ಪ್ರಜ್ವಲ್ ದೇವರಾಜ್ ಅಭಿನಯದ ಬಹು ನಿರೀಕ್ಷಿತ 'Mafia' ಚಿತ್ರದ ಪೋಸ್ಟರ್ ರಿಲೀಸ್!

ಇವರಿಂದ Ravi Rao | ಪ್ರಕಟಿಸಲಾಗಿದೆ 04 Jul 2022
HIGHLIGHTS
  • ಡೈನಾಮಿಕ್ ಪ್ರಿನ್ಸ್ ಜನಪ್ರಿಯ ಖ್ಯಾತ ನಟ ಪ್ರಜ್ವಲ್ ದೇವರಾಜ್ (Prajwal Devaraj) ಇಂದು 4ನೇ ಜೂಲೈ 2022 ರಂದು ತಮ್ಮ ಜನ್ಮ

  • ಪ್ರಜ್ವಲ್ ದೇವರಾಜ್ ಅಭಿನಯದ ಬಹು ನಿರೀಕ್ಷಿತ ಮಾಫಿಯಾ (Mafia) ಚಿತ್ರದ ಪೋಸ್ಟರ್ ಅನ್ನು ಸಹ ಬಿಡುಗಡೆ

  • ಕ್ರೈಮ್ ಥ್ರಿಲ್ಲರ್ ಕಥಾಹಂದರ ಈ ಚಿತ್ರದ ಚಿತ್ರೀಕರಣ ಜುಲೈ ಅಂತ್ಯದ ವೇಳೆಗೆ ಮುಕ್ತಾಯವಾಗಲಿದ್ದು ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.

ಪ್ರಜ್ವಲ್ ದೇವರಾಜ್ ಅಭಿನಯದ ಬಹು ನಿರೀಕ್ಷಿತ 'Mafia' ಚಿತ್ರದ ಪೋಸ್ಟರ್ ರಿಲೀಸ್!
ಪ್ರಜ್ವಲ್ ದೇವರಾಜ್ ಅಭಿನಯದ ಬಹು ನಿರೀಕ್ಷಿತ 'Mafia' ಚಿತ್ರದ ಪೋಸ್ಟರ್ ರಿಲೀಸ್!

ಡೈನಾಮಿಕ್ ಪ್ರಿನ್ಸ್ ಜನಪ್ರಿಯ ಖ್ಯಾತ ನಟ ಪ್ರಜ್ವಲ್ ದೇವರಾಜ್ (Prajwal Devaraj) ಇಂದು 4ನೇ ಜೂಲೈ 2022 ರಂದು ತಮ್ಮ ಜನ್ಮದಿನದ ಸಂಭ್ರಮವನ್ನು ಆಚರಿಸುತ್ತದೆ. ಅದೇ ವೇಳೆಗೆ ಪ್ರಜ್ವಲ್ ದೇವರಾಜ್ ಅಭಿನಯದ ಬಹು ನಿರೀಕ್ಷಿತ ಮಾಫಿಯಾ (Mafia) ಚಿತ್ರದ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ. ಈ ಬಾರಿಯ ಹುಟ್ಟುಹಬ್ಬದ ಆಚರಣೆ ಮಾಡಿಕೊಳ್ಳದಿದ್ದರೂ ಸಹ ಪ್ರಜ್ವಲ್ ಅಭಿಮಾನಿಗಳಿಗೆ ಸಖತ್ ಗಿಫ್ಟ್‌ಗಳು ಸಿಕ್ಕಿವೆ. ಪ್ರಜ್ವಲ್ ನಟನೆಯ ಮುಂದಿನ ಸಿನಿಮಾಗಳ ಪೋಸ್ಟರ್‌ಗಳು ರಿಲೀಸ್ ಆಗಿವೆ. ಚಿತ್ರದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 7 ರ ವಿಜೇತ ಶೈನ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

'ಮಾಫಿಯಾ' (Mafia) ಚಿತ್ರದ ಖಡಕ್‌ ಲುಕ್

'ಮಾಫಿಯಾ' (Mafia) ಚಿತ್ರತಂಡ ಹೊಸ ಮಾಸ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ನಾಯಕ ಪ್ರಜ್ವಲ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳಿದೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಈ ಚಿತ್ರದ ಚಿತ್ರೀಕರಣ ಜುಲೈ ಅಂತ್ಯದ ವೇಳೆಗೆ ಮುಕ್ತಾಯವಾಗಲಿದ್ದು ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಲೋಹಿತ್ ನಿರ್ದೇಶಿಸುತ್ತಿದ್ದಾರೆ. ಎಸ್. ಪಾಂಡಿಕುಮಾರ್ ಛಾಯಾಗ್ರಹಣ ಹಾಗೂ ಅನೂಪ್ ಸೀಳಿನ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಪ್ರಜ್ವಲ್ ದೇವರಾಜ್ ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ಅಭಿನಯಿಸುತ್ತಿದ್ದಾರೆ. 

ಶೈನ್ ಶೆಟ್ಟಿ, ದೇವರಾಜ್, ವಿಜಯ್ ಚೆಂಡೂರ್, ವಾಸುಕಿ ವೈಭವ್, ಸಾಧುಕೋಕಿಲ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರದಲ್ಲಿ ಪ್ರಜ್ವಲ್ ದೇವಾರಾಜ್ ಪೊಲೀಸ್ ಅಧಿಕಾರಿಯಾಗಿದ್ದು, ಶೈನ್ ಶೆಟ್ಟಿ ಕೂಡ ಪೊಲೀಸ್ ಪಾತ್ರದಲ್ಲಿಯೇ ಕಾಣಿಸಿಕೊಳ್ಳುತ್ತಾರೆ. 25 ದಿನಗಳ ಚಿತ್ರೀಕರಣ ಪೂರ್ಣಗೊಂಡಿದ್ದು ಜೂನ್.16ರಿಂದ ಮುಂದಿನ ಭಾಗದ ಚಿತ್ರೀಕರಣ ಪುನರಾರಂಭಗೊಳ್ಳಲಿದೆ. 34 ದಿನಗಳಲ್ಲಿ ಈ ಚಿತ್ರೀಕರಣ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. 

ಬೆಂಗಳೂರು ಮತ್ತು ಹೈದರಾಬಾದ್ ನಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದ್ದು ಒಂದು ಹಾಡಿನ ಚಿತ್ರೀಕರಣವನ್ನು ಲಡಾಖ್ ನಲ್ಲಿ ನಡೆಸಲು ಯೋಜಿಸಲಾಗಿದೆ ಎಂದು ಚಿತ್ರದ ತಂಡ ತಿಳಿಸಿದೆ. ಚಿತ್ರಕ್ಕೆ ಅನೂಪ್ ಸೀಳಿನ್ ಅವರು ಸಂಗೀತ ನೀಡಿದ್ದು ಈಗಾಗಲೇ ತಮಿಳು, ತೆಲುಗು ಹಾಗೂ ಪಂಜಾಬಿ ಚಿತ್ರಗಳಲ್ಲಿ ಕೆಲಸ ಮಾಡಿರುವ ಸಿನಿಮಾಟೋಗ್ರಾಫರ್ ಡೆಮಲ್ ಕ್ಸೇವಿಯರ್ ಅವರು ಮಾಫಿಯಾ ಚಿತ್ರದ ಮೂಲಕ ಸ್ಯಾಂಡಲ್'ವುಡ್'ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

WEB TITLE

Most awaited prajwal devaraj starrer Mafia movie poster released

Tags
  • Mafia movie poster
  • prajwal devaraj movies
  • prajwal devaraj birthday
  • prajwal devaraj
  • mafia kannada movie
  • kannada movies
  • latest movies
Advertisements

ಟ್ರೆಂಡಿಂಗ್ ಲೇಖನಗಳು

Advertisements

LATEST ARTICLES ಎಲ್ಲವನ್ನು ವೀಕ್ಷಿಸಿ

Advertisements