ಮುಂಬರಲಿರುವ POCO M7 5G ಸ್ಮಾರ್ಟ್ಫೋನ್ ಲಾಂಚ್ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?
POCO M7 5G ಸ್ಮಾರ್ಟ್ಫೋನ್ ಆರಂಭಿಕ ಕೇವಲ ಕೈಗೆಟುವ ಬೆಲೆ 10,000 ರೂಗಳೊಳಗೆ ಬರಲಿದೆ.
POCO M7 5G ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲು ಡೇಟ್ ಕಂಫಾರ್ಮ್ ಮಾಡಿದೆ.
POCO M7 5G ಸ್ಮಾರ್ಟ್ಫೋನ್ 6GB ಮತ್ತು ಹೆಚ್ಚುವರಿಯಾಗಿ 6GB ವರ್ಚುಯಲ್ RAM ಬೆಂಬಲದೊಂದಿಗೆ ಬರುತ್ತದೆ.
POCO M7 5G Launch Date Confirmed: ಭಾರತದಲ್ಲಿ ಚೀನಾದ ಸ್ಮಾರ್ಟ್ಫೋನ್ ಬ್ರಾಂಡ್ ಪೊಕೋ (POCO) ಸ್ಮಾರ್ಟ್ಫೋನ್ ಬ್ರಾಂಡ್ ತನ್ನ ಮುಂಬರಲಿರುವ POCO M7 5G ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲು ಡೇಟ್ ಕಂಫಾರ್ಮ್ ಮಾಡಿದೆ. ಪೊಕೋ ಈ ಸ್ಮಾರ್ಟ್ಫೋನ್ ಕೇವಲ ಕೈಗೆಟುವ 10,000 ರೂಗಳೊಳಗೆ ಆರಂಭಿಕ ರೂಪಾಂತರವನ್ನು 6GB ಮತ್ತು ಹೆಚ್ಚುವರಿಯಾಗಿ 6GB ವರ್ಚುಯಲ್ RAM ಬೆಂಬಲದೊಂದಿಗೆ ಬರಲು ಸಿದ್ಧವಾಗಿದೆ. ಈ POCO M7 5G ಸ್ಮಾರ್ಟ್ಫೋನ್ ಬಜೆಟ್ ಅನ್ನು ಸಹ ಪ್ರಕಟಿಸಿದ್ದು ಕೇವಲ 10,000 ಬಿಡುಗಡೆಗೊಳಿಸುವುದಾಗಿ ಖಚಿತಪಡಿಸಿದೆ.
Surveyಭಾರತದಲ್ಲಿ POCO M7 5G Launch Date Confirmed
ಚೀನಾದ ಈ ಸ್ಮಾರ್ಟ್ಫೋನ್ ಬ್ರಾಂಡ್ ತನ್ನ ಮುಂಬರಲಿರುವ ಈ ಸ್ಮಾರ್ಟ್ಫೋನ್ ಬಿಡುಗಡೆಯ ಬಗ್ಗೆ ತಮ್ಮ ಅಧಿಕೃತ ಟ್ವಿಟ್ಟರ್ ಮತ್ತು ಫ್ಲಿಪ್ಕಾರ್ಟ್ ಮೂಲಕ ಪೋಸ್ಟ್ ಮಾಡಲಾಗಿದ್ದು POCO M7 5G ಸ್ಮಾರ್ಟ್ಫೋನ್ ಮುಂದಿನ ತಿಂಗಳು ಅಂದ್ರೆ 3ನೇ ಮಾರ್ಚ್ 2025 ರಂದು ಮಧ್ಯಾಹ್ನ 12:00 ಗಂಟೆಗೆ ಅಧಿಕೃತವಾಗಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈಗಾಗಲೇ ಮೇಲೆ ತಿಳಿಸಿರುವಂತೆ ಈ ಸ್ಮಾರ್ಟ್ಫೋನ್ ಅನ್ನು ಆರಂಭಿಕವಾಗಿ 6GB RAM ಮತ್ತು 128GB ಸ್ಟೋರೇಜ್ ಕೇವಲ 10,000 ರೂಗಳೊಳಗೆ ಬರುವುದಾಗಿ ಕಂಫಾರ್ಮ್ ಮಾಡಿದೆ. ಇದರ ಲೈವ್ ಲಾಂಚ್ ಸ್ಟ್ರೀಮಿಂಗ್ ಅನ್ನು ಪೊಕೋ ಇಂಡಿಯಾದ ಯುಟ್ಯೂಬ್ ಚಾನಲ್‌ನಲ್ಲಿ ವೀಕ್ಷಿಸಬಹುದು.
No lags. No glitches. Just seamless connectivity.#POCOM75G #TheBigShow. 📶
— POCO India (@IndiaPOCO) February 26, 2025
Launching on 3rd March on #Flipkart
Know More: https://t.co/7zDmIgRLN0@Snapdragon_IN pic.twitter.com/0Fuik9NcQg
POCO M7 5G ನಿರೀಕ್ಷಿತ ಫೀಚರ್ ಮತ್ತು ವಿಶೇಷತೆಗಳೇನು?
POCO M7 5G ಸ್ಮಾರ್ಟ್ಫೋನ್ 6.74 ಇಂಚಿನ HD+ ಡಿಸ್ಪ್ಲೇ (720×1,600 ಪಿಕ್ಸೆಲ್‌ಗಳು) ಜೊತೆಗೆ ಸುಗಮ 90Hz ರಿಫ್ರೆಶ್ ದರದೊಂದಿಗೆ ಬರುವ ನಿರೀಕ್ಷೆಯಿದೆ. ಇದು MediaTek Dimensity 6100+ SoC ನಿಂದ ಚಾಲಿತವಾಗಿದ್ದು Adreno 613 GPU ಮತ್ತು 6GB RAM ನೊಂದಿಗೆ ಜೋಡಿಸಲ್ಪಟ್ಟಿದ್ದು ಆಂಡ್ರಾಯ್ಡ್ 14-ಆಧಾರಿತ HyperOS ನಲ್ಲಿ ಕಾರ್ಯನಿರ್ವಹಿಸುತ್ತದೆ.
Also Read: Maha Shivaratri Offer: 32 ಇಂಚಿನ ಈ ಜಬರ್ದಸ್ತ್ ಸ್ಮಾರ್ಟ್ ಟಿವಿ ಕೇವಲ ₹6,824 ರೂಗಳಿಗೆ ಮಾರಾಟವಾಗುತ್ತಿದೆ!
ಛಾಯಾಗ್ರಹಣಕ್ಕಾಗಿ ಇದು 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಸೆನ್ಸರ್ನೊಂದಿಗೆ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿದೆ. ಇಅದರ ಕ್ರಮವಾಗಿ ಫೋನ್ ವಿಡಿಯೋ ಕರೆ ಮತ್ತು ಸೆಲ್ಫಿಗಳಿಗಾಗಿ 8MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್ 18W ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದುವ ಸಾಧ್ಯತೆಯಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile