ಇದರ ಹೈಲೈಟ್ ಎಂದರೆ 108MP Samsung ISOCELL HM9 ಸೆನ್ಸರ್. ಇದು OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ತಂತ್ರಜ್ಞಾನವನ್ನು ಹೊಂದಿದ್ದು, ವಿಡಿಯೋ ಮಾಡುವಾಗ ಅಲುಗಾಡುವುದಿಲ್ಲ ಮತ್ತು 4K ವಿಡಿಯೋ ರೆಕಾರ್ಡಿಂಗ್. ಸೆಲ್ಫಿಗಾಗಿ 20MP ಕ್ಯಾಮೆರಾಗಳು.
ಈ ಫೋನ್ 6.77 ಬಾಗಿದ AMOLED ಪರದೆಯನ್ನು ಹೊಂದಿದ್ದು, ಇದು ನೋಡಲು ಬಹಳ ಸುಂದರವಾಗಿದೆ. 120Hz ರಿಫ್ರೆಶ್ ರೇಟ್ ಫೋನ್ ಅನ್ನು ಬಳಸಿದಾಗ ತುಂಬಾ ಸ್ಮೂತ್ ಆಗಿರುತ್ತದೆ.
ವೇಗದ ಅಗತ್ಯಕ್ಕಾಗಿ Snapdragon 6 Gen 3 ಪ್ರೊಸೆಸರ್ ಅನ್ನು ಬಳಸಲಾಗಿದೆ. ಇದು ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್‌ಗೆ ಉತ್ತಮವಾಗಿದೆ.
ಫೋನ್‌ನಲ್ಲಿ 5,520mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಇದೆ, ಇದು 45W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರ ಜೊತೆಗೆ 18W ರಿವರ್ಸ್ ಚಾರ್ಜಿಂಗ್ ಸೌಲಭ್ಯವೂ ಇದೆ.
ಇದು ಇತ್ತೀಚಿನ Android 15 ಆಧಾರಿತ HyperOS 2 ನಲ್ಲಿ ಕೆಲಸ ಮಾಡುತ್ತಿದೆ. ಕಂಪನಿಯು 4 ವರ್ಷದ OS ಅಪ್‌ಡೇಟ್ ಮತ್ತು 6 ವರ್ಷದ ಸೆಕ್ಯೂರಿಟಿ ಅಪ್‌ಡೇಟ್ ನೀಡುವ ಭರವಸೆ ನೀಡಿದೆ.
ನೀವು ₹20,000 ಬಜೆಟ್‌ನಲ್ಲಿ ಒಳ್ಳೆ ಕ್ಯಾಮೆರಾ, ಪ್ರೀಮಿಯಂ ಲುಕ್ ಮತ್ತು ವೇಗದ ಪ್ರೊಸೆಸರ್ ಇರುವ ಫೋನ್ ಹುಡುಕಬಹುದು, Redmi Note 1G 5G ಉತ್ತಮ ಆಯ್ಕೆಯಾಗಿದೆ.