ಜನಪ್ರಿಯ ಆಡಿಯೋ ಕಂಪನಿ JBL ದೇಶಿಯ ಮಾರುಕಟ್ಟೆಯಲ್ಲಿ ಹಲವು ಭಿನ್ನ ಮಾದರಿಯ ಸ್ಪೀಕರ್ಸ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ ಜೆಬಿಎಲ್ ಆಡಿಯೋ ಸಂಸ್ಥೆಯು ನೂತನವಾಗಿ JBL Grip ಹೆಸರಿನ ಹೊಸ ಅಲ್ಟ್ರಾ-ಪೋರ್ಟಬಲ್ ಬ್ಲೂಟೂತ್ ಸ್ಪೀಕರ್ ಅನ್ನು ಬಿಡುಗಡೆ ಮಾಡಿದೆ. ಇದು ಸ್ಟೀರಿಯೊ ಮತ್ತು ಮಲ್ಟಿ ಸ್ಪೀಕರ್ ಜೋಡಣೆಗಾಗಿ AI ಸೌಂಡ್ ಬೂಸ್ಟ್ ಮತ್ತು ಔರಾಕಾಸ್ಟ್ ಸಪೋರ್ಟ್ ಒಳಗೊಂಡಿದೆ. ಹಾಗೆಯೇ ನೀರು ಮತ್ತು ಧೂಳು ನಿರೋಧಕತೆಗಾಗಿ ಈ ಸ್ಪೀಕರ್ IP68 ರೇಟಿಂಗ್ ಸೌಲಭ್ಯ ಪಡೆದುಕೊಂಡಿದೆ. ಹಾಗಾದರೆ ಹೊಸದಾಗಿ ಲಾಂಚ್ ಆಗಿರುವ ಜೆಬಿಎಲ್ ಗ್ರಿಪ್ ಅಲ್ಟ್ರಾ-ಪೋರ್ಟಬಲ್ ಬ್ಲೂಟೂತ್ ಸ್ಪೀಕರ್ನ ಫೀಚರ್ಸ್ ಹಾಗೂ ಬೆಲೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.
Also Read : ಕನ್ಫರ್ಮ್ ಆಯ್ತು Realme P4 Lite 5G ಬಿಡುಗಡೆಗೆ ದಿನಾಂಕ! ಕೀ ಫೀಚರ್ಸ್ ಇಲ್ಲಿವೆ ನೋಡಿ
ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಜೆಬಿಎಲ್ ಗ್ರಿಪ್ ಸ್ಪೀಕರ್ ಬೆಲೆ 11,999 ರೂಗಳು ಆಗಿದೆ. ಇನ್ನು ಈ ಸ್ಪೀಕರ್ ಬ್ಲ್ಯಾಕ್, ವೈಟ್, ಪರ್ಪಲ್, ರೆಡ್, ಬ್ಲೂ ಮತ್ತು ಕ್ಯಾಮೊ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಅಂದಹಾಗೆ ಈ ನೂತನ ಸ್ಪೀಕರ್ ಜೆಬಿಎಲ್‌ನ ಅಧಿಕೃತ ವೆಬ್‌ಸೈಟ್, ಪ್ರಮುಖ ಆಫ್‌ಲೈನ್ ರಿಟೇಲ್ ಸ್ಟೋರ್‌ಗಳಲ್ಲಿ ಮತ್ತು ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಲಭ್ಯವಿದೆ.
ಜೆಬಿಎಲ್ ಗ್ರಿಪ್ ಸ್ಪೀಕರ್ 16W ಔಟ್‌ಪುಟ್‌ನ ಜೆಬಿಎಲ್ ಪ್ರೊ ಸೌಂಡ್ ಅನ್ನು ನೀಡುತ್ತದೆ. ಹಾಗೆಯೇ ಇದು AI ಸೌಂಡ್ ಬೂಸ್ಟ್ ಅನ್ನು ಸಪೋರ್ಟ್ ಮಾಡುತ್ತದೆ. ಇದು ಸೆಲ್ಟ್ಜರ್ ಕ್ಯಾನ್‌ನಿಂದ ಪ್ರೇರಿತವಾದ ಕಾಂಪ್ಯಾಕ್ಟ್ ನೇರ ವಿನ್ಯಾಸವನ್ನು ಪಡೆದಿದೆ. ಇದನ್ನು ಕೊಂಡೋಯ್ಯಲು ಸುಲಭ ಹಾಗೆಯೇ ನೇತುಹಾಕಲು ಹಗ್ಗದ ಲೂಪ್ ಅನ್ನು ಒಳಗೊಂಡಿದೆ. ಈ ಸ್ಪೀಕರ್ 80dB ಸಿಗ್ನಲ್-ಟು-ನಾಯ್ಸ್ ಅನುಪಾತದೊಂದಿಗೆ 70Hz ನಿಂದ 20kHz ವರೆಗಿನ ಆವರ್ತನ ಪ್ರತಿಕ್ರಿಯೆ ಶ್ರೇಣಿಯನ್ನು ನೀಡುತ್ತದೆ. ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಈ ಸ್ಪೀಕರ್ A2DP 1.4 ಮತ್ತು AVRCP 1.6 ಪ್ರೊಫೈಲ್‌ಗಳೊಂದಿಗೆ ಬ್ಲೂಟೂತ್ 5.4 ಅನ್ನು ಸಪೋರ್ಟ್ ಮಾಡುತ್ತದೆ.
ನೂತನ ಜೆಬಿಎಲ್ ಗ್ರಿಪ್ ಸ್ಪೀಕರ್ ಅನ್ನು ಒಮ್ಮೆ ಚಾರ್ಜ್ ಮಾಡಿದರೆ 12 ಗಂಟೆಗಳ ಪ್ಲೇಬ್ಯಾಕ್ ಅನ್ನು ನೀಡುತ್ತದೆ ಎನ್ನಲಾಗಿದೆ. ಹಾಗೆಯೇ ಪ್ಲೇಟೈಮ್ ಬೂಸ್ಟ್ ಮೂಲಕ ಹೆಚ್ಚುವರಿಯಾಗಿ ಎರಡು ಗಂಟೆಗಳ ಬಾಳಿಕೆ ಒದಗಿಸಲಿದೆ. ಇದು 10.01Wh ಲಿ-ಐಯಾನ್ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು ಸಂಪೂರ್ಣವಾಗಿ ಚಾರ್ಜ್ ಮಾಡಲು ಸುಮಾರು ಮೂರು ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎನ್ನಲಾಗಿದೆ. ಹಾಗೆಯೇ ಆಂಡ್ರಾಯ್ಡ್ ಮತ್ತು iOS ನಲ್ಲಿ ಜೆಬಿಎಲ್ ಪೋರ್ಟಬಲ್ ಆಪ್‌ನೊಂದಿಗೆ ಸಹ ಕೆಲಸ ಮಾಡುತ್ತದೆ. ಜೆಬಿಎಲ್ ಗ್ರಿಪ್ ಸ್ಪೀಕರ್ ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಸೌಲಭ್ಯವನ್ನು ಪಡೆದುಕೊಂಡಿದೆ. ಇನ್ನು ಸ್ಪೀಕರ್ 64×153×65mm ಸುತ್ತಳತೆ ಹೊಂದಿರುವ ಜೊತೆಗೆ ಇದು 385g ತೂಕ ಪಡೆದುಕೊಂಡಿದೆ.