Samsung Galaxy M17 5G ಸ್ಮಾರ್ಟ್ಫೋನ್ ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು ಎಲ್ಲವನ್ನು ತಿಳಿಯಿರಿ

HIGHLIGHTS

Samsung Galaxy M17 5G ಬಜೆಟ್ ಶ್ರೇಣಿಯಲ್ಲಿ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ

Samsung Galaxy M17 5G ಫೋನ್ ಬಿಡುಗಡೆಯಾಗಿದ್ದು 50MP ಕ್ಯಾಮೆರಾದೊಂದಿಗೆ ಹೊಸ AI ಫೀಚರ್ಗಳೊಂದಿಗೆ ಲಭ್ಯ.

ಈ ಸ್ಮಾರ್ಟ್ ಫೋನ್ 4GB RAM ಮತ್ತು 128GB ಸ್ಟೋರೇಜ್ನೊಂದಿಗೆ ಕೇವಲ 12,499 ರೂಗಳಿಗೆ ಬಿಡುಗಡೆಯಾಗಿದೆ.

Samsung Galaxy M17 5G ಸ್ಮಾರ್ಟ್ಫೋನ್ ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು ಎಲ್ಲವನ್ನು ತಿಳಿಯಿರಿ

ಸ್ಯಾಮ್‌ಸಂಗ್ ಇಂದು ತನ್ನ ಹೊಚ್ಚ ಹೊಸ Samsung Galaxy M17 5G ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಈ ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು 50MP ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಕಂಪನಿಯು ಹಲವಾರು ವಿಶಿಷ್ಟ AI ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ. ಇದರಲ್ಲಿ ಸರ್ಕಲ್ ಟು ಸರ್ಚ್ ಎಂಬ ಹೊಸ AI ಫೀಚರ್ ಹೊಂದಿರುವುದು ವಿಶೇಷವಾಗಿದೆ ಯಾಕೆಂದರೆ ಇದು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಸ್ಯಾಮ್‌ಸಂಗ್ ಈ ಫೋನ್‌ನೊಂದಿಗೆ ಬಳಕೆದಾರರಿಗೆ ಆರು ಆಪರೇಟಿಂಗ್ ಸಿಸ್ಟಮ್ ಅಪ್‌ಗ್ರೇಡ್‌ಗಳನ್ನು ಸಹ ಒದಗಿಸುತ್ತದೆ.

Digit.in Survey
✅ Thank you for completing the survey!

Also Read: Best Soundbars: ದೀಪಾವಳಿ ಸೇಲ್‌ನಲ್ಲಿ ಕೈಗೆಟಕುವ ಬೆಲೆಗೆ Dolby Atmos ಸೌಂಡ್‌ಬಾರ್‌ಗಳು ಲಭ್ಯ!

Samsung Galaxy M17 5G ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆ:

ಇದಲ್ಲದೆ ರೂಪಾಂತರಗಳು, ಬಣ್ಣಗಳು, ಬೆಲೆ, ಕೊಡುಗೆಗಳು ಮತ್ತು ಮಾರಾಟದ ಬಗ್ಗೆ ನೋಡುವುದಾದರೆ ಕಂಪನಿಯು ಈ ಫೋನ್ ಅನ್ನು ಮೂನ್‌ಲೈಟ್ ಸಿಲ್ವರ್ ಮತ್ತು ಸಫೈರ್ ಬ್ಲ್ಯಾಕ್ ಬಣ್ಣಗಳಲ್ಲಿ ಬಿಡುಗಡೆ ಮಾಡಿದೆ. ಅಲ್ಲದೆ ಈ ಮೂರು ರೂಪಾಂತರಗಳಲ್ಲಿ ಬಳಕೆದಾರರು ಕೆಲವು ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ನೋ ಕಾಸ್ಟ್ ಇಎಂಐ ಮತ್ತು ಪಾವತಿಯ ಮೇಲೆ ರಿಯಾಯಿತಿ ಸೇರಿದಂತೆ ಕೆಲವು ಕೊಡುಗೆಗಳನ್ನು ಪಡೆಯಬಹುದು. ಈ ಫೋನ್ 13ನೇ ಅಕ್ಟೋಬರ್ 2025 ರಿಂದ ಕಂಪನಿಯ ಅಧಿಕೃತ ವೆಬ್‌ಸೈಟ್, ಅಮೆಜಾನ್ ಮತ್ತು ಎಲ್ಲಾ ನಿರ್ದಿಷ್ಟ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟವಾಗಲಿದೆ.

  • 4GB RAM ಮತ್ತು 128GB ಸ್ಟೋರೇಜ್ ಬೆಲೆ 12,499 ರೂಗಳು.
  • 6GB RAM ಮತ್ತು 128GB ಸ್ಟೋರೇಜ್ ಬೆಲೆ 13,999 ರೂಗಳು.
  • 8GB RAM ಮತ್ತು 128GB ಸ್ಟೋರೇಜ್ ಬೆಲೆ 15,999 ರೂಗಳು.
Samsung Galaxy M17 5G

ಸ್ಯಾಮ್‌ಸಂಗ್ Galaxy M17 5G ಫೀಚರ್ಗಳೇನು?

Samsung Galaxy M17 5G ಕೈಗೆಟುಕುವ 5G ಸ್ಮಾರ್ಟ್‌ಫೋನ್ ಆಗಿದ್ದು 6.7 ಇಂಚಿನ ಪೂರ್ಣ HD+ ಸೂಪರ್ AMOLED ಡಿಸ್ಪ್ಲೇಯನ್ನು 90Hz ರಿಫ್ರೆಶ್ ದರದೊಂದಿಗೆ ಹೊಂದಿದೆ. ಇದನ್ನು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್‌ನಿಂದ ರಕ್ಷಿಸಲಾಗಿದೆ ಮತ್ತು ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP54 ರೇಟಿಂಗ್ ಅನ್ನು ಹೊಂದಿದೆ. ಆಪ್ಟಿಕ್ಸ್‌ಗಾಗಿ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದು 50MP ಪ್ರೈಮರಿ ಸೆನ್ಸರ್ನೊಂದಿಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS), 5MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2MP ಮ್ಯಾಕ್ರೋ ಸೆನ್ಸರ್ನೊಂದಿಗೆ ಹೊಂದಿದೆ ಜೊತೆಗೆ 13MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

ಇದು ಆಕ್ಟಾ-ಕೋರ್ ಎಕ್ಸಿನೋಸ್ 1330 ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು 8GB ವರೆಗೆ RAM ಮತ್ತು 128GB ವರೆಗೆ ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಇದನ್ನು ಮೈಕ್ರೋ SD ಕಾರ್ಡ್ ಮೂಲಕ 2TB ವರೆಗೆ ವಿಸ್ತರಿಸಬಹುದಾಗಿದೆ. ಈ ಸ್ಮಾರ್ಟ್ಫೋನ್ 25W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಬ್ಯಾಟರಿಯನ್ನು ಹೊಂದಿದ್ದು One UI 7 ನೊಂದಿಗೆ ಆಂಡ್ರಾಯ್ಡ್ 15 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು Samsung Knox Vault, Samsung Wallet ಮತ್ತು Goo ಮತ್ತು Gemini Live ನಲ್ಲಿ ಸರ್ಕಲ್ ಟು ಸರ್ಚ್‌ನಂತಹ AI ಸಾಮರ್ಥ್ಯಗಳಂತಹ ಸುಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo