ಭಾರತದಲ್ಲಿ Zebronics ನಿಂದ ಎರಡು ಹೊಸ ಸೌಂಡ್‌ಬಾರ್‌ ಬಿಡುಗಡೆ! ಬೆಲೆ ಮತ್ತು ಫೀಚರ್ಸ್‌ ತಿಳಿಯಿರಿ

Updated on 05-Feb-2026
HIGHLIGHTS

Zebronics ಕಂಪನಿಯಿಂದ ಎರಡು ಹೊಸ ಸೌಂಡ್‌ಬಾರ್‌ ಬಿಡುಗಡೆ

Juke Bar 9300 ಮತ್ತು Juke Bar 9010C ಡಿವೈಸ್‌ ಡಾಲ್ಬಿ ಸಪೋರ್ಟ್ ಹೊಂದಿವೆ

Juke Bar 9300 ಮತ್ತು Juke Bar 9010C ಡಿವೈಸ್‌ಗಳು Amazon ಮತ್ತು Flipkart ನಲ್ಲಿ ಖರೀದಿಗೆ ಲಭ್ಯವಿರಲಿವೆ

ಪ್ರಮುಖ ಆಡಿಯೋ ಉತ್ಪನ್ನಗಳ ತಯಾರಿಕಾ ಸಂಸ್ಥೆ ಎನಿಸಿರುವ Zebronics ಕಂಪನಿಯು ಭಾರತದಲ್ಲಿ Juke Bar 9300 ಸೌಂಡ್‌ಬಾರ್‌ ಸಿಸ್ಟಮ್‌ ಮತ್ತು Juke Bar 9010C ಹೆಸರಿನ ಸೌಂಡ್‌ಬಾರ್‌ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ಸಂಸ್ಥೆಯು ತನ್ನ ಆಡಿಯೋ ಉತ್ಪನ್ನಗಳ ಶ್ರೇಣಿಯನ್ನು ವಿಸ್ತರಿಸಿದೆ. ನೂತನ Zebronics Juke Bar 9300 ಡಿವೈಸ್‌ 5.1 ಚಾನೆಲ್ ಸೌಂಡ್‌ಬಾರ್ ಆಗಿದ್ದು, ಮನೆಯಲ್ಲಿ ಥಿಯೇಟರ್‌ನಂತಹ ಅನುಭವ ಬಯಸುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಇದು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹೆಚ್ಚಿನ ಔಟ್‌ಪುಟ್‌ ಆಡಿಯೋ ಸಪೋರ್ಟ್‌ ಒಳಗೊಂಡಿರುವ ಈ ಸೌಂಡ್‌ಬಾರ್‌ ಸಾಧನವು ಗ್ರಾಹಕರಿಗೆ ಕೈಗೆಟುವ ಪ್ರೈಸ್‌ಟ್ಯಾಗ್‌ನಲ್ಲಿ ಲಭ್ಯ. ಹಾಗಾದರೆ Zebronics Juke Bar 9300 ಮತ್ತು Juke Bar 9010C ಸೌಂಡ್‌ಬಾರ್‌ಗಳ ಫೀಚರ್ಸ್ ಹಾಗೂ ಬೆಲೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : Vivo V50 5G ಮೊಬೈಲ್‌ ಈಗ ಕಡಿಮೆ ಬೆಲೆಗೆ ಲಭ್ಯ! ಡ್ಯುಯಲ್‌ ಕ್ಯಾಮೆರಾ, ಬಿಗ್ ಬ್ಯಾಟರಿ ಫೀಚರ್ಸ್‌ ಇವೆ

Zebronics Juke Bar 9300 ಲಭ್ಯತೆ ಹಾಗೂ ಬೆಲೆ

Zebronics ಸಂಸ್ಥೆಯು ಈಗಾಗಲೇ ಮಾರುಕಟ್ಟೆಗೆ ಹಲವು ಆಡಿಯೋ ಉತ್ಪನ್ನಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಅಲ್ಲದೇ ಮಾರುಕಟ್ಟೆಯಲ್ಲಿ ಸಂಸ್ಥೆಯ ಕೆಲವು ಸ್ಪೀಕರ್ ಮಾಡೆಲ್‌ಗಳು ಸದ್ದು ಮಾಡುತ್ತಿವೆ. ಆ ಸಾಲಿಗೆ ಈಗ Zebronics Juke Bar 9300 ಹಾಗೂ Juke Bar 9010C ಡಿವೈಸ್‌ ಸಹ ಸೇರಿದೆ. ಹೊಸ Juke Bar 9300 ಸೌಂಡ್‌ಬಾರ್‌ ಪರಿಚಯಾತ್ಮಕ ಬೆಲೆ 9,999 ರೂಗಳು ಆಗಿದೆ. ಅದೇ ರೀತಿ Juke Bar 9300 ಸೌಂಡ್‌ಬಾರ್‌ ಪರಿಚಯಾತ್ಮಕ ಬೆಲೆ 6,999 ರೂಗಳು ಆಗಿದೆ. ಇನ್ನು ಗ್ರಾಹಕರು Amazon ಮತ್ತು Flipkart ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳ ಮೂಲಕ ಖರೀದಿಸಬಹುದಾಗಿದೆ.

