ಅಮೆರಿಕ ಕರೋನವೈರಸ್ COVID-19 ಲಸಿಕೆಯನ್ನು ಅಭಿವೃದ್ಧಿಪಡಿಸಲು ಭಾರತದ ಸಹಯೋಗವನ್ನು ಪ್ರಕಟಿಸಿದೆ

ಅಮೆರಿಕ ಕರೋನವೈರಸ್ COVID-19 ಲಸಿಕೆಯನ್ನು ಅಭಿವೃದ್ಧಿಪಡಿಸಲು ಭಾರತದ ಸಹಯೋಗವನ್ನು ಪ್ರಕಟಿಸಿದೆ
HIGHLIGHTS

ಭಾರತಕ್ಕೆ ದಾನ ಮಾಡಲಾಗುವ ವೆಂಟಿಲೇಟರ್‌ಗಳ ಸಂಖ್ಯೆಯ ಬಗ್ಗೆ ಈಗ ಸದ್ಯಕ್ಕೆ ಯಾವುದೇ ದೃಢೀಕರಣವಿಲ್ಲ

ಕರೋನವೈರಸ್ COVID-19 ವಿಶ್ವದಲ್ಲಿ ಈವರೆಗೆ 313,215 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿದೆ

ಕೊರೊನಾವೈರಸ್ COVID-19 ಗೆ ಲಸಿಕೆ ತಯಾರಿಸಲು ಯುಎಸ್ ಭಾರತದೊಂದಿಗೆ ಕೆಲಸ ಮಾಡುತ್ತಿದೆ ಎಂದು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ ಮತ್ತು ವರ್ಷದ ಅಂತ್ಯದ ವೇಳೆಗೆ ಲಸಿಕೆ ಲಭ್ಯವಾಗಲಿದೆ ಎಂದು ಅವರು ಆಶಿಸಿದ್ದಾರೆ.

"ಹೌದು ನಾವು ಭಾರತದೊಂದಿಗೆ ತುಂಬಾ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ನಮ್ಮಲ್ಲಿ ಅಮೇರಿಕಾದಲ್ಲಿ ಅಪಾರ ಭಾರತೀಯ ಜನಸಂಖ್ಯೆ ಇದೆ ಮತ್ತು ನೀವು ಮಾತನಾಡುತ್ತಿರುವ ಅನೇಕ ಜನರು ಲಸಿಕೆಯ ಬಗ್ಗೆಯೂ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಭಾರತದ ಶ್ರೇಷ್ಠ ವಿಜ್ಞಾನಿಗಳು ಮತ್ತು ಸಂಶೋಧಕರಿದ್ದಾರೆಂದು ಅವರು  ವೈಟ್ ಹೌಸ್ ಅಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಗ್ಲಾಕ್ಸೊ ಸ್ಮಿತ್‌ಕ್ಲೈನ್‌ನಲ್ಲಿ ಮಾಜಿ ಲಸಿಕೆಗಳ ಮುಖ್ಯಸ್ಥರನ್ನು ನೇಮಕ ಮಾಡುವುದಾಗಿ ಅವರು ಘೋಷಿಸಿದರು ಅವರು ವಿಶ್ವದಾದ್ಯಂತ ಸಂಶೋಧಕರು ಜಾಗತಿಕವಾಗಿ 313,215 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿರುವ ಈ COVID-19 ಕರೋನವೈರಸ್‌ಗೆ ಲಸಿಕೆ ಅಭಿವೃದ್ಧಿಪಡಿಸಲು ಪರದಾಡುತ್ತಿರುವಾಗ ಈ ಪ್ರಯತ್ನಕ್ಕೆ ಮುಂದಾಗಲಿದ್ದಾರೆ. ಕರೋನವೈರಸ್ ಲಸಿಕೆ ಅಭಿವೃದ್ಧಿಯಲ್ಲಿ ಸಹಕರಿಸುತ್ತಿರುವ ಭಾರತೀಯ-ಅಮೆರಿಕನ್ನರ ವಿಜ್ಞಾನಿಗಳು ಮತ್ತು ಸಂಶೋಧಕರನ್ನು ಟ್ರಂಪ್  ಶ್ರೇಷ್ಠರೆಂದು ಕರೆದರು. ಈ ಸಾಂಕ್ರಾಮಿಕ ಸಮಯದಲ್ಲಿ ನಾವು ಭಾರತ ಮತ್ತು ಪ್ರಧಾನಿ ಮೋದಿ ಅವರೊಂದಿಗೆ ನಿಲ್ಲುತ್ತೇವೆಂದು ಹೇಳಿದರು.

ಇದರ ನಂತರ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ ನಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಉತ್ತಮ ಸ್ನೇಹಿತ ಎಂದು ಬಣ್ಣಿಸಿ ಅಮೇರಿಕ ಭಾರತಕ್ಕೆ ವೆಂಟಿಲೇಟರ್ಗಳನ್ನು ದಾನ ಮಾಡುವುದಾಗಿ ಘೋಷಿಸಿದರು. ಯುನೈಟೆಡ್ ಸ್ಟೇಟ್ಸ್ ಭಾರತದಲ್ಲಿನ ನಮ್ಮ ಸ್ನೇಹಿತರಿಗೆ ವೆಂಟಿಲೇಟರ್ಗಳನ್ನು ದಾನ ಮಾಡುತ್ತೇವೆಂದು ಘೋಷಿಸಲು ನಾನು ಹೆಮ್ಮೆಪಡುತ್ತೇನೆ ಎಂದು ಅವರು ಬರೆದಿದ್ದಾರೆ.

ಭಾರತಕ್ಕೆ ದಾನ ಮಾಡಲಾಗುವ ವೆಂಟಿಲೇಟರ್‌ಗಳ ಸಂಖ್ಯೆಯ ಬಗ್ಗೆ ಈಗ ಸದ್ಯಕ್ಕೆ ಯಾವುದೇ ದೃಢೀಕರಣವಿಲ್ಲದಿದ್ದರೂ ತಾನು ಕಷ್ಟದಲ್ಲಿದ್ದರು ಬೇರೆಯವರ ಕ್ಷೇಮತೆಗಾಗಿ ಮುಂದೆ ಬಂದಿರುವುದು ಪ್ರಶಂಸೆಗೆ ಮತ್ತೊಂದು ಹೆಸರಾಗಿದೆ. worldometers.info ವರದಿಯ ಪ್ರಕಾರ ಶನಿವಾರ ಅಮೇರಿಕ 1,507,773 ಸಾಂಕ್ರಾಮಿಕ COVID-19 ಸೋಂಕುಗಳನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದೆ. ಭಾರತದಲ್ಲಿ ಈ COVID-19 ಸೋಂಕುಗಳು 90,648 ದಾಟಿದ್ದು ಚೀನಾದಲ್ಲಿ 82,941 ಪ್ರಕರಣಗಳು ದಾಖಲಾಗಿವೆ. ಅಂದ್ರೆ ಈ ಕೊರೊನಾವೈರಸ್ COVID-19 ಸಾಂಕ್ರಾಮಿಕ ಸಮಯದಲ್ಲಿ ಚೀನಾವನ್ನು ಮೀರಿಸಿ ಭಾರತ 11ನೇ ಸ್ಥಾನದಲ್ಲಿದೆ.

image credit

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo