ನಿಮಗಿದು ಗೊತ್ತೇ..ಸೆಲ್ಫಿಯಿಂದ ಸಾವು ಇದರಲ್ಲಿದೆ ಭಾರತ ನಂಬರ್ ಒನ್.

ಇವರಿಂದ Ravi Rao | ಪ್ರಕಟಿಸಲಾಗಿದೆ 06 Oct 2017
ನಿಮಗಿದು ಗೊತ್ತೇ..ಸೆಲ್ಫಿಯಿಂದ ಸಾವು ಇದರಲ್ಲಿದೆ ಭಾರತ ನಂಬರ್ ಒನ್.

ನೀವು ಸೆಲ್ಫಿ ಪ್ರಿಯರೇ.. ಇಂದಿನ ಆಧುನಿಕ ಯುಗದಲ್ಲಿ ಪ್ರತಿ ಒಬ್ಬರ ಕೈನಲ್ಲಿ ಕ್ಯಾಮರಾ ಮೊಬೈಲ್ ಗಳಿವೆ. ಅಲ್ಲದೆ ಬಹುತೇಕರೆಲ್ಲರೂ ಪ್ರತಿ ದಿನ ಪ್ರತಿ ಗಂಟೆ ತಮ್ಮ ಸೆಲ್ಫಿ ಕ್ಲಿಕ್ ಮಾಡುವುದರಲ್ಲಿ ತುಂಬಾ ಖುಷಿ ಪಡುವವರೇ ಆಗಿದ್ದಾರೆ. ಆದರೆ ನಿಮಗಿದು ಗೊತ್ತೇ ಇದೇ ಸೆಲ್ಫಿ ಹಲವಾರು ಜೀವಗಳ ಪ್ರಾಣ ಹಾನಿಗೆ ಕಾರಣವಾಗಿದೆ. ಈ ಸೆಲ್ಫಿ ಹುಚ್ಚಿನಲ್ಲಿ ಹೀಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಾವಿಗೀಡಾದವರ ಪಟ್ಟಿಯಲ್ಲಿ ನಾವು ಭಾರತೀಯರೇ ಅಗ್ರ ಸ್ಥಾನದಲ್ಲಿದ್ದೇವೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಬಹಿರಂಗಗೊಳಿಸಿದೆ.

ಇಷ್ಟೇ ಅಲ್ಲದೆ ಸುಮಾರು 2014-2016 ರ ನಡುವೆ ಯಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು. ಮತ್ತು ಅದರ ನಂತರದ ದಿನಗಳಲ್ಲಿ ಅಲ್ಲಲ್ಲಿ ಸೆಲ್ಫಿ ಅನಾಹುತಗಳು ವರದಿಯಾಗುತ್ತಲೇ ಇವೆ. ಈಗ ಇದು ಜಾಗತಿಕವಾಗಿ 
>ಒಟ್ಟು ಸೆಲ್ಫಿ ಸಾವುಗಳಲ್ಲಿ ಭಾರತದ ಪಾಲು ಸುಮಾರು 76% ರಷ್ಟಿದೆ. 
>ಈ ಸೆಲ್ಫಿ ಅನಾಹುತಕ್ಕೆ ಬಲಿಯಾದವರಲ್ಲಿ 75% ರಷ್ಟು ಜನರು ಪುರುಷರಾಗಿದ್ದಾರೆ. 
>ಅದರಲ್ಲಿಯೂ 68% ದಷ್ಟು ಜನ 24 ವರ್ಷಕ್ಕಿಂತ ಕೆಳಾಗಿನವರಾಗಿದ್ದಾರೆ.

ಇದಕ್ಕೆಂದೇ ಒಂದು ಉತ್ತಮವಾದ ಉದಾಹರಣೆ ಎಂದರೆ 2015 ಮಾರ್ಚ್ ರಲ್ಲಿ ನಡೆದ ಘಟನೆ ತಿಳಿದಿರುವಂತೆ ಮಹಾರಾಷ್ಟ್ರದ ನಾಗ್ಪುರ್ ಸಮೀಪದ ಮುಂಗ್ರುರು ಕೆರೆಯಲ್ಲಿ ದೋಣಿಯೊಳಗಿನಿಂದಲೇ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಅದರಲ್ಲಿದ್ದ 7 ಮಂದಿ ಸಾವಿಗೀಡಾಗಿದ್ದರು. ಇದೇ ರೀತಿಯಲ್ಲಿ 2016ರಲ್ಲಿ ಉತ್ತರ ಪ್ರೆದೇಶದ ಕಾನ್ಪುರದಲ್ಲಿನ ಗಂಗಾ ನದಿಯಲ್ಲಿ ಸೆಲ್ಫಿ ತೆಗೆದುಕೊಳ್ಳ ಹೋಗಿದ್ದಜನ ಸಹ ಇದೆ ರೀತಿಯಲ್ಲಿ ಅಸುನೀಗಿದ್ದರು. 

logo
Ravi Rao

email

Advertisements

ಟ್ರೆಂಡಿಂಗ್ ಲೇಖನಗಳು

Advertisements

LATEST ARTICLES ಎಲ್ಲವನ್ನು ವೀಕ್ಷಿಸಿ

Advertisements
DMCA.com Protection Status