Zebronics Juke Bar 9300 ಫೀಚರ್ಸ್‌ ಹೀಗಿವೆ

ಹೊಸ Zebronics Juke Bar 9300 ಸೌಂಡ್‌ಬಾರ್‌ 380W RMS ಔಟ್‌ಪುಟ್ ಆಡಿಯೋ ವ್ಯವಸ್ಥೆ ಒಳಗೊಂಡಿದೆ. ಅಲ್ಲದೇ ಇದು ಟ್ರಿಪಲ್ ಡ್ರೈವರ್ ಸೌಂಡ್‌ಬಾರ್ ಆಗಿದ್ದು, ಡ್ಯುಯಲ್ ರಿಯರ್ ಸ್ಯಾಟಲೈಟ್ ಸ್ಪೀಕರ್‌ಗಳು ಹಾಗೂ 13.33 ಸೆಂ.ಮೀ ಸಬ್ ವೂಫರ್ ಅನ್ನು ಸಹ ಪಡೆದುಕೊಂಡಿದೆ. ಮುಖ್ಯವಾಗಿ ಇದನ್ನು ಸಿನಿಮಾಗಳು, ಕ್ರೀಡೆಗಳು, ಗೇಮಿಂಗ್ ಮತ್ತು ದೈನಂದಿನ ಟಿವಿ ವೀಕ್ಷಣೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸ ಮಾಡಲಾಗಿದೆ. ಈ ನೂತನ ಸೌಂಡ್‌ಬಾರ್‌ Dolby ಆಡಿಯೊವನ್ನು ಸಹ ಸಪೋರ್ಟ್ ಮಾಡುತ್ತದೆ. ಸಂಸ್ಥೆಯ Juke Bar 9300 ಸೌಂಡ್‌ಬಾರ್‌ ಅನ್ನು ಬ್ಲೂಟೂತ್ v5.4, HDMI ARC, ಆಪ್ಟಿಕಲ್ IN, USB ಮತ್ತು AUX ಇನ್‌ಪುಟ್‌ಗಳೊಂದಿಗೆ ಕನೆಕ್ಟ್ ಮಾಡಬಹುದಾದ ಆಯ್ಕೆಗಳಿವೆ. ಬಳಕೆದಾರರಿಗೆ ಟಿವಿಗಳು, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಇತರ ಡಿವೈಸ್‌ಗಳಿಗೆ ಇದನ್ನು ಕನೆಕ್ಟ್ನ ಮಾಡಲು ಆಯ್ಕೆಗಳು ಇವೆ.

Zebronics Juke Bar 9010C ಫೀಚರ್ಸ್‌ ಮಾಹಿತಿ

Zebronics Juke Bar 9010C ಸೌಂಡ್‌ಬಾರ್‌ ಸಹ ಆಕರ್ಷಕ ಫೀಚರ್ಸ್‌ಗಳೊಂದಿಗೆ ಲಾಂಚ್ ಆಗಿದೆ. ಈ ಡಿವೈಸ್‌ 140W RMS ಔಟ್‌ಪುಟ್ ಆಡಿಯೋ ಅನ್ನು ಒದಗಿಸಬಲ್ಲದು. ಅಲ್ಲದೇ ಇದು Dolby ಆಡಿಯೊ ಸಪೋರ್ಟ್‌ ಮತ್ತು ಹೆಚ್ಚಿನ bass ಗಾಗಿ 13.33 ಸೆಂ.ಮೀ ಸಬ್ ವೂಫರ್‌ ಒಳಗೊಂಡಿದೆ. ಇನ್ನು ಈ ಡಿವೈಸ್‌ ಡ್ಯುಯಲ್ ಡ್ರೈವರ್ ಸೌಂಡ್‌ಬಾರ್ ವಿನ್ಯಾಸ ಹೊಂದಿರುವ ಜೊತೆಗೆ ಬ್ಲೂಟೂತ್ v5.4, HDMI ARC, ಆಪ್ಟಿಕಲ್ IN, USB ಮತ್ತು AUX ಇನ್‌ಪುಟ್‌ಗಳೊಂದಿಗೆ ಕನೆಕ್ಟ್ ಆಯ್ಕೆಗಳನ್ನು ನೀಡುತ್ತದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :