Vivo V50e 5G ಸ್ಮಾರ್ಟ್ಫೋನ್ 50MP Eye AutoFocus ಜೊತೆಗೆ ಬೆಲೆ ಮತ್ತು ಟಾಪ್ ಫೀಚರ್ಗಳೇನು ತಿಳಿಯಿರಿ!
Vivo V50e 5G ಫೋನ್ ಅಧಿಕೃತವಾಗಿ ಬಿಡುಗಡೆಯಾಗಿದೆ.
Vivo V50e 5G ಫೋನ್ 50MP Eye Autofocus ಕ್ಯಾಮೆರಾದೊಂದಿಗೆ ಬರುತ್ತದೆ.
Vivo V50e 5G ಫೋನ್ 8GB RAM ಆರಂಭಿಕ 28,999 ರೂಗಳಿಗೆ ನಿಗದಿಯಾಗಿದೆ.
Vivo V50e 5G Launched in India: ಭಾರತದಲ್ಲಿ ವಿವೋ ಸ್ಮಾರ್ಟ್ಫೋನ್ ಕಂಪನಿ ಇಂದು Vivo V50e 5G ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ಫೋನ್ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಮಾರಾಟಕ್ಕೆ ಲಭ್ಯವಾಗಲಿದೆ. Vivo V50e 5G ಸ್ಮಾರ್ಟ್ಫೋನ್ ವಿಶೇಷತೆಗಳನ್ನು ನೋಡುವುದಾದರೆ ಇದರಲ್ಲಿ ಬರೋಬ್ಬರಿ 50MP Eye Autofocus ಕ್ಯಾಮೆರಾ ಮತ್ತು 8GB RAM ಮತ್ತು 128GB ಸ್ಟೋರೇಜ್ ಆರಂಭಿಕ ಮಾದರಿಯನ್ನು ಅಧಿಕೃತವಾಗಿ ಪರಿಚಯಿಸಿದೆ. ಹಾಗಾದ್ರೆ ಈ ಸ್ಮಾರ್ಟ್ಫೋನ್ ಆಫರ್ ಬೆಲೆ ಎಷ್ಟು ಮತ್ತು ಇದರ ಟಾಪ್ ಫೀಚರ್ಗಳೇನು ಎಲ್ಲವನ್ನು ಈ ಕೆಳಗೆ ಪರಿಶೀಲಿಸೋಣ.
Surveyಭಾರತದಲ್ಲಿ Vivo V50e 5G ಸ್ಮಾರ್ಟ್ಫೋನ್ ಬೆಲೆ
Vivo V50e 5G ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ರೂಪಾಂತದರಲ್ಲಿ Flipkart ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹28,999 ರೂಗಳಿಗೆ ಮತ್ತು ಇದರ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹30,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಬಳಕೆದಾರರು ಇದನ್ನು ಆಯ್ದ ಬ್ಯಾಂಕ್ಗಳ ಕಾರ್ಡ್ ಬಳಸಿಕೊಂಡು ಸುಮಾರು 10% ಹೆಚ್ಚುವರಿ ಡಿಸ್ಕೌಂಟ್ ಸಹ ಪಡೆಯುವ ಮೂಲಕ ಈ ಸ್ಮಾರ್ಟ್ಫೋನ್ ಇನ್ನೂ ಕಡಿಮೆ ಬೆಲೆಗೆ ಖರೀದಿಸಬಹುದು.

Vivo V50e 5G ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆಯಾಗಿದ್ದು ಇದರ ಮೊದಲ ಮಾರಾಟವನ್ನು 17ನೇ ಏಪ್ರಿಲ್ 2025 ಮಧ್ಯಾಹ್ನ 12:00 ಗಂಟೆಯಿಂದ ವಿವೋ, ಫಲಿಪಕರ್ತ ಮತ್ತು ಅಮೆಜಾನ್ ಇಂಡಿಯಾ ಮತ್ತು ವಿವೋ ವೆಬ್‌ಸೈಟ್ ಮತ್ತು ಆಯ್ದ ಆಫ್‌ಲೈನ್ ರಿಟೇಲ್ ಸ್ಟೋರ್‌ಗಳ ಮೂಲಕ ಲಭ್ಯವಾಗಲಿದೆ. Vivo V50e 5G ಪರ್ಲ್ ವೈಟ್ ಮತ್ತು ಸಪಾಯಿರ್ಸಫೈಯರ್ ಬ್ಲೂ ಎಂಬ 2 ಆಕರ್ಷಕ ಬಣ್ಣಗಳಲ್ಲಿ ಖರೀದಿಸಬಹುದು.
ಭಾರತದಲ್ಲಿ Vivo V50e 5G ಫೀಚರ್ ಮತ್ತು ವಿಶೇಷಣಗಳೇನು?
ಈ ಮುಂಬರಲಿರುವ ಈ Vivo V50e ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ದರದೊಂದಿಗೆ 6.77 ಇಂಚಿನ FHD+ ಕ್ವಾಡ್-ಕರ್ವ್ಡ್ AMOLED ಪ್ಯಾನೆಲ್‌ನೊಂದಿಗೆ ಬಿಡುಗಡೆಯಾಗಿದೆ. ಈ ಸ್ಮಾರ್ಟ್ಫೋನ್ 4,500 nits ಗರಿಷ್ಠ ಹೊಳಪನ್ನು ಪಡೆಯಬಹುದು. ಕ್ಯಾಮೆರಾಗಳ ವಿಷಯದಲ್ಲಿ ಸ್ಮಾರ್ಟ್ಫೋನ್ OIS ಜೊತೆಗೆ 50MP IMX882 ಸಂವೇದಕ ಮತ್ತು 8MP ಅಲ್ಟ್ರಾವೈಡ್ ಸೆನ್ಸರ್ ಅನ್ನು ಒಳಗೊಂಡಂತೆ ಡ್ಯುಯಲ್ ಕ್ಯಾಮೆರಾ ಸೆಟಪ್ ಬಂದ್ರೆ ಇದರ ಮುಂಭಾಗದಲ್ಲಿ ಸ್ಮಾರ್ಟ್ಫೋನ್ 50MP ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿದೆ.

Vivo V50e ಸ್ಮಾರ್ಟ್‌ಫೋನ್ MediaTek Dimensity 7300 ಚಿಪ್‌ಸೆಟ್‌ನಿಂದ ಶಕ್ತಿಯನ್ನು ಪಡೆಯುತ್ತದೆ. ಅಲ್ಲದೆ LPDDR4X ಮತ್ತು UFS 2.2 ಸ್ಟೋರೇಜ್‌ನೊಂದಿಗೆ ಬರಬಹುದು. ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 15 ಆಧಾರಿತ FunTouch OS 15 ನಲ್ಲಿ ಕಾರ್ಯನಿರ್ವಹಿಸುವುದರೊಂದಿಗೆ 90W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5600mAh ಬ್ಯಾಟರಿಯನ್ನು IP68+IP69 ಪ್ರಮಾಣೀಕರಣವನ್ನು ಸಹ ಪಡೆದಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile