ಭಾರತದ ಜನಪ್ರಿಯ ಮತ್ತು ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ (Reliance Jio) ಸದ್ದಿಲ್ಲದೇ ಕ್ರಿಕೆಟ್ ಪ್ರಿಯರಿಗಾಗಿ ಹೊಸ ಡೇಟಾ ವೋಚರ್ ಯೋಜನೆಯೊಂದನ್ನು ಪರಿಚಯಿಸಿದೆ. ಈ ಹೊಸ ಡೇಟಾ ವೋಚರ್ ಪ್ಯಾಕ್ ಬೆಲೆ 195 ರೂಗಳಾಗಿದ್ದು ಇದರಲ್ಲಿ ಡೇಟಾದೊಂದಿಗೆ ಬರೋಬ್ಬರಿ 3 ತಿಂಗಳಿಗೆ ಉಚಿತವಾಗಿ ಜಿಯೋ ಹಾಟ್‌ಸ್ಟಾರ್ ಚಂದಾದಾರಿಕೆಯೊಂದಿಗೆ (Free JioHotstar Subscription) ನೀಡುತ್ತಿದೆ. ಅಲ್ಲದೆ ಈ ಹೊಸ ಯೋಜನೆಯಲ್ಲಿ ಕೇವಲ ಡೇಟಾ ಮಾತ್ರ ಲಭ್ಯವಿದ್ದು ಯಾವುದೇ ವಾಯ್ಸ್ ಕರೆಗಳ ಸೌಲಭ್ಯವಿಲ್ಲವೆಂನ್ನುವುದನ್ನು ಗಮನಿಸಬೇಕಿದೆ.
ಈ ಡೇಟಾ ಮಾತ್ರ ರೀಚಾರ್ಜ್ ಯೋಜನೆಯು ಮುಂಬರುವ ಐಪಿಎಲ್ 2025 ಜೊತೆಗೆ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾವಳಿಗಳಾದ WPL 2025 ಮತ್ತು ICC ಚಾಂಪಿಯನ್ಸ್ ಟ್ರೋಫಿ 2025 ನೇರ ಪ್ರಸಾರ ಸೇರಿದಂತೆ ಸಂಪೂರ್ಣ ಜಿಯೋ ಹಾಟ್‌ಸ್ಟಾರ್ ಕ್ಯಾಟಲಾಗ್‌ಗೆ ಪ್ರವೇಶವನ್ನು ಒದಗಿಸುತ್ತದೆ. ಮುಂಬರುವ IPL 2025 ಅನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಲೈವ್-ಸ್ಟ್ರೀಮ್ ಮಾಡಲು ಮೌಲ್ಯ ರೀಚಾರ್ಜ್ ಯೋಜನೆಯಾಗಿದೆ.
ಮೂರು ತಿಂಗಳಿಗೆ 149 ರೂ.ಗಳ ಸ್ವತಂತ್ರ ಸೇವೆಯಾಗಿ ಜಿಯೋ ಹಾಟ್‌ಸ್ಟಾರ್ ಅನ್ನು ಖರೀದಿಸುವುದಕ್ಕೆ ಹೋಲಿಸಿದರೆ ಹೆಚ್ಚುವರಿ 46 ರೂ.ಗಳಿಗೆ ಬಳಕೆದಾರರು ಹೆಚ್ಚುವರಿ 15GB ಡೇಟಾವನ್ನು ಪಡೆಯುತ್ತಾರೆ. ಇದು ವಿಶೇಷವಾಗಿ ಲೈವ್ ಸ್ಟ್ರೀಮಿಂಗ್ ಪಂದ್ಯಗಳಿಗೆ ಉಪಯುಕ್ತವಾಗಿದೆ. ವಿಶೇಷವಾಗಿ 4G ಸ್ಮಾರ್ಟ್‌ಫೋನ್ ಅಥವಾ ಅನಿಯಮಿತ 5G ಡೇಟಾ ಇಲ್ಲದೆ ಡೇಟಾ ಪ್ಯಾಕ್ ಬಳಸುವವರಿಗೆ ಒದಗಿಸುತ್ತದೆ.
ಇದು ಜಿಯೋ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಒಳಗೊಂಡಿರುವ ಎರಡನೇ ರೀಚಾರ್ಜ್ ಯೋಜನೆಯಾಗಿದೆ. ಮೊದಲನೆಯದು ರೂ. 949 ಯೋಜನೆ ಇದು 84 ದಿನಗಳ ಮಾನ್ಯತೆ ದಿನಕ್ಕೆ 2GB 4G ಡೇಟಾ, ಅನಿಯಮಿತ ಕರೆ, 5G ಡೇಟಾ ಮತ್ತು ದಿನಕ್ಕೆ 100 SMS ಹೊಂದಿರುವ ನಿಯಮಿತ ರೀಚಾರ್ಜ್ ಯೋಜನೆಯಾಗಿದ್ದು ಜೊತೆಗೆ 90 ದಿನಗಳವರೆಗೆ ಜಿಯೋ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ನೀಡುತ್ತದೆ.
ನೀವು ಈಗಾಗಲೇ ಬೇಸ್ ಪ್ಲಾನ್ ಹೊಂದಿಲ್ಲದಿದ್ದರೆ ಜಿಯೋದ 949 ರೂ. ರೀಚಾರ್ಜ್ ಪ್ಲಾನ್ ಹೆಚ್ಚಿನ ಮೌಲ್ಯವನ್ನು ನೀಡುತ್ತದೆ. ಆದಾಗ್ಯೂ ನೀವು ಈಗಾಗಲೇ ರೀಚಾರ್ಜ್ ಪ್ಲಾನ್ ಹೊಂದಿದ್ದರೆ ಹೊಸ 195 ರೂ. ರೀಚಾರ್ಜ್ ಪ್ಲಾನ್ 15GB ಹೆಚ್ಚುವರಿ ಡೇಟಾದೊಂದಿಗೆ ಜಿಯೋ ಹಾಟ್‌ಸ್ಟಾರ್‌ಗೆ ಪ್ರವೇಶವನ್ನು ಒದಗಿಸುತ್ತದೆ.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile