Realme 11 Pro+ ಭಾರತದಲ್ಲಿ ಲಾಂಚ್ ಆಗುವುದನ್ನು ದೃಢಪಡಿಸಲಾಗಿದ್ದು Realme 11 Pro ಕೂಡ ಬರಲಿದೆ ಎನ್ನುವ ನಿರೀಕ್ಷೆಗಳಿವೆ
Realme 11 Pro ಮತ್ತು Realme 11 Pro+ ಎರಡೂ ಸ್ಮಾರ್ಟ್ಫೋನ್ ಒಂದೇ ರೀತಿಯ ಫೀಚರ್‌ಗಳನ್ನು ನೀಡುತ್ತವೆ
Realme 11 Pro ಮತ್ತು Realme 11 Pro+ ಸ್ಮಾರ್ಟ್ಫೋನ್ 6.7 ಇಂಚಿನ FHD+ AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು 360Hz ಟಚ್ ಸ್ಯಾಂಪ್ಲಿಂಗ್ ಹೊಂದಿದೆ
ಎರಡು ಫೋನ್‌ಗಳಲ್ಲಿ 12GB RAM ನೊಂದಿಗೆ Realme 11 Pro ನಲ್ಲಿ 512GB ಮತ್ತು Realme Pro+ ನಲ್ಲಿ 1TB ವರೆಗಿನ ಸ್ಟೋರೇಜ್ ಲಭ್ಯವಿರಲಿದೆ
Realme 11 Pro ಹಿಂಭಾಗದಲ್ಲಿ 108MP ಪ್ರೈಮರಿ ಕ್ಯಾಮೆರಾ ಮತ್ತು 2MP ಸೆಕೆಂಡರಿ ಕ್ಯಾಮೆರಾವನ್ನು ಪಡೆಯುತ್ತೀರಿ
Realme 11 Pro+ ಪ್ರೈಮರಿ 200MP ಕ್ಯಾಮೆರಾ 8MP ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು 2MP ಮ್ಯಾಕ್ರೋ ಸೆನ್ಸರ್ನೊಂದಿಗೆ ಟ್ರಿಪಲ್ ಬ್ಯಾಕ್ ಕ್ಯಾಮೆರಾಗಳನ್ನು ಹೊಂದಿದೆ
ಸೆಲ್ಫಿಗಳಿಗಾಗಿ ನೀವು Realme 11 Pro ನಲ್ಲಿ 16MP ಫ್ರಂಟ್ ಕ್ಯಾಮರಾ ಮತ್ತು Realme 11 Pro+ ನಲ್ಲಿ 32MP ಕ್ಯಾಮರಾವನ್ನು ಪಡೆಯುತ್ತೀರಿ
Realme 11 Pro ಮತ್ತು Realme 11 Pro+ ಎರಡೂ Android 13 ಆಧಾರಿತ Realme UI 4.0 ಕಸ್ಟಮ್ UI ಔಟ್-ಆಫ್-ದಿ-ಬಾಕ್ಸ್ ಅನ್ನು ರನ್ ಮಾಡುತ್ತದೆ
ನೀವು ಎರಡು ಫೋನ್‌ಗಳಲ್ಲಿ 5000mAh ಬ್ಯಾಟರಿಯನ್ನು ಪಡೆಯುತ್ತೀರಿ. ಆದರೆ Realme 11 Pro ಫೋನ್ 67W ಫಾಸ್ಟ್ ಚಾರ್ಜಿಂಗ್ ಮತ್ತು 11 Pro+ 100W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ
ಚೀನಾದಲ್ಲಿ Realme 11 Pro+ ಸುಮಾರು 24,900 ರೂಗಳಿಂದ ಪ್ರಾರಂಭವಾಗುತ್ತದೆ. ಹೈ-ಎಂಡ್ ವೇರಿಯಂಟ್‌ಗೆ 33,200 ರೂ ಆಗಲಿದೆ
Realme 11 Pro ಆರಂಭಿಕ ಬೆಲೆ ಸುಮಾರು 21,300 ಮತ್ತು ಟಾಪ್ ಎಂಡ್ ಮಾಡೆಲ್‌ಗೆ 27,300 ರೂ ಆಗಲಿದೆ. ಚೀನೀ ಮಾರುಕಟ್ಟೆಗೆ ಹೋಲಿಸಿದರೆ ಭಾರತದ ಬೆಲೆಯ ಭಿನ್ನವಾಗಿರುತ್ತದೆ