8GB RAM ಮತ್ತು 32MP ಸೆಲ್ಫಿ ಕ್ಯಾಮೆರಾದ TECNO SPARK 20 ಬಿಡುಗಡೆ! ಮೊದಲ ಮಾರಾಟದ ಬೆಲೆ ಮತ್ತು ಫೀಚರ್ಗಳೇನು?
ಕೈಗೆಟಕುವ ಬೆಲೆಗೆ ಮತ್ತೊಂದು ಕಡಿಮೆ ಬೆಲೆಗೆ ಟೆಕ್ನೋ (TECNO) ಕಂಪನಿಯ ಲೇಟೆಸ್ಟ್ ಫೀಚರ್ಗಳ ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ.
TECNO SPARK 20 ಅನ್ನು 8GB RAM ಮತ್ತು 32MP ಸೆಲ್ಫಿ ಕ್ಯಾಮೆರಾ ಮತ್ತು 256GB ಸ್ಟೋರೇಜ್ನೊಂದಿಗೆ ಭಾರತದಲ್ಲಿ ಬಿಡುಗಡೆ
ಪಂಚ್-ಹೋಲ್ ವಿನ್ಯಾಸದೊಂದಿಗೆ 6.56 ಇಂಚಿನ LCD ಪ್ಯಾನೆಲ್ ಅನ್ನು ಹೊಂದಿದೆ. ಇದು HD+ ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ದರವನ್ನು ಹೊಂದಿದೆ.
ಭಾರತದಲ್ಲಿ ಕೈಗೆಟಕುವ ಬೆಲೆಗೆ ಮತ್ತೊಂದು ಕಡಿಮೆ ಬೆಲೆಗೆ ಟೆಕ್ನೋ (TECNO) ಕಂಪನಿಯ ಲೇಟೆಸ್ಟ್ ಫೀಚರ್ಗಳ ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ. ಈ ಸ್ಮಾರ್ಟ್ಫೋನ್ ನಿಖರವಾಗಿ ಐಫೋನ್ನಂತೆಯೇ ಡಿಸೈನ್ ಮತ್ತು ಸ್ಟೈಲ್ ಹೊಂದಿದೆ. ಈ ಟೆಕ್ನೋ ಸ್ಮಾರ್ಟ್ಫೋನ್ ಅನ್ನು TECNO SPARK 20 ಎಂದು ಹೆಸರಿಸಿದ್ದು ಸ್ಮಾರ್ಟ್ಫೋನ್ 8GB RAM ಮತ್ತು 32MP ಸೆಲ್ಫಿ ಕ್ಯಾಮೆರಾ ಮತ್ತು 256GB ಸ್ಟೋರೇಜ್ ಪವರ್ಫುಲ್ ವೈಶಿಷ್ಟ್ಯಗಳೊಂದಿಗೆ ಪ್ಯಾಕ್ ಆಗಿದೆ. ನೀವು ಈ ಫೋನ್ ಅನ್ನು ಖರೀದಿಸಲು ಬಯಸಿದರೆ ಇಂದು ಇದರ ಮೊದಲ ಮಾರಾಟ ಶುರುವಾಗಲಿದ್ದು ಉತ್ತಮ ವೈಶಿಷ್ಟ್ಯಗಳೊಂದಿಗೆ ಕೈಗೆಟಕುವ ಬೆಲೆಗೆ ಖರೀದಿಸಬಹುದು.
SurveyAlso Read: Paytm ಪೇಮೆಂಟ್ ಬ್ಯಾಂಕ್ ಮುಚ್ಚಿದರೆ ನಿಮ್ಮ ವಾಲೆಟ್ನಲ್ಲಿರುವ ಹಣ ಮತ್ತು FASTag ಏನಾಗುತ್ತೆ?
TECNO SPARK 20 ಮೊದಲ ಮಾರಾಟ ಇಂದು!
ಈ ಫೋನ್ ಅನ್ನು ಅಮೆಜಾನ್ ಇಂಡಿಯಾ ವೆಬ್ಸೈಟ್ Amazon.com ಮತ್ತು ಅಮೆಜಾನ್ ಅಪ್ಲಿಕೇಶನ್ನಿಂದ ಇಂದು ಅಂದ್ರೆ 2ನೇ ಫೆಬ್ರವರಿ 2024 ರಿಂದ ಮಧ್ಯಾಹ್ನ 12:00 ಗಂಟೆಗೆ ಖರೀದಿಸಬಹುದು. ಆಸಕ್ತರು ಈ ಸ್ಮಾರ್ಟ್ಫೋನ್ ಅನ್ನು ನಿಯಾನ್ ಗೋಲ್ಡ್, ಸೈಬರ್ ವೈಟ್ ಮತ್ತು ಮ್ಯಾಜಿಕ್ ಸ್ಕಿನ್ ಬ್ಲೂ ಬಣ್ಣಗಳೊಂದಿಗೆ ಪಡೆಯಬಹುದು. ಅಲ್ಲದೆ 8GB RAM ಮತ್ತು 256GB ಸ್ಟೋರೇಜ್ನೊಂದಿಗೆ ಭಾರತದಲ್ಲಿ ಬಿಡುಗಡೆಯಾದ TECNO SPARK 20 ಮೊದಲ ಮಾರಾಟದ ಬೆಲೆ ಮತ್ತು ಕೊಡುಗೆಗಳನ್ನು ಈಗಾಗಲೇ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬಹಿರಂಗಪಡಿಸಿದೆ. ಇದರ ಆರಂಭಿಕ ಬೆಲೆಯನ್ನು 10,499 ರೂಗಳಲ್ಲಿ ನಿಗದಿಪಡಿಸಲಾಗಿದೆ.
The final countdown begins for #TheUncompromised 🕛
— TECNO Mobile India (@TecnoMobileInd) February 1, 2024
Sale of #TECNOSpark20 starts tomorrow at 12 AM IST at ₹10,499 on @amazonIN.
Get seamless streaming of 23 OTTs worth ₹5,604 free on @ottplayapp.
Get Notified: https://t.co/atAvCTQeJt#TECNOSmartphones pic.twitter.com/aSEVECRDtR
19 OTT ಪ್ಲಾಟ್ಫಾರ್ಮ್ಗಳಿಗೆ ಪ್ರವೇಶ
ನೀವು ಫೋನ್ ಜೊತೆಗೆ ಕೆಲವು ಬ್ಯಾಂಕ್ ಕೊಡುಗೆಗಳನ್ನು ಸಹ ಪಡೆಯುತ್ತೀರಿ, ಮಾರಾಟ ಪ್ರಾರಂಭವಾದ ನಂತರವೇ ಅದನ್ನು ಘೋಷಿಸಲಾಗುತ್ತದೆ. TECNO SPARK 20 ಅನ್ನು ಖರೀದಿಸಿದಾಗ 23 OTT Play ಅಪ್ಲಿಕೇಶನ್ಗಳ ಉಚಿತ ವಾರ್ಷಿಕ ಚಂದಾದಾರಿಕೆಯನ್ನು ನೀಡಲಾಗುವುದು ಎಂದು ಘೋಷಿಸಿದೆ. ಈ ಸೌಲಭ್ಯದ ಸಾಮಾನ್ಯ ಬೆಲೆಯ ಬಗ್ಗೆ ಮಾತನಾಡುವುದಾದರೆ ಸುಮಾರು ರೂ 5,604 ಮೌಲ್ಯದ್ದಾಗಿದೆ. ಈ OTT ಸೇವೆಗಳಲ್ಲಿ ನಿಮಗೆ SonyLIV, Zee5, Lionsgate Play ಮತ್ತು Fancode ನಂತಹ 19 OTT ಪ್ಲಾಟ್ಫಾರ್ಮ್ಗಳಿಗೆ ಪ್ರವೇಶವನ್ನು ನೀಡಲಾಗುತ್ತದೆ.
TECNO SPARK 20 ವಿಶೇಷತೆ ಮತ್ತು ಫೀಚರ್ಗಳು
ಸ್ಮಾರ್ಟ್ಫೋನ್ ಡಿಸ್ಪ್ಲೇಯಲ್ಲಿ ಪಂಚ್-ಹೋಲ್ ವಿನ್ಯಾಸದೊಂದಿಗೆ 6.56 ಇಂಚಿನ LCD ಪ್ಯಾನೆಲ್ ಅನ್ನು ಹೊಂದಿದೆ. ಇದು HD+ ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ದರವನ್ನು ಹೊಂದಿದೆ. ಇದರ ಕ್ಯಾಮೆರಾದಲ್ಲಿ 50MP ಪ್ರೈಮರಿ ಸೆನ್ಸರ್ ಹಿಂಭಾಗದ ಕ್ಯಾಮೆರಾವನ್ನು ಹೊಂದಿದೆ. ಮತ್ತೊಂದು ಸೆಕೆಂಡರಿ ಸೆನ್ಸಾರ್ ಮತ್ತು ಎಲ್ಇಡಿ ಫ್ಲ್ಯಾಷ್ ಅನ್ನು ಸಹ ನೀಡಲಾಗಿದೆ. ಈ ಫೋನ್ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 32MP ಕ್ಯಾಮೆರಾವನ್ನು ಹೊಂದಿರುತ್ತದೆ. ಈ TECNO SPARK 20 ಫೋನ್ ಫೋನ್ Android 13 ಜೊತೆಗೆ MediaTek Helio G85 ಪ್ರೊಸೆಸರ್ ಹೊಂದಿದೆ.
ಫೋನ್ 8GB RAM ಅನ್ನು ಹೊಂದಿದ್ದು ಇದನ್ನು 16GB ವರೆಗೆ ವಿಸ್ತರಿಸಬಹುದಾಗಿದೆ. ಇದಲ್ಲದೆ ಈ ಫೋನ್ IP53 ರೇಟ್ ಮಾಡಲ್ಪಟ್ಟಿದ್ದು ಇದು ನೀರಿನ ಸ್ಪ್ಲಾಶ್ಗಳಿಂದ ರಕ್ಷಿಸುತ್ತದೆ. TECNO SPARK 20 ಸ್ಮಾರ್ಟ್ಫೋನ್ 5000mAh ಬ್ಯಾಟರಿಯನ್ನು ಹೊಂದಿದೆ. ಇದು 18W ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು USB ಟೈಪ್-ಸಿ ಪೋರ್ಟ್ನೊಂದಿಗೆ ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸರ್ ಹೊಂದಿದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile