ಭಾರತೀಯ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಎಂದೇ ಗುರುತಿಸಿಕೊಂಡಿರುವ ಬೋಟ್ ಈಗಾಗಲೇ ತನ್ನ ಕೆಲವು ಉತ್ಪನ್ನಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಬೋಟ್ ಇದೀಗ ಸ್ಮಾರ್ಟ್ ಪ್ರೊಜೆಕ್ಟರ್ ಡಿವೈಸ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಮೂಲಕ ಹೋಮ್ ಎಂಟರ್‌ಟೈನಮೆಂಟ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಅಂದಹಾಗೆ ಕಂಪನಿಯು OEM ದೇಶದಲ್ಲಿ Boat CineHead M1 ಮತ್ತು CineHead E1 ಹೆಸರಿನ ಎರಡು ಮಾಡೆಲ್‌ಗಳನ್ನು ಪರಿಚಯಿಸಿದೆ. ಹೊಸದಾಗಿ ಮಾರುಕಟ್ಟೆಗೆ ಲಾಂಚ್ ಆಗಿರುವ ಈ ಎರಡೂ ಡಿವೈಸ್‌ಗಳು ಗ್ರಾಹಕಸ್ನೇಹಿ ಬೆಲೆಯಲ್ಲಿವೆ. ಆ ಪೈಕಿ ಬೋಟ್ ಸಿನಿಹೆಡ್ M1 ಅಧಿಕ ಬ್ರೈಟ್ನೆಸ್, ಫೋಟೋ ರೆಸಲ್ಯೂಶನ್ ಹಾಗೂ ಪವರ್‌ಫುಲ್ ಸ್ಪೀಕರ್‌ಗಳೊಂದಿಗೆ ಸ್ವಲ್ಪ ಹೆಚ್ಚು ಪ್ರೀಮಿಯಂ ಆಗಿ ಕಾಣಿಸಿಕೊಂಡಿದೆ. ಹಾಗಾದರೆ ಬೋಟ್‌ನ ಈ ಹೊಸ ಸ್ಮಾರ್ಟ್ ಪ್ರೊಜೆಕ್ಟರ್ ಡಿವೈಸ್‌ಗಳ ಬೆಲೆ ಹಾಗೂ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ.
Also Read : OnePlus Nord 5 ಮೊಬೈಲ್ ಖರೀದಿಸುವ ಗ್ರಾಹಕರಿಗೆ ಸಿಹಿಸುದ್ದಿ! ಬೆಲೆಯಲ್ಲಿ ಭಾರೀ ಇಳಿಕೆ
ಭಾರತದಲ್ಲಿ ಬಿಡುಗಡೆ ಆಗಿರುವ ಬೋಟ್ ಸ್ಮಾರ್ಟ್ ಪ್ರೊಜೆಜ್ಟರ್ ಡಿವೈಸ್‌ಗಳು ಆಕರ್ಷಕ ಎನಿಸಿವೆ. ಇವುಗಳ ಪೈಕಿ ಬೋಟ್ ಸಿನಿಹೆಡ್ M1 ಬೆಲೆ 10,999 ರೂ.ಗಳು ಆಗಿದೆ. ಅಲ್ಲದೇ ಬೋಟ್ ಸಿನೆಹೆಡ್ E1 ಡಿವೈಸ್ 7,499 ರೂ.ಗಳ ಬೆಲೆಗೆ ಸಿಗುತ್ತದೆ. ಅಂದಹಾಗೆ ಈ ನೂತನ ಪ್ರೊಜೆಕ್ಟರ್‌ಗಳನ್ನು ಗ್ರಾಹಕಸು ಇ ಕಾಮರ್ಸ್ ಪ್ಲಾಟ್‌ಫಾರ್ಮ್ Amazon.in ಮೂಲಕ ಖರೀದಿಸಬಹುದು.
ಬೋಟ್ ಸಿನಿಹೆಡ್ E1 ಡಿವೈಸ್ ಕೈಗೆಟುಕುವ ಸ್ಮಾರ್ಟ್ ಪ್ರೊಜೆಕ್ಟರ್ ಆಗಿದೆ. ಈ ಡಿವೈಸ್ ಆಂಡ್ರಾಯ್ಡ್ 13 ಆಧಾರಿತ ಸ್ಮಾರ್ಟ್ UI ಬೆಂಬಲದೊಂದಿಗೆ ಬರುತ್ತದೆ. ಹಾಗೆಯೇ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ ಮತ್ತು ಇತರ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳ ಸಪೋರ್ಟ್ ಪಡೆದಿದೆ. ಇದು 720p ರೆಸಲ್ಯೂಶನ್ ಮತ್ತು ಪ್ಲೇಬ್ಯಾಕ್‌ನಲ್ಲಿ 1080p ಗೆ ಬೆಂಬಲದ ಜೊತೆ 150 ಇಂಚಿನ ಸ್ಕ್ರೀನ್ ಅನ್ನು ಪ್ರೊಜೆಕ್ಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಈ ಸಿನೆಹೆಡ್ E1 150 ANSI ಲುಮೆನ್ ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಬ್ಯಾಂಡ್ ವೈ-ಫೈ, HDMI, ಬ್ಲೂಟೂತ್ v5.0, USB, ಮತ್ತು Aux ಆಯ್ಕೆಗಳು ಸೇರಿವೆ. ಆಡಿಯೊವನ್ನು 3W ಬಿಲ್ಟ್-ಇನ್ ಸ್ಪೀಕರ್ ನಿರ್ವಹಿಸುತ್ತದೆ.
ಈ ಸ್ಮಾರ್ಟ್ ಪ್ರೊಜೆಕ್ಟರ್ ಡ್ಯುಯಲ್ ಸ್ಪೀಕರ್‌ಗಳ ಸೌಲಭ್ಯ ಪಡೆದುಕೊಂಡಿದೆ. ಇದು ಒಟ್ಟು 6W ಆಡಿಯೊ ಔಟ್‌ಪುಟ್ ಜೊತೆಗೆ ಉತ್ತಮ ವಾಯ್ಸ್ ನೀಡುವ ಸಾಧ್ಯತೆಯಿದೆ. ಹಾಗೆಯೇ ಪ್ರೊಜೆಕ್ಟರ್ 200 ANSI ಲುಮೆನ್‌ಗಳು ಮತ್ತು ಪೂರ್ಣ HD (1080p) ಬ್ರೈಟ್ನೆಸ್ ಪಡೆದುಕೊಂಡಿದೆ. ಸಿನೆಹೆಡ್ M1 ಪ್ರೊಜೆಕ್ಟರ್ ಆಂಡ್ರಾಯ್ಡ್ 12 ಆಧಾರಿತ UI ನಲ್ಲಿ ಕೆಲಸ ಮಾಡಲಿದೆ. ಇದು ವಿವಿಧ ಅಪ್ಲಿಕೇಶನ್‌ಗಳನ್ನು ಸಪೋರ್ಟ್ ಮಾಡುತ್ತದೆ. ಬಳಕೆದಾರರು ಹೆಚ್ಚುವರಿ ಅನುಕೂಲಕ್ಕಾಗಿ ಇದನ್ನು ತಿರುಗಿಸಬಹುದಾದ, ಹೊಂದಾಣಿಕೆ ಮಾಡಬಹುದಾದ ಸ್ಟ್ಯಾಂಡ್ ಮತ್ತು ಕ್ಯಾರಿ ಹ್ಯಾಂಡಲ್ ಜೊತೆಗೆ ಆಟೋ ಫೋಕಸ್ ಮತ್ತು ಆಟೋ ಕೀಸ್ಟೋನ್ ಆಯ್ಕೆ ಸಹ ಸಪೋರ್ಟ್ ಮಾಡುತ್ತದೆ.