ಕಡಿಮೆ ಬೆಲೆಯಲ್ಲಿ ಒಂದು ಅತ್ಯುತ್ತಮ Soundbar ಹುಡುಕುತ್ತಿದ್ದರೆ, ಇಲ್ಲಿ ಗಮನಿಸಿ. Motorola ಸಂಸ್ಥೆಯ ಈ ಸೌಂಡ್‌ಬಾರ್ ಭರ್ಜರಿ ಡಿಸ್ಕೌಂಟ್ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. 5.1 Channel ಸೌಲಭ್ಯದ ಜೊತೆಗೆ 500W ಸೌಂಡ್ ಔಟ್‌ಪುಟ್ ಆಯ್ಕೆ ಪಡೆದಿರುವ ಮೊಟೊರೊಲಾ ಕಂಪನಿಯ ಈ Soundbar ದೈತ್ಯ ಇ ಕಾಮರ್ಸ್ ಪ್ಲಾಟ್‌ಫಾರ್ಮ್ Flipkart ನಲ್ಲಿ ಶೇ 78% ರಷ್ಟು ರಿಯಾಯಿತಿ ದರದಲ್ಲಿ ಸಿಗಲಿದೆ. ಗ್ರಾಹಕರು BOBCARD EMI ಸೌಲಭ್ಯದ ಮೂಲಕ ಹೆಚ್ಚುವರಿ ಡಿಸ್ಕೌಂಟ್ ಸಹ ಪಡೆದುಕೊಳ್ಳಬಹುದು. ಹಾಗಾದರೇ ಫ್ಲಿಪ್‌ಕಾರ್ಟ್ ಇ ಕಾಮರ್ಸ್‌ನಲ್ಲಿ Motorola ಸಂಸ್ಥೆಯ ಸೌಂಡ್‌ಬಾರ್‌ಗೆ ಲಭ್ಯ ಇರುವ ಕೊಡುಗೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : 43 ಇಂಚಿನ ಈ LG ಸ್ಮಾರ್ಟ್‌ಟಿವಿ ಬೆಲೆ ಇಳಿಕೆ! ಬ್ಯಾಂಕ್ ಆಫರ್ ಮೂಲಕ ಇನ್ನಷ್ಟು ಡಿಸ್ಕೌಂಟ್ ಪಡೆಯಬಹುದು
ಮೊಟೊರೊಲಾ ಸಂಸ್ಥೆಯ AmphisoundX ಸೌಂಡ್‌ಬಾರ್ ಇದೀಗ ಆಕರ್ಷಕ ರಿಯಾಯಿತಿ ಪಡೆದಿದೆ. ಫ್ಲಿಪ್‌ಕಾರ್ಟ್ ಇ ಕಾಮರ್ಸ್‌ನಲ್ಲಿ ಪ್ಲಾಟ್‌ಫಾರ್ಮ್ ನಲ್ಲಿ ಈ ಸೌಂಡ್‌ಬಾರ್ ಮೂಲ ಬೆಲೆ 37,999 ರೂಗಳು ಆಗಿದ್ದು ಸದ್ಯ 7,999 ರೂಗಳ ಆಫರ್ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಆಸಕ್ತ ಗ್ರಾಹಕರು BOBCARD EMI ವಹಿವಾಟಿನ ಮೂಲಕ ಖರೀದಿಸಿದರೆ ಶೇ 10% ರಷ್ಟು ಅಂದರೆ 1,500 ರೂಗಳ ವರೆಗೆ ರಿಯಾಯಿತಿ ಪಡೆಯಬಹುದಾಗಿದೆ. ಇದಲ್ಲದೇ ಇತರೆ ಆಯ್ದ ಬ್ಯಾಂಕ್‌ಗಳ ರಿಯಾಯಿತಿ ಸಹ ಪಡೆಯಬಹುದಾಗಿದೆ.
ಮೊಟೊರೊಲಾ ಕಂಪನಿಯು ಈ ಸೌಂಡ್‌ಬಾರ್ 5.1 Channel ಸೌಲಭ್ಯ ಪಡೆದಿದ್ದು ಇದು 500W ಬ್ಲೂಟೂತ್ ಕನೆಕ್ಟಿವಿಟಿ ಸೌಲಭ್ಯ ಹೊಂದಿದೆ. ಇನ್ನು ಸ್ಲಿಕ್ ಹಾಗೂ ಮಾಡರ್ನ್ ವಿನ್ಯಾಸದ ರಚನೆ ಪಡೆದಿರುವ ಈ ಸೌಂಡ್‌ಬಾರ್ LED ಡಿಸ್‌ಪ್ಲೇ ಆಯ್ಕೆಯನ್ನು ಕೂಡಾ ಒಳಗೊಂಡಿದೆ. ವಾಲ್ ಮೌಂಟೆಬಲ್ ಆಯ್ಕೆಯನ್ನು ಹೊಂದಿದೆ. ಕ್ರಿಸ್ಟಲ್ ಕ್ಲಿಯರ್ ಆಡಿಯೋ ವ್ಯವಸ್ಥೆಯನ್ನು ಒಳಗೊಂಡಿರುವ ಜೊತೆಗೆ 3D ಆಡಿಯೋ ಸಪೋರ್ಟ್ ಪಡೆದುಕೊಂಡಿದೆ. ಇದು HDMI ARC, 4K ಸೌಂಡ್‌ಔಟ್ ಪುಟ್, ಟಿವಿ ರಿಮೋಟ್ ಸಿಂಕ್ ನಂತಹ ಸೌಲಭ್ಯಗಳನ್ನು ಒಳಗೊಂಡಿದೆ.
ಈ ಸೌಂಡ್‌ಬಾರ್ ಮೂರು ಆಡಿಯೋ ಮೋಡ್ ಆಯ್ಕೆಗಳನ್ನು ಒಳಗೊಂಡಿದ್ದು, ಬಟನ್ ಮೂಲಕ ಸುಲಭವಾಗಿ BASS ಹಾಗೂ ಟ್ರಬಲ್ ಸೆಟ್ಟಿಂಗ್ ಮಾಡಬಹುದಾಗಿದೆ. ಹಾಗೆಯೇ 3D ಸರೌಂಡಿಂಗ್ ಸೌಂಡ್ ಆಯ್ಕೆ ಮೂಲಕ ಇದು ಮನೆಯಲ್ಲಿಯೇ ಥೇಯಟರ್ ಅನುಭವ ನೀಡುವಂತಹ ಆಯ್ಕೆ ಪಡೆದಿದೆ. ಅಲ್ಲದೇ ಸಬ್ ವೂಫರ್ ಸಹ ಇದೆ. ಇದು AC ಅಡಾಪ್ಟರ್ ಒಳಗೊಂಡಿದೆ. ಅಲ್ಲದೇ ಈ ಸೌಂಡ್‌ಬಾರ್ ಬಾಕ್ಸ್‌ನಲ್ಲಿ 1 ಸೌಂಡ್‌ಬಾರ್, ಮುಖ್ಯ ಸೌಂಡ್‌ಬಾರ್‌ಗೆ ಕನೆಕ್ಟ್ ಮಾಡಲು ಕೇಬಲ್‌ನೊಂದಿಗೆ 1 ಸಬ್‌ವೂಫರ್ ಇರುತ್ತದೆ. ಹಾಗೆಯೇ ಮುಖ್ಯ ಸೌಂಡ್‌ಬಾರ್‌ಗೆ ಕನೆಕ್ಟ್ ಮಾಡಲು ಕೇಬಲ್‌ಗಳ ಜೊತೆಗೆ ಸಣ್ಣ ಸ್ಪೀಕರ್‌ಗಳ ಜೋಡಿ, ರಿಮೋಟ್ ಕಂಟ್ರೋಲ್, ಬಳಕೆದಾರ ಕೈಪಿಡಿ, AUX ಕೇಬಲ್, ಪವರ್ ಕೇಬಲ್ ಹಾಗೂ ಗೋಡೆಗೆ ಜೋಡಿಸುವ ಸ್ಕ್ರೂಗಳು ಇರಲಿವೆ.