ಸಾಮಾನ್ಯ ಸಿಮ್ ಕಾರ್ಡ್‌ಗಿಂತ e-SIM ಕಾರ್ಡ್ ಉತ್ತಮವೇ? ಉತ್ತರ ಈ ಅಂಶಗಳಲ್ಲಿದೆ ನೀವೇ ನೋಡಿ | Tech News

HIGHLIGHTS

ಸಾಮಾನ್ಯ ಸಿಮ್‌ಗಿಂತ ಇ-ಸಿಮ್ ಉತ್ತಮ ಆಯ್ಕೆಯಾಗಿದೆ

ಏರ್‌ಟೆಲ್ ಸಿಇಒ ಇಮೇಲ್‌ನಲ್ಲಿ ಬಳಕೆದಾರರಿಗೆ ಇ-ಸಿಮ್‌ಗೆ ಬದಲಾಯಿಸಲು ಸಲಹೆ ನೀಡಿದರು.

ನಿಮ್ಮ ಫೋನ್ ಕಳೆದುಹೋದರೆ ಅಥವಾ ಕದ್ದಿದ್ದರೆ ನೀವು ಅದನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು.

ಸಾಮಾನ್ಯ ಸಿಮ್ ಕಾರ್ಡ್‌ಗಿಂತ e-SIM ಕಾರ್ಡ್ ಉತ್ತಮವೇ? ಉತ್ತರ ಈ ಅಂಶಗಳಲ್ಲಿದೆ ನೀವೇ ನೋಡಿ | Tech News

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ ಇ-ಸಿಮ್ (e-SIM) ಟ್ರೆಂಡ್ ಸಾಕಷ್ಟು ಹೆಚ್ಚಾಗಿದೆ. ಟೆಲಿಕಾಂ ಕಂಪನಿಗಳು ಭೌತಿಕ ಬದಲಿಗೆ eSim ಅನ್ನು ಬಳಸಲು ಗ್ರಾಹಕರಿಗೆ ಸಲಹೆ ನೀಡುತ್ತಿರುವುದು ಕಾಣಬಹುದು. ಅಲ್ಲದೆ ಸಾಮಾನ್ಯ ಪ್ರಶ್ನೆ ಅಂದ್ರೆ ಸಾಮಾನ್ಯ ಸಿಮ್‌ಗಿಂತ ಇ-ಸಿಮ್ ಉತ್ತಮ ಆಯ್ಕೆಯಾಗಿದೆಯೇ ಎನ್ನುವುದು ಅಲ್ಲದೆ ಇತ್ತೀಚೆಗಷ್ಟೇ ಭಾರ್ತಿ ಏರ್ಟೆಲ್ ಸಿಇಒ ಆಗಿರುವ ಗೋಪಾಲ್ ವಿಠ್ಠಲ್ ಕೂಡ ತಮ್ಮ ಗ್ರಾಹಕರಿಗೆ ಇಮೇಲ್ ಕಳುಹಿಸಿ ಇ-ಸಿಮ್‌ಗೆ ಬದಲಾಯಿಸುವಂತೆ ಸಲಹೆ ನೀಡಿದ್ದಾರೆ. ಆದರೆ ನಮಗೆಲ್ಲ ಈ ಭೌತಿಕ ಸಿಮ್‌ಗಿಂತ eSim ಏಕೆ ಉತ್ತಮ ಎಂದು ತಿಳಿಯುವುದು ಬಹು ಮುಖ್ಯವಾಗಿದೆ.

Digit.in Survey
✅ Thank you for completing the survey!

Also Read: 8GB RAM ಮತ್ತು Powerful ಪ್ರೊಸೆಸರ್‌ನೊಂದಿಗೆ OnePlus 12 ಮುಂದಿನ ವರ್ಷ ಬಿಡುಗಡೆಗೆ ಸಜ್ಜು

ಸಾಮಾನ್ಯ ಸಿಮ್ ಕಾರ್ಡ್‌ಗಿಂತ e-SIM ಕಾರ್ಡ್ ಉತ್ತಮವೇ?

ಸಾಮಾನ್ಯ ಸಿಮ್‌ಗಿಂತ ಇ-ಸಿಮ್ ಉತ್ತಮ ಆಯ್ಕೆಯಾಗಿದೆ. ಪ್ರಸಿದ್ಧ ಟೆಲಿಕಾಂ ಕಂಪನಿಯ ಸಿಇಒ ತನ್ನ ಗ್ರಾಹಕರನ್ನು ಇಷ್ಟು ದೊಡ್ಡ ಹೆಜ್ಜೆ ಇಡಲು ಏಕೆ ಕೇಳುತ್ತಾರೆ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಅಂತಹ ಪರಿಸ್ಥಿತಿಯಲ್ಲಿ ಇ-ಸಿಮ್‌ನ ಪ್ರಯೋಜನಗಳೇನು? ಮತ್ತು ಭೌತಿಕ ಸಿಮ್‌ಗಿಂತ ಅದು ಹೇಗೆ ಉತ್ತಮವಾಗಿದೆ? ಫಿಸಿಕಲ್ ಸಿಮ್‌ಗಿಂತ ಇದು ಹೇಗೆ ಉತ್ತಮ ಎಂಬ ಪ್ರಶ್ನೆ ಈಗ ಉದ್ಭವಿಸುತ್ತದೆ. ಇದನ್ನು ತಿಳಿದುಕೊಳ್ಳುವುದು ನಮಗೆ ಮುಖ್ಯವಾಗಿದೆ. ಆದರೆ ಅದಕ್ಕೂ ಮೊದಲು eSim ಬಗ್ಗೆ ತಿಳಿದುಕೊಳ್ಳೋಣ.

ಇ-ಸಿಮ್ (e-SIM) ಎಂದರೇನು?

ನೀವು ಇ-ಸಿಮ್ ಸಹ ಸಾಮಾನ್ಯ ಸಿಮ್ ಕಾರ್ಡ್‌ನಂತಿರುತ್ತದೆ ಆದರೆ ಸಿಮ್ ಸ್ಲಾಟ್‌ನಲ್ಲಿ ಸೇರಿಸುವ ಬದಲು ಅದನ್ನು ನಿಮ್ಮ ಡಿವೈಸ್‌ನಲ್ಲಿ ಹಳವಡಿಸಲಾಗುತ್ತದೆ. ಸಾಮಾನ್ಯ ಉದಾಹರಣೆಗಾಗಿ ಮೊದಲು ಬರುತ್ತಿದ್ದ CDMA ಕನೆಕ್ಷನ್ಗಳಂತೆ ಡಿವೈಸ್ನೊಂದಿಗೆ ಸ್ಥಾಪಿಸಲ್ಪಡುವ ಸಿಮ್ ಕಾರ್ಡ್ ಆಗಿದೆ. eSIM ಎನ್ನುವುದು ಡಿಜಿಟಲ್ ಸಿಮ್ ಕಾರ್ಡ್‌ನ ಒಂದು ರೂಪವಾಗಿದ್ದು ಅದನ್ನು ನೇರವಾಗಿ ಡಿವೈಸ್‌ನಲ್ಲಿ ಎಂಬೆಡ್ ಮಾಡಲಾಗುತ್ತದೆ. ಇದು ಸಾಮಾನ್ಯವಾಗಿ PVC ಯಿಂದ ಮಾಡಲಾದ ಇಂಟಿಗ್ರೇಟೆಡ್ ಸರ್ಕ್ಯೂಟ್‌ನ ಬದಲಿಗೆ eSIM ಡಿವೈಸ್‌ಗೆ ಶಾಶ್ವತವಾಗಿ ಲಗತ್ತಿಸಲಾದ eUICC ಚಿಪ್‌ನಲ್ಲಿ ಈ ಸಾಫ್ಟ್‌ವೇರ್ ನೀಡಲಾಗುತ್ತದೆ.

e-SIM Card

ಉತ್ತಮ ಕನೆಕ್ಷನ್ ಪಡೆಯಲು ಅನುಕೂಲ

ಇ-ಸಿಮ್‌ನೊಂದಿಗೆ ನೀವು ಉತ್ತಮ ಸಂಪರ್ಕವನ್ನು ಪಡೆಯುತ್ತೀರಿ ಇದು ನಿಮಗೆ ಒಂದು ಡಿವೈಸ್‌ದಿಂದ ಇನ್ನೊಂದಕ್ಕೆ ಬದಲಾಯಿಸಲು ತುಂಬಾ ಸುಲಭವಾಗುತ್ತದೆ. ಇದರ ಹೊರತಾಗಿ ಫೋನ್ ಕಳ್ಳತನ ಅಥವಾ ಕಳೆದುಹೋದ ಸಂದರ್ಭದಲ್ಲಿ ಫೋನ್ನಿಂದ ಅದನ್ನು ತೆಗೆಯುವುದು ಅಸಾಧ್ಯವಾಗಿದೆ.

ಸುಲಭವಾಗಿ ಟ್ರ್ಯಾಕ್ ಮಾಡಬಹುದು.

ಒಂದು ವೇಳೆ ನಿಮ್ಮ ಫೋನ್ ಕಳೆದುಹೋದರೆ ಅಥವಾ ಯಾರಾದರೂ ಕದ್ದಿದ್ದರೆ ನೀವು ಅದನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು. ಏಕೆಂದರೆ ಭೌತಿಕ ಸಿಮ್‌ನಂತೆ ಯಾರೂ ಅದನ್ನು ನಿಮ್ಮ ಫೋನ್‌ನಿಂದ ಸುಲಭವಾಗಿ ತೆಗೆದುಹಾಕಲು ಸಾಧ್ಯವಿಲ್ಲದ ಕಾರಣ ಅಷ್ಟಾಗಿ ಗಾಬರಿಯಾಗುವ ಅಗತ್ಯವಿರುವುದಿಲ್ಲ.

ಬಳಕೆಯಲ್ಲಿ ಸುಲಭ

ಹೆಚ್ಚಿನ ಜನರು ಇ-ಸಿಮ್‌ಗೆ ಬದಲಾಯಿಸಿದರೆ ಫೋನ್ ಕಂಪನಿಗಳು ತಮ್ಮ ಡಿವೈಸ್‌ನಲ್ಲಿನ ಸಿಮ್ ಸ್ಲಾಟ್ ಅನ್ನು ತೆಗೆದುಹಾಕಲು ಸಹ ಪರಿಗಣಿಸುತ್ತವೆ. eSIM ತಂತ್ರಜ್ಞಾನವು ಭೌತಿಕ SIM ಕಾರ್ಡ್‌ಗಳಿಗಿಂತ ಉತ್ತಮ ಭದ್ರತೆಯನ್ನು ನೀಡುತ್ತದೆ. ಏಕೆಂದರೆ eSIM ನಲ್ಲಿನ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲಾಗಿದೆ. ಸಾಮಾನ್ಯವಾಗಿ ಈ eSIM ಅನ್ನು ಭೌತಿಕವಾಗಿ ಡ್ಯಾಮೇಜ್ ಅಥವಾ ಬೇರೆ ರೀತಿಯ ಹಾನಿಗೊಳಿಸಲಾಗುವುದಿಲ್ಲ.

ಫೋನ್ ಡಿಸೈನಿಂಗ್ ಉತ್ತಮವಾಗಿರುತ್ತವೆ

ಈ ಸಿಮ್‌ಗಳು ವಾಸ್ತವಿಕವಾಗಿ ಕಾರ್ಯನಿರ್ವಹಿಸುವುದರಿಂದ ಅಂತಹ ಪರಿಸ್ಥಿತಿಯಲ್ಲಿ ನೀವು ಯಾವುದೇ ಸಮಸ್ಯೆಯಿಲ್ಲದೆ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಬದಲಾವಣೆಯನ್ನು ನಿರ್ವಹಿಸಬಹುದು. ಇದಕ್ಕಾಗಿ ನಿಮ್ಮ ಫೋನ್‌ನಿಂದ ಸಿಮ್ ಹೊರಬರುವ ಸಮಸ್ಯೆಯನ್ನು ನೀವು ತೊಡೆದುಹಾಕುತ್ತೀರಿ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo