ಬಳಗ ಹೊಂದಿರುವ Airtel ಇದೀಗ ತನ್ನ ಗ್ರಾಹಕರಿಗಾಗಿ ಆಕರ್ಷಕ ಕೊಡುಗೆಯೊಂದನ್ನು ಪ್ರಕಟಿಸಿದೆ. ಹೌದು, ಏರ್‌ಟೆಲ್ ಟೆಲಿಕಾಂ ಒಂದು ವರ್ಷದ ವರೆಗೆ Adobe Express Premium ಉಚಿತ ಆಕ್ಸಸ್ ಅನ್ನು ನೀಡುವುದಾಗಿದೆ ಘೋಷಿಸಿದೆ. ಅಂದಹಾಗೆ ಒಂದು ವರ್ಷದ Adobe Express Premium ಚಂದಾದಾರಿಕೆಯ ಮೌಲ್ಯ ಸುಮಾರು 4,000 ರೂಗಳು ಆಗಿದೆ. ಅದಾಗ್ಯೂ ಏರ್‌ಟೆಲ್ ಟೆಲಿಕಾಂ ಈ ಚಂದಾದಾರಿಕೆಯನ್ನು ಸಂಪೂರ್ಣವಾಗಿ ಉಚಿತವಾಗಿ ನೀಡುತ್ತಿರುವುದು ಬಳಕೆದಾರರಿಗೆ ಖುಷಿ ಎನಿಸಿದೆ. ಈ ಕೊಡುಗೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Realme Buds Clip: 36 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್ ನೀಡುವ ಬೊಂಬಾಟ್ ಇಯರ್‌ಬಡ್ಸ್ ಬಿಡುಗಡೆ
Airtel ಟೆಲಿಕಾಂ ಘೋಷಿಸಿರುವ ಒಂದು ವರ್ಷದ ವರೆಗೆ Adobe Express Premium ಉಚಿತ ಆಕ್ಸಸ್ ಕೊಡುಗೆಯು ಏರ್‌ಟೆಲ್‌ನ ಎಲ್ಲ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಹೊಸ ಕೊಡುಗೆ ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ಮಾತ್ರ ಸೀಮಿತವಾಗಿಲ್ಲ ಬದಲಿಗೆ Airtel ಟೆಲಿಕಾಂ ಮೊಬೈಲ್, Wi-Fi ಮತ್ತು DTH ಸೇರಿದಂತೆ ಎಲ್ಲಾ ಚಂದಾದಾರರಿಗೆ ಲಭ್ಯವಿದೆ ಎನ್ನಲಾಗಿದೆ. ಬಳಕೆದಾರರು ಯಾವುದೇ ಏರ್‌ಟೆಲ್ ಕನೆಕ್ಷನ್ ಪಡೆದಿದ್ದರೂ ಸಹ ಅವರಿಗೆ ಈ ಕೊಡುಗೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಇನ್ನು ಬಳಕೆದಾರರು ಈ ಕೊಡುಗೆಯನ್ನು ಪಡೆಯಲು ತಮ್ಮ ಫೋನ್‌ನಲ್ಲಿ Airtel Thanks app ಅನ್ನು ಡೌನ್‌ಲೋಡ್ ಮಾಡ ಬೇಕು ಮತ್ತು ಏರ್‌ಟೆಲ್ ಸಂಖ್ಯೆಯೊಂದಿಗೆ ಲಾಗಿನ್ ಮಾಡಬೇಕು. ಆ ಬಳಿಕ ರಿವಾರ್ಡ್ ವಿಭಾಗದ ಆಯ್ಕೆಗೆ ಹೋಗಿ ಅಲ್ಲಿ Adobe Express Premium ಕೊಡುಗೆಯನ್ನು ಪಡೆದುಕೊಳ್ಳಬಹುದು.
Adobe Express Premium ನಲ್ಲಿ ಫೋಟೋಗಳನ್ನು ಕ್ರಿಯೆಟ್ ಮಾಡಲು ಮತ್ತು ಎಡಿಟ್ ಮಾಡಲು ಸಹಾಯ ಮಾಡುವ AI ಆಧಾರಿತ ಆಯ್ಕೆಗಳು ಲಭ್ಯ ಇವೆ. ಹಾಗೆಯೇ ಇದು ತ್ವರಿತವಾಗಿ background removal, ಕಸ್ಟಮ್ ಇಮೇಜ್ ಮಾಡಲು ಮತ್ತು ಒಂದು-ಟ್ಯಾಪ್ ವೀಡಿಯೊ ಎಡಿಟ್ ಮಾಡಲು ಸೇರಿದಂತೆ AI ಚಾಲಿತ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ. ಅಲ್ಲದೇ ಈ ಚಂದಾದಾರಿಕೆಯು ಪ್ರೀಮಿಯಂ ಅಡೋಬ್ 30,000 ಕ್ಕೂ ಹೆಚ್ಚು ವೃತ್ತಿಪರ ಫಾಂಟ್‌ಗಳು, 100GB ಕ್ಲೌಡ್ ಸ್ಟೋರೇಜ್ ಮತ್ತು ಆಟೋ ಕ್ಯಾಪ್ಷನ್ ಮತ್ತು ಇನ್‌ಸ್ಟಂಟ್ resize ನಂತಹ ಅಪ್‌ಡೇಟ್ ಆಯ್ಕೆಗಳನ್ನು ಸಹ ಒಳಗೊಂಡಿದೆ. ವಿಶೇಷ ಅಂದ್ರೆ, ಅಡೋಬ್ ಎಕ್ಸ್‌ಪ್ರೆಸ್ ಪ್ರೀಮಿಯಂ ಚಂದಾದಾರಿಕೆಯು ಸಾವಿರಾರು ವೃತ್ತಿಪರ ವಿನ್ಯಾಸ templates ಗಳಿಗೆ ಪ್ರವೇಶವನ್ನು ನೀಡುತ್ತದೆ. ಆ ಪೈಕಿ ಭಾರತೀಯ ಹಬ್ಬಗಳು, ಮದುವೆಗಳು ಮತ್ತು ಲೋಕಲ್ ಬಿಸಿನೆಸ್‌ಗಳಿಗೆ ಸಂಬಂಧಿಸಿದ ಟೆಂಪ್ಲೇಟ್‌ಗಳು ಸೇರಿವೆ. ಈ ಕೊಡುಗೆ ನೀಡುವ ಮೂಲಕ ಏರ್‌ಟೆಲ್ ತನ್ನ ಗ್ರಾಹಕರ ಕೈಗೆ AI ತಂತ್ರಜ್ಞಾನವನ್ನು ಉಚಿತವಾಗಿ ತಲುಪಿಸುತ್ತಿದೆ.