Holi Wishes 2026 in Kannada: ಹೋಳಿ ಹಬ್ಬದ ಶುಭಾಶಯ ತಿಳಿಸಲು ಇಲ್ಲಿವೆ ಬೆಸ್ಟ್‌ ಮೆಸೆಜ್‌ಗಳು

HIGHLIGHTS

ಹೋಳಿಯನ್ನು ಭಾರತದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ

ಪರಸ್ಪರ ಬಣ್ಣ ಹಚ್ಚುತ್ತಾ ಸಡಗರದಿಂದ ಹೋಳಿ ಹಬ್ಬ ಆಚರಿಸುತ್ತಾರೆ

Holi Wishes 2026 in Kannada: ಬಣ್ಣಗಳ ಹಬ್ಬ ಹೋಳಿಯನ್ನು ಭಾರತದೆಲ್ಲೆಡೆ ಅಪಾರ ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಇದು ಕೇವಲ ಬಣ್ಣಗಳನ್ನು ಎರಚಿ ಖುಷಿಪಡುವ ಹಬ್ಬವಲ್ಲ ಬದಲಿಗೆ ಹಳೆಯ ಕಹಿ ನೆನಪುಗಳು, ದ್ವೇಷವನ್ನು ಮರೆತು ಹೊಸ ಸಂಬಂಧಗಳಿಗೆ ಹಾಗೂ ಹೊಸ ಆರಂಭಗಳಿಗೆ ಸ್ವಾಗತ ಕೋರುವ ಆಚರಣೆಯ ದಿನವಾಗಿದೆ. ಹೋಳಿ ಹಬ್ಬವು ಕೆಟ್ಟದ ಮೇಲಿನ ಒಳ್ಳೆಯದ ವಿಜಯದ ಸಂಕೇತವಾಗಿದೆ. ಕಾಮದಹನದ ಪವಿತ್ರ ಅಗ್ನಿಯಂತೆ ನಮ್ಮ ಮನಸ್ಸಿನಲ್ಲಿರುವ ಆಲಸ್ಯ, ನಕಾರಾತ್ಮಕತೆ ಹಾಗೂ ದುಃಖಗಳನ್ನು ದಹಿಸಿ ಬದುಕಿನಲ್ಲಿ ಹೊಸ ಭರವಸೆ, ಸಂತೋಷ ಮತ್ತು ಸಕಾರಾತ್ಮಕ ಬಣ್ಣಗಳನ್ನು ತುಂಬಲಿ ಎಂಬುದು ಈ ಹಬ್ಬದ ಸಂಕೇತವಾಗಿದೆ. ಈ ಹೋಳಿ ಹಬ್ಬದ ದಿನದಂದು ನೀವು ನಿಮ್ಮ ಸ್ನೇಹಿತರಿಗೆ, ಆತ್ಮೀಯರಿಗೆ ವಾಟ್ಸಾಪ್, ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್ ಮೂಲಕ ಶುಭಾಶಯಗಳನ್ನು ಕೋರಬಹುದು. ಶುಭಾಶಗಳನ್ನು ಕೋರಲು ಈ ಲೇಖನದಲ್ಲಿ ಕೆಲವು ಶುಭಾಶಯ ಮೆಸೆಜ್‌ಗಳನ್ನು ನೀಡಲಾಗಿದೆ ಮುಂದೆ ನೋಡಿರಿ.

Also Read : ಮನುಷ್ಯನಂತೆ ಕೇಳುವ, ಪ್ರತಿಕ್ರಿಯಿಸುವ Honor Robot Phone ಅನಾವರಣ! ಅಚ್ಚರಿ ಎನಿಸುವ ಫೀಚರ್ಸ್‌

Holi Wishes 2026 in Kannada: ಹೋಳಿ ಹಬ್ಬದ ಶುಭಾಶಯಗಳ ಮೆಸೆಜ್‌ಗಳು

ಬಣ್ಣಗಳಿಂದ ನಿಮ್ಮ ದಿನಗಳು ಕಂಗೊಳಿಸಲಿ, ಸಂತೋಷವು ತುಂಬಿರಲಿ. ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಬಣ್ಣಗಳ ಹಬ್ಬವು ನಿಮ್ಮ ಜೀವನಕ್ಕೆ ಸಂತೋಷ, ಪ್ರೀತಿ ಮತ್ತು ಸಮೃದ್ಧಿ ತರುತ್ತಾ ಸಾಗಲಿ. ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು

ಹೋಳಿ ಹಬ್ಬವು ಎಲ್ಲರ ಮನಸ್ಸುಗಳಲ್ಲಿ ಖುಷಿ ಮತ್ತು ನೆಮ್ಮದಿ ತುಂಬಲಿ. ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಬಣ್ಣಗಳು ನಿಮ್ಮ ಜೀವನದಲ್ಲಿ ಹೊಸ ಸ್ಪಂದನೆಗಳನ್ನು ತರಲಿ, ಸಂತೋಷ ಹಿರಿದಾಗಲಿ. ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಪ್ರೀತಿ ಮತ್ತು ನೆಮ್ಮದಿ ನಿಮ್ಮ ಸುತ್ತಲೂ ಹರಿಯಲಿ. ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಬಣ್ಣಗಳ ಹಬ್ಬವು ನಿಮ್ಮ ಮನಸ್ಸಿಗೆ, ಮನೆಯವರಿಗೆ ಸಂತೋಷ ಮತ್ತು ಶಾಂತಿ ತರುತ್ತಾ ಸಾಗಲಿ. ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಹೋಳಿ ಹಬ್ಬದ ಖುಷಿ ನಿಮ್ಮ ಜೀವನದ ಪ್ರತಿಯೊಂದು ಕ್ಷಣವನ್ನು ಕಂಗೊಳಿಸಲಿ. ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ನಗುವು, ಸಂತೋಷ ಮತ್ತು ಪ್ರೀತಿಯಿಂದ ಈ ಹಬ್ಬವನ್ನು ಆಚರಿಸಿ. ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಹೋಳಿ ಹಬ್ಬವು ನೆಮ್ಮದಿ, ಸಂತೋಷ ಮತ್ತು ಬಣ್ಣಗಳೊಂದಿಗೆ ನಿಮ್ಮ ಹೃದಯ ತುಂಬಿಸಲಿ. ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಎಲ್ಲಾ ಕಹಿ ನೆನಪುಗಳನ್ನು ಮರೆತು, ಹೊಸ ಸಂಭ್ರಮಕ್ಕೆ ಸ್ವಾಗತ ಮಾಡಿ. ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಹೋಳಿ ಹಬ್ಬವು ಪ್ರೀತಿ ಮತ್ತು ಸ್ನೇಹವನ್ನು ಹೊಸದಾಗಿ ನೆನೆಸುವ ಅವಕಾಶ ನೀಡಲಿ. ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಹೊಸ ದಿನಗಳು ಹೊಸ ಬಣ್ಣ ಮತ್ತು ಹೊಸ ಸಂತೋಷ ತರುತ್ತಾ ಸಾಗಲಿ. ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಬಣ್ಣಗಳ ಹಬ್ಬವು ನಿಮ್ಮ ಜೀವನದಲ್ಲಿ ಹೊಸ ಭರವಸೆ ಮತ್ತು ಹೊಸ ಸಂತೋಷ ತರಲಿ. ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಹೋಳಿ ಹಬ್ಬವು ಎಲ್ಲರ ಮನಸ್ಸನ್ನು ನೆಮ್ಮದಿ ಮತ್ತು ಉತ್ಸಾಹದಿಂದ ತುಂಬಲಿ. ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಈ ಹಬ್ಬವು ಪ್ರೀತಿ, ಸಂತೋಷ ಮತ್ತು ಬಾಳಿಕೆಯಲ್ಲಿನ ಸಕಾರಾತ್ಮಕ ಬಣ್ಣಗಳನ್ನು ತರಲಿ. ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಬಣ್ಣಗಳ ಹಬ್ಬವು ನಿಮ್ಮ ಜೀವನದ ಪ್ರತಿಯೊಂದು ಕ್ಷಣವನ್ನು ಉಲ್ಲಾಸ ಮತ್ತು ಖುಷಿಯಿಂದ ತುಂಬಿಸಲಿ. ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :