ಜನಪ್ರಿಯ ಒನ್‌ಪ್ಲಸ್ ಸಂಸ್ಥೆಯು ಇಂದು (ಮಾರ್ಚ್ 20 ರಂದು) ಭಾರತದಲ್ಲಿ OnePlus Nord Buds 4 Pro ಟ್ರೂ ವೈರ್‌ಲೆಸ್ ಸ್ಟೀರಿಯೊ (TWS) ಇಯರ್‌ಬಡ್ಸ್ ಅನ್ನು ಬಿಡುಗಡೆ ಮಾಡಿದೆ. ಈ ಇಯರ್‌ಬಡ್ಸ್ 12mm ಡ್ರೈವರ್‌ಗಳು ಒಳಗೊಂಡಿರುವ ಜೊತೆಗೆ ಬ್ಲೂಟೂತ್ 6.0 ಅನ್ನು ಸಪೋರ್ಟ್ ಮಾಡುತ್ತದೆ. ಈ ನೂತನ ಇಯರ್‌ಬಡ್ಸ್ ಚಾರ್ಜಿಂಗ್ ಕೇಸ್ 530mAh ಬ್ಯಾಟರಿ ಬ್ಯಾಕ್‌ಅಪ್ ಹೊಂದಿದೆ. ಹಾಗೆಯೇ ಈ ಇಯರ್‌ಫೋನ್ಸ್ ರೇಡಿಯಂಟ್ ಗ್ರೇ ಮತ್ತು ರಾವೆನ್ ಬ್ಲ್ಯಾಕ್ ಕಲರ್ ಆಯ್ಕೆಯಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಹಾಗಾದರೆ ಒನ್‌ಪ್ಲಸ್ ನಾರ್ಡ್ ಬಡ್ಸ್ 4 ಪ್ರೊ ಇಯರ್‌ಬಡ್ಸ್ ಡಿವೈಸ್‌ನ ಬೆಲೆ ಹಾಗೂ ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.
Also Read : ನಾಳೆ Samsung Galaxy M17e 5G ಸೇಲ್ ಪ್ರಾರಂಭ! ಬೆಲೆ ಹಾಗೂ ಆಫರ್ ಮಾಹಿತಿ
ಭಾರತದಲ್ಲಿ ಹೊಸದಾಗಿ ಎಂಟ್ರಿ ಕೊಟ್ಟಿರುವ ಒನ್‌ಪ್ಲಸ್ ನಾರ್ಡ್ ಬಡ್ಸ್ 4 ಪ್ರೊ ಇಯರ್‌ಬಡ್ಸ್ ಡಿವೈಸ್ ಬೆಲೆ 3,999 ರೂ.ಗಳು ಆಗಿದೆ. ಆದರೆ ಸದ್ಯ ಸೀಮಿತ ಅವಧಿಯ ವರೆಗೆ 3,799 ರೂ.ಗಳ ಆರಂಭಿಕ ಲಾಂಚ್ ಆಫರ್ ಬೆಲೆಯಲ್ಲಿ ಲಭ್ಯವಿರುತ್ತದೆ. ಇನ್ನು ಈ ಡಿವೈಸ್‌ನ ಮಾರಾಟವು ಇದೇ ಮಾರ್ಚ್ 23 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭ ಆಗಲಿದೆ. ಇನ್ನು ಆಸಕ್ತ ಗ್ರಾಹಕರು ಈ ಡಿವೈಸ್ ಅನ್ನು ಒನ್‌ಪ್ಲಸ್ ವೆಬ್‌ಸೈಟ್, ಒನ್‌ಪ್ಲಸ್ ಸ್ಟೋರ್ ಆಪ್, ಒನ್‌ಪ್ಲಸ್ ಎಕ್ಸ್‌ಪೀರಿಯೆನ್ಸ್ ಸ್ಟೋರ್‌ಗಳು, ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು Myntra ತಾಣಗಳ ಮೂಲಕ ಖರೀದಿಸಬಹುದು. ಅಂದಹಾಗೆ ಈ ಡಿವೈಸ್ ರೇಡಿಯಂಟ್ ಗ್ರೇ ಮತ್ತು ರಾವೆನ್ ಬ್ಲ್ಯಾಕ್ ಕಲರ್ ಆಯ್ಕೆಗಳನ್ನು ಪಡೆದುಕೊಂಡಿದೆ.
ಒನ್‌ಪ್ಲಸ್ ನಾರ್ಡ್ ಬಡ್ಸ್ 4 ಪ್ರೊ ಇಯರ್‌ಬಡ್‌ಗಳು ಟೈಟಾನಿಯಂ ಕೋಟಿಂಗ್ ಹೊಂದಿವೆ. ಹಾಗೆಯೇ ಇವು 12mm ಡೈನಾಮಿಕ್ ಡ್ರೈವರ್‌ಗಳನ್ನು ಒಳಗೊಂಡಿದ್ದು, ಸ್ಪಷ್ಟ ಆಡಿಯೋ ಔಟ್‌ಪುಟ್ ನೀಡುತ್ತವೆ. ಹಾಗೆಯೇ ಈ ಡಿವೈಸ್‌ನ ಬಡ್ಸ್ 20Hz ನಿಂದ 40kHz ವರೆಗಿನ ಫ್ರಿಕ್ವೇನ್ಸಿ ಶ್ರೇಣಿಯನ್ನು ಹೊಂದಿದ್ದು 122dB ವರೆಗಿನ ಡ್ರೈವರ್ ಸೆನ್ಸಿಟೀವಿಟಿ ಅನ್ನು ನೀಡುತ್ತವೆ. ಅಲ್ಲದೇ ಇದು 55dB ವರೆಗಿನ ಸಕ್ರಿಯ ಶಬ್ದ ರದ್ದತಿಯನ್ನು ಸಪೋರ್ಟ್ ಮಾಡುತ್ತದೆ ಜೊತೆಗೆ AI ಸಪೋರ್ಟ್ ಒಳಗೊಂಡಿದೆ. ಇದರೊಂದಿಗೆ ಕನೆಕ್ಟಿವಿಟಿಗಾಗಿ ನಾರ್ಡ್ ಬಡ್ಸ್ 4 ಪ್ರೊ ಇಯರ್‌ಬಡ್ಸ್ LHDC 5.0, AAC ಮತ್ತು SBC ಕೊಡೆಕ್‌ಗಳೊಂದಿಗೆ ಬ್ಲೂಟೂತ್ 6.0 ಅನ್ನು ಸಪೋರ್ಟ್ ಮಾಡುತ್ತದೆ.
ಈ ನೂತನ ಇಯರ್‌ಬಡ್ಸ್ ಗೂಗಲ್ ಫಾಸ್ಟ್ ಪೇರ್, ಮೈಕ್ರೋಸಾಫ್ಟ್ ಸ್ವಿಫ್ಟ್ ಪೇರ್ ಮತ್ತು ಡ್ಯುಯಲ್ ಡಿವೈಸ್ ಕನೆಕ್ಟಿವಿಟಿಯನ್ನು ಸಹ ಸಪೋರ್ಟ್ ಮಾಡುತ್ತದೆ. ಈ ಡಿವೈಸ್‌ನ ಬಡ್ಸ್ AI ಅಸಿಸ್ಟಂಟ್ ಅನ್ನು ಒಳಗೊಂಡಿರುವ ಜೊತೆಗೆ HeyMelody ಅಪ್ಲಿಕೇಶನ್ ಮೂಲಕ AI ಅನುವಾದವನ್ನು ಸಕ್ರಿಯಗೊಳಿಸುತ್ತವೆ. ಇದರೊಂದಿಗೆ Spotify ಟ್ಯಾಪ್ ಅನ್ನು ಸಹ ಸಪೋರ್ಟ್ ಮಾಡುತ್ತವೆ. ಅಲ್ಲದೇ ಗೆಸ್ಚರ್‌ಗಳನ್ನು ಆಯ್ಕೆಗಳನ್ನು ಕೂಡಾ ಪಡೆದುಕೊಂಡಿದೆ. ಇನ್ನು ಈ ಡಿವೈಸ್‌ನ ಪ್ರತಿ ಬಡ್ಸ್ 62mAh ಬ್ಯಾಟರಿಯನ್ನು ಹೊಂದಿದ್ದರೆ ಅದರ ಚಾರ್ಜಿಂಗ್ ಕೇಸ್ 530mAh ಬ್ಯಾಟರಿ ಸೌಲಭ್ಯ ಪಡೆದುಕೊಂಡಿದೆ.