Moto X70 Air ಪವರ್ಫುಲ್ ಪ್ರೊಸೆಸರ್ನೊಂದಿಗೆ ಮುಂದಿನ ತಿಂಗಳು ಬಿಡುಗಡೆಗೆ ಸಜ್ಜು!
ಮೊಟೊರೊಲಾ ತನ್ನ ಮುಂಬರಲಿರುವ Moto X70 Air ಸ್ಮಾರ್ಟ್ಫೋನ್ ಪರಿಚಯಿಸಿದೆ.
Moto X70 Air ಸ್ಮಾರ್ಟ್ಫೋನ್ ಇದೆ ಅಕ್ಟೋಬರ್ನಲ್ಲಿ ಪವರ್ಫುಲ್ ಪ್ರೊಸೆಸರ್ನೊಂದಿಗೆ ನಿರೀಕ್ಷೆ.
Moto X70 Air ಮೊದಲು ಚೀನಾದಲ್ಲಿ ಬಿಡುಗಡೆಯಾಗಲಿದ್ದು ಭಾರತದಲ್ಲಿ Edge ಸರಣಿಯಲ್ಲಿ ತರುವ ನಿರೀಕ್ಷೆ.
ಚೀನಾದ ಸ್ಮಾರ್ಟ್ಫೋನ್ ತಯಾರಕ ಕಂಪನಿಗಳು ಆಪಲ್ ಬ್ರಾಂಡ್ ಅನ್ನು ಅನುಸರಿಸಿಕೊಂಡು ತಮ್ಮ ಹೊಸ ಹೆಜ್ಜೆಯನ್ನು ಆಂಡ್ರಾಯ್ಡ್ ವಲಯದಲ್ಲಿ ಇಡಲು ಪ್ರಯತ್ನಿಸುತ್ತಿದೆ. ಯಾಕೆಂದರೆ ಈಗಾಗಲೇ Xiaomi 17 ಇದರ ಹೆಸರು ಇತ್ತೀಚೆಗೆ ಬಿಡುಗಡೆಯಾದ ಆಪಲ್ನ iPhone 17 ಸರಣಿಯೊಂದಿಗೆ ಹೋಲುತ್ತದೆ. ಅಲ್ಲದೆ ಈಗ Lenovo ತಂಡ ತಮ್ಮ ಮೊಟೊರೊಲಾ ತನ್ನ ಮುಂಬರಲಿರುವ Moto X70 Air ಸ್ಮಾರ್ಟ್ಫೋನ್ ಅನ್ನು ಇದೆ ಅಕ್ಟೋಬರ್ನಲ್ಲಿ ಪವರ್ಫುಲ್ ಪ್ರೊಸೆಸರ್ನೊಂದಿಗೆ ಚೀನಾದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದರ ಕಾಣಿಸಿಕೊಂಡಿರುವ ಫೋನ್ನ ಪ್ರಚಾರದ ಇಮೇಜ್ ಈಗಾಗಲೇ ಬಿಡುಗಡೆಯಾದ iPhone Air ಅನ್ನು ಹೋಲುತ್ತದೆ ಅನ್ನೋದು ಮಾತ್ರ ಸತ್ಯ.
Surveyಮುಂಬರಲಿರುವ Moto X70 Air ಸ್ಮಾರ್ಟ್ಫೋನ್
ಮೊಟೊರೊಲಾ ತನ್ನ ಮುಂಬರಲಿರುವ Moto X70 Air ಸ್ಮಾರ್ಟ್ಫೋನ್ ಟೀಸರ್ ಚಿತ್ರದ ಆಧಾರದ ಮೇಲೆ ಈ ಫೋನ್ ಬಲಭಾಗದಲ್ಲಿ ವಾಲ್ಯೂಮ್ ಬಟನ್ ಮತ್ತು ಪವರ್ ಬಟನ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಫೋನ್ ಹಿಂಭಾಗದಲ್ಲಿ ಎರಡು ಅಥವಾ ಹೆಚ್ಚಿನ ಹಿಂಬದಿಯ ಕ್ಯಾಮೆರಾಗಳನ್ನು ಸಹ ಹೊಂದಿರಬಹುದು. ಈ ನಿಟ್ಟಿನಲ್ಲಿ ಇದು ಒಂದೇ ಹಿಂಬದಿಯ ಕ್ಯಾಮೆರಾವನ್ನು ಹೊಂದಿರುವ ಐಫೋನ್ ಏರ್ಗೆ ಪ್ರತಿಸ್ಪರ್ಧಿಯಾಗಬಹುದು.

ಮೋಟೋ ಏರ್ ಫೋನ್ ಮೆಟಲ್ ಬಾಡಿಯೊಂದಿಗೆ ಬರುವುದಾಗಿ ನಿರೀಕ್ಷಿಸಬಹುದು. ಅಲ್ಲದೆ ಈ ಫೋನ್ ಅದ್ಭುತ ಕಾರ್ಯಕ್ಷಮತೆಯನ್ನು ಹೊಂದಲು ಪವರ್ಫುಲ್ ಚಿಪ್ ಹೊಸ Snapdragon 8 Elite Gen 5 ಪ್ರೊಸೆಸರ್ನಿಂದ ಚಾಲಿತವಾಗಿದೆ ಎಂದು ಹೇಳಲಾಗುತ್ತದೆ. ಈ ಚಿಪ್ ಲೇಟೆಸ್ಟ್ ಮತ್ತು ಪವರ್ಫುಲ್ ಪ್ರೊಸೆಸರ್ ಆಗಿದ್ದು 3nm ಪ್ರಕ್ರಿಯೆಯಲ್ಲಿ ನಿರ್ಮಿಸಲಾಗಿದೆ.
Also Read: JBL 2.1ch Dolby Soundbar ಇಂದು ಅಮೆಜಾನ್ನಲ್ಲಿ ಭರ್ಜರಿ ಡಿಸ್ಕೌಂಟ್ಗಳೊಂದಿಗೆ ಲಭ್ಯ!
ಆಪಲ್ ಅನ್ನು ಅನುಕರಣೆ ಮಾಡುತ್ತಿರುವ ಆಂಡ್ರಾಯ್ಡ್ ಕಂಪನಿಗಳು:
ಇತ್ತೀಚೆಗೆ ಬಿಡುಗಡೆಯಾದ ಹಲವಾರು ಫೋನ್ಗಳು ಚೀನಾದ ಕಂಪನಿಗಳು ಐಫೋನ್ ಅನ್ನು ನಕಲು ಮಾಡುತ್ತಿವೆ ಎಂದು ತೋರಿಸಿವೆ. Xiaomi 17 ಸರಣಿಯು ಇದಕ್ಕೆ ಪ್ರಮುಖ ಉದಾಹರಣೆಯಾಗಿದೆ ಯಾಕೆಂದರೆ ಇದರ ಮುಂಬರಲಿರುವ ಫೋನ್ಗಳು Xiaomi 17, Xiaomi 17 Pro ಮತ್ತು Xiaomi 17 Pro Max ಆಪಲ್ ಸರಣಿಯಂತೆಯೇ ಹೆಸರುಗಳನ್ನು ಹೊಂದಿವೆ. ಅಲ್ಲದೆ Xiaomi ಹೈಪರ್ಐಲ್ಯಾಂಡ್ ಕೂಡ ಆಪಲ್ ಐಲ್ಯಾಂಡ್ನಿಂದ ಪ್ರೇರಿತವಾಗಿದೆ ಎಂದು ತೋರುತ್ತದೆ.
ಅಲ್ಲದೆ ಈ ಫೋನ್ ಸುಮಾರು 3-4 ಹೊಸ ಮತ್ತು ಲೈಟ್ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುವುದಾಗಿ ನಿರೀಕ್ಷಿಸಲಾಗಿದೆ. ಈಗ ಈ ಪಟ್ಟಿಗೆ ಈ ಮೊಟೊರೊಲಾ ಸಹ ಸೇರಿದ್ದು ಬಿಡುಗಡೆ ಮಾಡಲಿರುವ ಏರ್ ಸ್ಮಾರ್ಟ್ಫೋನ್ ಅದರ ಟೀಸರ್ ಜೊತೆಗೆ ಐಫೋನ್ ಏರ್ ಅನ್ನು ಹೋಲುತ್ತದೆ ಎಂದು ತೋರಿಸುತ್ತಿರುವುದು. ಚೀನಾದ ಕಂಪನಿಗಳು ಐಫೋನ್ ಅನ್ನು ಸಕ್ರಿಯವಾಗಿ ನಕಲು ಮಾಡುತ್ತಿವೆ ಎಂದು ಸೂಚಿಸುತ್ತದೆ.
Also Read: SIM ಮತ್ತು eSIM ನಡುವಿನ ವ್ಯತ್ಯಾಸಗಳೇನು? ಇವುಗಳ ಅನುಕೂಲ ಮತ್ತು ಅನಾನುಕುಲಗಳೇನು ತಿಳಿಯಿರಿ!
ಈ Moto X70 Air ಬಗ್ಗೆ ಪ್ರಸ್ತುತ ಹೆಚ್ಚಿನ ಮಾಹಿತಿಗಾಗಿ ನಾವು ಕಾಯುತ್ತಿದ್ದೇವೆ. ಇದಕ್ಕೆ ಸಂಭದಿಸಿದ ಮಾಹಿತಿಗಳು ಹೊರಬಂದ ತಕ್ಷಣ ನಾವು ನಿಮಗೆ ಡಿಜಿಟ್ ಕನ್ನಡ ಸುದ್ದಿಗಳನ್ನು ನೀಡುತ್ತಿರುತ್ತೇವೆ ಆದ್ದರಿಂದ ನಮ್ಮನ್ನು ಸದಾ ಫಾಲೋ ಮಾಡುತ್ತೀರಿ. ಮಾಹಿತಿ ಇಷ್ಟವಾಗಿದ್ದರೆ ತಿಳಿಯದವರೊಂದಿಗೆ ಹಂಚಿಕೊಳ್ಳಿ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile