ಭಾರತದಲ್ಲಿ JBL ಕಂಪನಿಯಿಂದ ಹೊಸ ಸೌಂಡ್‌ಬಾರ್ ಸರಣಿ ಬಿಡುಗಡೆ! ಬೆಲೆ ಹಾಗೂ ಫೀಚರ್ಸ್
ಜನಪ್ರಿಯ ಆಡಿಯೋ ಉತ್ಪನ್ನಗಳ ಕಂಪನಿ JBL ಇದೀಗ ಭಾರತದಲ್ಲಿ ಹೊಸದಾಗಿ MK2 ಸೌಂಡ್‌ಬಾರ್ ಸರಣಿಯನ್ನು ಬಿಡುಗಡೆ ಮಾಡಿದೆ. ಈ ನೂತನ ಸರಣಿಯಲ್ಲಿ ಜೆಬಿಎಲ್ ಬಾರ್ 1300MK2, 1000MK2, 800MK2 ಮತ್ತು 500MK2 ಡಿವೈಸ್‌ಗಳು ಸೇರಿವೆ. ಈ ಎಲ್ಲ ನೂತನ ಡಿವೈಸ್‌ಗಳು ಡಾಲ್ಬಿ ಅಟ್ಮಾಸ್ ಮತ್ತು ಮಲ್ಟಿಬೀಮ್ 3.0 ಅನ್ನು ಇಮ್ಮರ್ಸಿವ್ ಆಡಿಯೊ ಸೌಲಭ್ಯವನ್ನು ಪಡೆದುಕೊಂಡಿವೆ. ಹಾಗೆಯೇ ವೈರ್‌ಲೆಸ್ ಸರೌಂಡ್ ಸ್ಪೀಕರ್‌ಗಳನ್ನು ಪಡೆದುಕೊಂಡಿವೆ. ಇನ್ನು ಇವುಗಳ ಔಟ್‌ಪುಟ್ 750W ನಿಂದ 2,470W ವರೆಗಿನ ರೇಂಜ್‌ನಲ್ಲಿ ಇದೆ. ಈ ಲೈನ್‌ಅಪ್ AI ಸೌಂಡ್ ಬೂಸ್ಟ್ ಮತ್ತು ಪ್ಯೂರ್‌ವಾಯ್ಸ್ 2.0 ಸೌಲಭ್ಯ ಪಡೆದುಕೊಂಡಿವೆ. ಹಾಗಾದರೆ ಜೆಬಿಎಲ್ ಸಂಸ್ಥೆಯು ಲಾಂಚ್ ಮಾಡಿರುವ ಈ ನೂತನ ಸೌಂಡ್ ಬಾರ್‌ಗಳ ಫೀಚರ್ಸ್ ಹಾಗೂ ಬೆಲೆ ಬಗ್ಗೆ ಮುಂದೆ ತಿಳಿಯೋಣ.
SurveyAlso Read : Airtel ಸಂಸ್ಥೆಯ 219ರೂ.ಗಳ ಪ್ಲಾನಿನಲ್ಲಿ 3GB ಡೇಟಾ ಜೊತೆಗೆ ಆಕರ್ಷಕ ವ್ಯಾಲಿಡಿಟಿ
JBL ಸೌಂಡ್‌ಬಾರ್ ಸರಣಿಯ ಬೆಲೆ ಹಾಗೂ ಲಭ್ಯತೆ
- ಜೆಬಿಎಲ್ ಸೌಂಡ್‌ಬಾರ್ 1300MK2 ಬೆಲೆ 1,74,999 ರೂ.ಗಳು ಆಗಿದೆ.
- ಜೆಬಿಎಲ್ ಸೌಂಡ್‌ಬಾರ್ 1000MK2 ಬೆಲೆ 1,49,999 ರೂ.ಗಳು ಆಗಿದೆ.
- ಜೆಬಿಎಲ್ ಸೌಂಡ್‌ಬಾರ್ 800MK2 ಬೆಲೆ 1,24,999 ರೂ.ಗಳು ಆಗಿದೆ.
- ಜೆಬಿಎಲ್ ಸೌಂಡ್‌ಬಾರ್ 500MK2 ಬೆಲೆ 64,999 ರೂ.ಗಳು ಆಗಿದೆ.
ಈ ಸೌಂಡ್‌ಬಾರ್‌ಗಳು JBL.com ಹಾಗೂ ಆಯ್ದ ರೀಟೇಲ್ ಸ್ಟೋರ್‌ಗಳು ಮತ್ತು ಭಾರತದಾದ್ಯಂತ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಖರೀದಿಗೆ ಲಭ್ಯವಿದೆ.

ಜೆಬಿಎಲ್ ಸೌಂಡ್‌ಬಾರ್ ಸರಣಿಯ ವೈಶಿಷ್ಟ್ಯಗಳ ಮಾಹಿತಿ
ಸಂಸ್ಥೆಯ ನೂತನ 1300MK2, 1000MK2, 800MK2 ಹಾಗೂ 500MK2 ಈ ನಾಲ್ಕು ಡಿವೈಸ್‌ಗಳು ಪ್ರಾದೇಶಿಕ ಆಡಿಯೊಗಾಗಿ ಡಾಲ್ಬಿ ಅಟ್ಮಾಸ್, DTS ಸ್ವರೂಪಗಳು ಮತ್ತು JBL ನ ಮಲ್ಟಿಬೀಮ್ 3.0 ತಂತ್ರಜ್ಞಾನವನ್ನು ಸಪೋರ್ಟ್ ಮಾಡುತ್ತವೆ. ಇನ್ನು ಜೆಬಿಎಲ್ ಬಾರ್ 1300MK2 ಡಿವೈಸ್ 11.1.4 ಚಾನೆಲ್ ಸೆಟ್‌ಅಪ್ ಮತ್ತು ಡ್ಯುಯಲ್ 8 ಇಂಚಿನ ಸಬ್ ವೂಫರ್ ಜೊತೆಗೆ 2,470W ವರೆಗೆ ಔಟ್‌ಪುಟ್ ಒದಗಿಸುತ್ತದೆ. ಹಾಗೆಯೇ ಜೆಬಿಎಲ್ ಬಾರ್ 1000MK2 ಡಿವೈಸ್ 960W ಔಟ್‌ಪುಟ್ ಜೊತೆಗೆ 7.1.4-ಚಾನೆಲ್ ಸಿಸ್ಟಮ್ ಮತ್ತು 10 ಇಂಚಿನ ಸಬ್ ವೂಫರ್ ಅನ್ನು ನೀಡುತ್ತದೆ.
ಹಾಗೆಯೇ ಜೆಬಿಎಲ್ ಬಾರ್ 800MK2 7.1 ಚಾನೆಲ್ ಕಾನ್ಫಿಗರೇಶನ್ ಮತ್ತು 10 ಇಂಚಿನ ಸಬ್ ವೂಫರ್ ಜೊತೆಗೆ 780W ಔಟ್‌ಪುಟ್ ಅನ್ನು ನೀಡುತ್ತದೆ. ಆದರೆ ಸೌಂಡ್‌ಬಾರ್ 500MK2 5.1 ಚಾನೆಲ್ ಸೆಟ್‌ಅಪ್‌ನಲ್ಲಿ 750W ಔಟ್‌ಪುಟ್ ಅನ್ನು ಒದಗಿಸುತ್ತದೆ. ಅಲ್ಲದೇ ಜೆಬಿಎಲ್ ಬಾರ್ 1300MK2, 1000MK2, ಮತ್ತು 800MK2 ಡಿಟ್ಯಾಚೇಬಲ್ ವೈರ್‌ಲೆಸ್ ಸರೌಂಡ್ ಸ್ಪೀಕರ್‌ಗಳನ್ನು ನೀಡುತ್ತವೆ. ಆದರೆ 500MK2 ಡಿವೈಸ್ ಸ್ಥಿರ ಸ್ಪೀಕರ್ ರಚನೆ ಅನ್ನು ಹೊಂದಿದೆ. ಇನ್ನು 1300MK2 ಮತ್ತು 1000MK2 ಡಿವೈಸ್‌ಗಳು ಟ್ರೂ ಡಾಲ್ಬಿ ಅಟ್ಮೋಸ್ ಔಟ್‌ಪುಟ್‌ಗಾಗಿ ಅಪ್-ಫೈರಿಂಗ್ ಡ್ರೈವರ್‌ಗಳನ್ನು ಒಳಗೊಂಡಿವೆ.
ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಸೌಂಡ್‌ಬಾರ್ ಡಿವೈಸ್‌ಗಳು HDMI eARC, HDMI ಇನ್‌ಪುಟ್‌ಗಳು, ಬ್ಲೂಟೂತ್ 5.3, ವೈ-ಫೈ, ಆಪ್ಟಿಕಲ್ ಇನ್‌ಪುಟ್ ಮತ್ತು USB ಆಯ್ಕೆಗಳನ್ನು ಒಳಗೊಂಡಿವೆ. ಇನ್ನು ಹೈ ಎಂಡ್ ಮಾಡೆಲ್‌ಗಳು ಬಹು HDMI ಇನ್‌ಪುಟ್‌ಗಳು ಮತ್ತು 4K ಡಾಲ್ಬಿ ವಿಷನ್ ಪಾಸ್‌ಥ್ರೂ ಸಪೋರ್ಟ್ ಅನ್ನು ನೀಡುತ್ತವೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile