ಇನ್ಮೇಲೆ ನಿಮ್ಮ ಯಾವುದೇ KYC ಸಂಬಂಧಿತ ಮಾಹಿತಿಗಳನ್ನು ಅಪ್ಡೇಟ್ ಮಾಡಲು ಕಂಪನಿಯ HR ಅಥವಾ ಅಡ್ಮಿನ್ ಬಳಿ ಹೋಗಿ ತಲೆಕೆಡಿಸಿಕೊಂಡು ಸಮಯ ವ್ಯರ್ಥ ಮಾಡುವ ಅಗತ್ಯವಿಲ್ಲ.
ನಿಮ್ಮ ಈ ಪಿಎಫ್ (PF) ಖಾತೆಯ ಪ್ರತಿಯೊಂದು ವಿವರಗಳನ್ನು ಅಪ್ಡೇಟ್ ಮಾಡಲು ಹೊಸ ನಿಯಮ ಜಾರಿಯಾಗಿದೆ.
ನಿಮ್ಮ EPFO ಖಾತೆಯಲ್ಲಿ ಯಾವುದೇ ಮಾಹಿತಿಗಳು ತಪ್ಪಿದ್ದರೆ ನೀವು ಮನೆಯಲ್ಲೇ ಕುಳಿತು ಸರಿಪಡಿಸಿಕೊಳ್ಳಬಹುದು.
ನಿಮ್ಮ KYC ಸಂಬಂಧಿತ ಮಾಹಿತಿಗಳನ್ನು ಅಪ್ಡೇಟ್ ಮಾಡಲು HR ಅಥವಾ ಅಡ್ಮಿನ್ ಬಳಿ ಹೋಗಿ ತಲೆಕೆಡಿಸಿಕೊಂಡು ಸಮಯ ವ್ಯರ್ಥ ಮಾಡುವ ಅಗತ್ಯವಿಲ್ಲ.
ನಿಮ್ಮ ಹೆಸರು, ಹುಟ್ಟಿದ ದಿನಾಂಕ, ಲಿಂಗ, ರಾಷ್ಟ್ರೀಯತೆ, ತಂದೆ / ತಾಯಿಯ ಹೆಸರು, ವೈವಾಹಿಕ ಸ್ಟೇಟಸ್, ಪತ್ನಿಯ ಹೆಸರು ಅಪ್ಡೇಟ್ ಮಾಡಬಹುದು.
ಅಲ್ಲದೆ ಕಂಪನಿಯಲ್ಲಿ ಸೇರಿದ ಮತ್ತು ತೊರೆದ ದಿನಾಂಕದಂತಹ ಅನೇಕ ಪರ್ಸನಲ್ ವಿವರಗಳನ್ನು ಸಹ ನೀವೇ ಅಪ್ಡೇಟ್ ಮಾಡಬಹುದು.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಮನ್ಸುಖ್ ಮಾಂಡವಿಯಾ (
Dr. Mansukh Mandaviya
) ಈ ಹೊಸ EPFO ಸೌಲಭ್ಯವನ್ನು ಪ್ರಾರಂಭಿಸಿದ್ದಾರೆ.
ನಿಮ್ಮ UAN ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡದಿದ್ದರೆ ಮಾತ್ರ ಯಾವುದೇ ತಿದ್ದುಪಡಿಯನ್ನು ಮಾಡಿಸಲು ಭೌತಿಕವಾಗಿ ದಾಖಲೆ ಸಲ್ಲಿಸಬೇಕಾಗುತ್ತದೆ.