WhatsApp: ಪ್ರೀಮಿಯಂ ಚಂದಾದಾರಿಕೆ ಪರಿಚಯಿಸಲು ಮುಂದಾದ ವಾಟ್ಸಾಪ್‌!

Updated on 02-Feb-2026
HIGHLIGHTS

WhatsApp ನಿಂದ ಪ್ರೀಮಿಯಂ ಯೋಜನೆ ಬಿಡುಗಡೆ ಸಾಧ್ಯತೆ

WhatsApp ಪ್ರೀಮಿಯಂ ಯೋಜನೆಯಲ್ಲಿ ಹೆಚ್ಚಿನ ಫೀಚರ್ಸ್ ಲಭ್ಯವಾಗಲಿವೆ

ಪ್ರೀಮಿಯಂ ಯೋಜನೆಯಿಂದ WhatsApp ಉಚಿತ ಸೇವೆಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ

WhatsApp Paid Subscription: ಮೆಟಾ ಮಾಲೀಕತ್ವದ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ WhatsApp ಈಗಾಗಲೇ ಹಲವು ಉಪಯುಕ್ತ ಫೀಚರ್ಸ್‌ಗಳ ಮೂಲಕ ಬಳಕೆದಾರರಿಗೆ ಆಪ್ತ ಎನಿಸಿದೆ. ಇದೀಗ ವಾಟ್ಸಾಪ್‌ ಅಪ್ಲಿಕೇಶನ್ ಅನ್ನು ಮತ್ತಷ್ಟು ಆಕರ್ಷಕವಾಗಿಸುವ ಉದ್ದೇಶದಿಂದ ಹೊಸ ಐಚ್ಛಿಕ ಪ್ರೀಮಿಯಂ ಚಂದಾದಾರಿಕೆ ಯೋಜನೆಯನ್ನು ಪರಿಚಯಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಈ ಪ್ರೀಮಿಯಂ ಯೋಜನೆಯ ಮೂಲಕ ಬಳಕೆದಾರರಿಗೆ ಹೆಚ್ಚುವರಿ ವೈಯಕ್ತೀಕರಣ ಆಯ್ಕೆಗಳು ಲಭ್ಯವಾಗಲಿವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : iPhone 17 Pro ಖರೀದಿಸಲು ಇದು ಬೆಸ್ಟ್‌ ಟೈಮ್‌! ನೀವು ಬೇಡ ಅಂದ್ರೂ ಸಿಗುತ್ತೆ ಈ ಕೊಡುಗೆ!

WhatsApp ಪೇಯ್ಡ್ ಚಂದಾದಾರಿಕೆ

ಜನಪ್ರಿಯ WhatsApp ಆಪ್‌ ಪೇಯ್ಡ್‌ ಚಂದಾದಾರಿಕೆ ಯೋಜನೆ ಪರಿಚಯಿಸಲು ಸಜ್ಜಾಗುತ್ತಿದೆ ಎನ್ನಲಾಗಿದೆ. ಅಂದಹಾಗೆ ಈ ನೂತನ ಯೋಜನೆಯು ಇನ್ನೂ ಅಭಿವೃದ್ಧಿಯ ಹಂತದಲ್ಲಿದ್ದು, ಸಂಸ್ಥೆಯಿಂದ ಅಧಿಕೃತವಾಗಿ ಘೋಷಣೆ ಆಗಿಲ್ಲ. ಸದ್ಯ WhatsApp ಬೀಟಾ ಆವೃತ್ತಿಗಳ ಮೂಲಕ ಈ ಯೋಜನೆಯನ್ನು ಪರೀಕ್ಷಿಸುತ್ತಿರುವಂತೆ ಕಾಣುತ್ತಿದ್ದು, ಕೆಲವು ಬಳಕೆದಾರರಿಗೆ ಮುಂದಿನ ಪ್ರೀಮಿಯಂ ಯೋಜನೆಗಾಗಿ ವೇಟ್‌ಲಿಸ್ಟ್ ಕಾಣಿಸುತ್ತಿದೆ ಎನ್ನಲಾಗಿದೆ. WhatsApp ಆಪ್‌ ಪೇಯ್ಡ್‌ ಚಂದಾದಾರಿಕೆ ಯೋಜನೆ ಬರುವುದರಿಂದ ಈಗಿರುವ ಉಚಿತ ವಾಟ್ಸಾಪ್ ಆವೃತ್ತಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎನ್ನಲಾಗಿದೆ ಹಾಗೂ ಬಳಕೆದಾರರ ಗೌಪ್ಯತೆ ಸಂಬಂಧಿತ ರಕ್ಷಣೆಯೂ ಯಥಾಸ್ಥಿತಿಯಲ್ಲೇ ಮುಂದುವರಿಯುತ್ತದೆ. ಇನ್ನು ಈ ಪೇಯ್ಡ್‌ ಚಂದಾದಾರಿಕೆ ಐಚ್ಛಿಕ ಆಗಿದ್ದು ಕಡ್ಡಾಯವಲ್ಲ ಎಂಬುದನ್ನು ಗಮನಿಸಬೇಕು.

ವರದಿಯ ಪ್ರಕಾರ ಈ ಪ್ರೀಮಿಯಂ ಯೋಜನೆಯಲ್ಲಿ ಹೆಚ್ಚುವರಿ ಆಯ್ಕೆಗಳು ಜೊತೆಗೆ ಉತ್ತಮವಾದ ಹೊಸತನವನ್ನು ಬಯಸುವವರು ಮಾತ್ರ ಈ ಯೋಜನೆಯನ್ನು ಆಯ್ಕೆ ಮಾಡಬಹುದು. ಈಗಾಗಲೇ ಸ್ನಾಪ್‌ಚಾಟ್, ಟೆಲಿಗ್ರಾಮ್ ಸೇರಿದಂತೆ ಕೆಲವು ಆಪ್‌ಗಳು ಇಂತಹ ಪ್ರೀಮಿಯಂ ಯೋಜನೆಗಳನ್ನು ಒದಗಿಸುತ್ತವೆ. ಇದೀಗ ವಾಟ್ಸಾಪ್ ಕೂಡ ಅದೇ ಹಾದಿಯಲ್ಲಿ ಮುನ್ನಡೆಯುತ್ತಿದೆ. ವಾಟ್ಸಾಪ್‌ನಲ್ಲಿ ಚಾಟಿಂಗ್, ವೀಡಿಯೊ ಕಾಲ್‌, ವಾಯ್ಸ್‌ ಕರೆಗಳು ಸೇರಿದಂತೆ ಕೆಲವು ಪ್ರೈಮರಿ ಫೀಚರ್ಸ್‌ಗಳು ಯಾವಾಗಲೂ ಉಚಿತವಾಗಿ ಲಭ್ಯವಿರುತ್ತವೆ. ಹಾಗೆಯೇ ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ವಿಧಾನದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ.

ಇನ್ನು ವಾಟ್ಸಾಪ್‌ನ ಮುಂಬರುವ ಈ ಪ್ರೀಮಿಯಂ ಚಂದಾದಾರಿಕೆಯಲ್ಲಿ ಲಭ್ಯವಿರುವ ಮೊದಲ ಫೀಚರ್ಸ್‌ ವಿಶೇಷ ಸ್ಟಿಕ್ಕರ್‌ಗಳು, ಹೊಸ ಆಪ್‌ ಥೀಮ್‌ಗಳು ಮತ್ತು ಮೂರು ಚಾಟ್‌ಗಳಿಗಿಂತ ಹೆಚ್ಚು ಪಿನ್ ಮಾಡುವ ಸೌಲಭ್ಯವನ್ನು ಒಳಗೊಂಡಿರಬಹುದು ಎಂದು ತೋರುತ್ತದೆ. ಇದರೊಂದಿಗೆ WhatsApp ಚಾಟ್ ರಿಂಗ್‌ಟೋನ್‌ಗಳು ಮತ್ತು ಆಪ್‌ ಐಕಾನ್ ಅನ್ನು ಕಸ್ಟಮೈಸ್ ಮಾಡುವ ಆಯ್ಕೆಗಳು ಸೇರಲಿವೆ ಎನ್ನಲಾಗಿದೆ.

ಪ್ರೀಮಿಯಂ ಚಂದಾದಾರಿಕೆ ಪರೀಕ್ಷೆಯ ಜೊತೆಗೆ WhatsApp ಸಂಸ್ಥೆಯು ಇತರ ಕೆಲವು ಅಪ್‌ಡೇಟ್‌ಗಳನ್ನು ಸಹ ಪ್ರಯೋಗಿಸುತ್ತಿದೆ. ಇವುಗಳಲ್ಲಿ ಮೆಟಾ AI ಗಾಗಿ ಹೊಸ thinking mode ಸೇರಿವೆ. ಬಹುತೇಕ ಬಳಕೆದಾರರಿಗೆ ವಾಟ್ಸಾಪ್‌ನ ಉಚಿತ ಆವೃತ್ತಿಯು ಸಾಕಷ್ಟು ಅನುಕೂಲಕರ ಎನಿಸುವ ಸಾಧ್ಯತೆ ಇದೆ. ಆದರೆ ಆಪ್‌ನಲ್ಲಿ ಹೆಚ್ಚು ಸಮಯ ವ್ಯಯಸುವ ಮತ್ತು ಹೆಚ್ಚುವರಿ ಫೀಚರ್ಸ್‌ಗಳನ್ನು ಬಯಸುವ ಬಳಕೆದಾರರಿಗೆ ನೂತನ ಪೇಯ್ಡ್ ಆವೃತ್ತಿಯ ಯೋಜನೆಯು ಸಮಂಜಸವಾದ ಆಯ್ಕೆ ಆಗಬಹುದು.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :