Jio Finance app: ಹಣಕಾಸು ಅಪ್ಲಿಕೇಶನ್‌ಗಳ ಸುದೀರ್ಘ ಪಟ್ಟಿ, ಸಂಕೀರ್ಣ ಆಯ್ಕೆಗಳು ಮತ್ತು ಅಂತ್ಯವಿಲ್ಲದ ಸ್ಕ್ರೋಲಿಂಗ್ ನೊಂದಿಗೆ ಹೆಣಗುತ್ತಿರುವ ಗ್ರಾಹಕರಿಗಾಗಿ ಜಿಯೋ ಫೈನಾನ್ಸ್ ಪ್ಲಾಟ್ಫಾರ್ಮ್ ಮತ್ತು ಸರ್ವೀಸ್ ಲಿಮಿಟೆಡ್ ಹೊಸ ಜಿಯೋಫೈನಾನ್ಸ್ ಅಪ್ಲಿಕೇಶನ್ ಶುರು ಮಾಡಿದೆ. ಈ ಹೊಸ ಅಪ್ಲಿಕೇಶನ್ ಸಾಂಪ್ರದಾಯಿಕ ರೀತಿಯಲ್ಲಿ ಕೇವಲ ಉತ್ಪನ್ನ ಪಟ್ಟಿಗಳ ಬದಲಿಗೆ ಬುದ್ಧಿವಂತ ಡಿಜಿಟಲ್ ಮಾರುಕಟ್ಟೆ ಆಗಿ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ಏಜೆಂಟಿಕ್ AI ಮತ್ತು ನ್ಯೂರಲ್ ನೆಟ್ವರ್ಕ್‌ಗಳ ಸಹಾಯದಿಂದ ಬಳಕೆದಾರರಿಗೆ ವೈಯಕ್ತಿಕಗೊಳಿಸಿದ ಸಲಹೆಗಳನ್ನು ಒದಗಿಸುತ್ತದೆ.
Also Read : 108MP OIS ಕ್ಯಾಮೆರಾ ಇರುವ Redmi Note 15 5G ಮೊಬೈಲ್ ಬೆಲೆಯಲ್ಲಿ ಭರ್ಜರಿ ಇಳಿಕೆ!
ಒನ್-ಸೈಜ್-ಫಿಟ್ಸ್-ಆಲ್ ಗಿಂತ ಭಿನ್ನವಾಗಿ ಅಪ್ಲಿಕೇಶನ್ 15 AI ಏಜೆಂಟ್ಸ್ ಮತ್ತು 70 ನಿರ್ಧಾರ ತೆಗೆದುಕೊಳ್ಳುವ ಎಂಜಿನ್‌ಗಳೊಂದಿಗೆ ಬಳಕೆದಾರರ ಅಗತ್ಯತೆಗಳು, ಅರ್ಹತೆ ಮತ್ತು ಆರ್ಥಿಕ ಸ್ಥಿತಿಯನ್ನು ವಿಶ್ಲೇಷಣೆ ಮಾಡುತ್ತದೆ. ಅಂದರೆ ನೀವು ಹೋಮ್ ಲೋನ್ ಅನ್ನು ಹುಡುಕುತ್ತಿದ್ದರೆ, ಹೂಡಿಕೆ ಮಾಡಲು ಪ್ರಾರಂಭಿಸಲು ಅಥವಾ ವಿಮಾ ರಕ್ಷಣೆಯನ್ನು ಹೆಚ್ಚಿಸಲು ಬಯಸಿದರೆ ನಿಮ್ಮ ಪ್ರೊಫೈಲ್‌ಗೆ ನೇರವಾಗಿ ಹೊಂದಿಕೆಯಾಗುವ ಆಯ್ಕೆಗಳನ್ನು ಅಪ್ಲಿಕೇಶನ್ ನಿಮಗೆ ತೋರಿಸುತ್ತದೆ.
ಗೃಹ ಸಾಲಗಳು, ವೈಯಕ್ತಿಕ ಸಾಲಗಳು, ಸೆಕ್ಯುರಿಟಿಗಳ ಮೇಲಿನ ಸಾಲಗಳು, ಕ್ರೆಡಿಟ್ ಕಾರ್ಡ್‌ಗಳು, ವಿಮೆ, ಯುಪಿಐ, ಸ್ಥಿರ ಠೇವಣಿಗಳು, ಡಿಜಿಟಲ್ ಗೋಲ್ಡ್ ಮತ್ತು ಜಿಯೋ ಬ್ಲ್ಯಾಕ್‌ರಾಕ್ ಮ್ಯೂಚುವಲ್ ಫಂಡ್‌ಗಳಂತಹ ಆಯ್ಕೆಗಳು ಒಂದೇ ಪ್ಲಾಟ್ಫಾರ್ಮನಲ್ಲಿ ಲಭ್ಯವಿರುತ್ತವೆ. ಬಳಕೆದಾರರು ವಿಭಿನ್ನ ಸ್ಕ್ರೀನ್‌ಗಳಿಗೆ ಹೋಗುವ ಅಗತ್ಯವಿಲ್ಲ. ನಿಮ್ಮ ಅಗತ್ಯವನ್ನು ಚಾಟ್ – ಬಾರ್‌ನಲ್ಲಿ ಟೈಪ್ ಮಾಡಿದರೆ ಅನುಗುಣವಾದ ಆಯ್ಕೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತವೆ. ಇದಲ್ಲದೆ ಪ್ರತಿ ವಹಿವಾಟಿನಲ್ಲಿ ಜಿಯೋ ಪಾಯಿಂಟ್‌ಗಳು
( JioPoints ) ಇರುತ್ತವೆ. ಇದನ್ನು ವಿವಿಧ ಉದ್ದೇಶಗಳಿಗೆ ರಿಡೀಮ್ ( redeeme ) ಮಾಡಬಹುದು.
ಇನ್ನು ಮುಂಬರುವ ದಿನಗಳಲ್ಲಿ ಅಪ್ಲಿಕೇಶನ್ ಫೈನಾನ್ಷಿಯಲ್ ಫಿಟ್ನೆಸ್ ಸ್ಕೋರ್ ಮತ್ತು ಪರ್ಸನಲ್ ಸಿಎಫ್ಒ ಫಾರ್ ಭಾರತ್ ನಂತಹ ವೈಶಿಷ್ಟ್ಯಗಳನ್ನು ಸಹ ಸೇರಿಸಲಿದೆ. ಇದು ನಿಮ್ಮ ಖರ್ಚು, ಉಳಿತಾಯ, ಹೂಡಿಕೆಗಳು ಮತ್ತು ವಿಮಾ ಸ್ಥಿತಿಯನ್ನು ವಿಶ್ಲೇಷಿಸುತ್ತದೆ ಮತ್ತು ಸುಧಾರಣೆಗಳನ್ನು ಸೂಚಿಸುತ್ತದೆ. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹಿತೇಶ್ ಸೇಥಿಯಾ ಅವರು, ಕಂಪನಿಯು ಹಣಕಾಸು ಸೇವೆಗಳನ್ನು ಹೆಚ್ಚು ಪಾರದರ್ಶಕ, ಸರಳ ಮತ್ತು ವಿಶ್ವಾಸಾರ್ಹ ವಾಗಿಸುವ ಗುರಿಯನ್ನು ಹೊಂದಿದೆ. ಇದರಿಂದ ಪ್ರತಿಯೊಬ್ಬ ಭಾರತೀಯನೂ ತಮ್ಮ ಆರ್ಥಿಕ ಭವಿಷ್ಯವನ್ನು ವಿಶ್ವಾಸದಿಂದ ನಿಯಂತ್ರಿಸಬಹುದು ಎಂದರು.