SD 8 Elite 5th Gen vs Apple A19 Pro Bionic ಇವೆರಡರಲ್ಲಿ ಯಾವ ಚಿಪ್ ಪವರ್ಫುಲ್ ಮತ್ತು ಫೀಚರ್ಗಳೇನು?

HIGHLIGHTS

Snapdragon 8 Elite Gen 5 ಮತ್ತು Apple A19 Pro Bionic ಚಿಪ್‌ಗಳ ವ್ಯತ್ಯಾಸಗಳೇನು?

ಒಂದು ಕೋರ್ನಲ್ಲಿ ಹೆಚ್ಚು ವೇಗ ಮತ್ತು ಪೂರ್ತಿ ಸಿಸ್ಟಮ್‌ನಲ್ಲಿ ಕಡಿಮೆ ಪವರ್ ಬಳಸಿ ಗಮನ ನೀಡಲಾಗಿದೆ.

SD 8 Elite 5th Gen vs Apple A19 Pro Bionic ಇವೆರಡರಲ್ಲಿ ಯಾವ ಚಿಪ್ ಪವರ್ಫುಲ್ ಮತ್ತು ಫೀಚರ್ಗಳೇನು?

SD 8 Elite 5th Gen vs Apple A19 Pro Bionic: ಇಂದಿನ ಮೊಬೈಲ್ ಪ್ರಪಂಚದಲ್ಲಿ ವೇಗ ಮತ್ತು ಪವರ್ ನಡೆಯುವ ಯುದ್ಧ ತೀವ್ರವಾಗಿದೆ. ಪ್ರಸ್ತುತ Qualcomm ನ Snapdragon 8 Elite Gen 5 ಮತ್ತು Apple A19 Pro Bionic ಚಿಪ್‌ಗಳು ಟಾಪ್ ಫೋನ್ಗಳಿಗೆ ಮುಖ್ಯ ಎಂಜಿನ್ ಬ್ಯಾಟರಿಯಾಗಿದೆ. ಇವೆರಡೂ ಚಿಪ್‌ಗಳು ಅತಿ ಸೂಕ್ಷ್ಮ ತಂತ್ರಜ್ಞಾನದಿಂದ ತಯಾರಾಗಿವೆ. ಈ A19 Pro ಚಿಪ್ ಆಪಲ್ iOS ಸಿಸ್ಟಮ್‌ನೊಂದಿಗೆ ಹೊಂದಿಕೊಂಡು ಒಂದು ಕೋರ್ನಲ್ಲಿ ಹೆಚ್ಚು ವೇಗ ಮತ್ತು ಪೂರ್ತಿ ಸಿಸ್ಟಮ್‌ನಲ್ಲಿ ಕಡಿಮೆ ಪವರ್ ಬಳಸಲಿದೆ.

Digit.in Survey
✅ Thank you for completing the survey!

ಆದರೆ Snapdragon 8 Elite Gen 5 ಚಿಪ್ ಹೊಸ Oryon CPU ಕೋರ್‌ಗಳನ್ನು ಬಳಸಿ ಆಂಡ್ರಾಯ್ಡ್ ಫೋನ್‌ಗಳಲ್ಲಿ ಹೆಚ್ಚು ಕೋರ್‌ಗಳು ಅದ್ಭುತ ಗ್ರಾಫಿಕ್ಸ್ (GPU) ಮತ್ತು ಹೊಸ AI ಸಾಮರ್ಥ್ಯವನ್ನು ನೀಡಲು ಪ್ರಯತ್ನಿಸುತ್ತದೆ. ಇವೆರಡರಲ್ಲಿ ಯಾವುದು ಉತ್ತಮ ಎಂಬ ನಿರ್ಧಾರ ಮಾಡುವುದಾದರೆ ಹೆಚ್ಚು ಪವರ್ ಬೇಕೇ ಅಥವಾ ಹೆಚ್ಚು ಸಮಯ ಬ್ಯಾಟರಿ ಲೈಫ್ ಬೇಕೇ ಅನ್ನೋದು ನಿಮ್ಮ ನಿರ್ಧಾರ.

Also Read: Dolby Audio Soundbar ಇಂದು ಅಮೆಜಾನ್ ಫೆಸ್ಟಿವಲ್ ಸೇಲ್‌ನಲ್ಲಿ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಲಭ್ಯ!

Snapdragon 8 Elite Gen 5 ಮತ್ತು Apple A19 Pro Bionic:

ಪ್ರಸ್ತುತ CPU ಸ್ಪರ್ಧೆಯಲ್ಲಿ ಆಪಲ್ ಒಂದೇ ಕೋರ್ನಲ್ಲಿ (Single-core performance) ಈಗ ಸರಿ-ಸಮಕ್ಕೆ ಬಂದಿದೆ. ಆರಂಭಿಕ ಪರೀಕ್ಷೆಗಳಲ್ಲಿ 4.6GHz ವೇಗವಿರುವ ಸ್ನಾಪ್‌ಡ್ರಾಗನ್ ನ ಓರಿಯನ್ ಕೋರ್‌ಗಳು, A19 Pro ಜೊತೆಗೂಡುತ್ತವೆ. ಆದರೆ ಮುಖ್ಯ ವ್ಯತ್ಯಾಸ ಕಾಣುವುದು ಹೆಚ್ಚು ಕೋರ್’ಗಳ ಕೆಲಸದಲ್ಲಿ ಸ್ನಾಪ್‌ಡ್ರಾಗನ್ 8 ಕೋರ್‌ಗಳನ್ನು ಹೊಂದಿದೆ. ಇದು A19 Pro ನ 6 ಕೋರ್‌ಗಳಲ್ಲಿ ಶೇ. 20ರಷ್ಟು ಹೆಚ್ಚು ವೇಗವನ್ನು ನೀಡುತ್ತದೆ. ಇದರರ್ಥ ವಿಡಿಯೋ ಎಡಿಟಿಂಗ್ ಮತ್ತು ಹಲವು ಕೆಲಸಗಳನ್ನು ಒಟ್ಟಿಗೆ ಮಾಡುವವರಿಗೆ ಸ್ನಾಪ್‌ಡ್ರಾಗನ್ ಹೆಚ್ಚು ಪವರ್ಫುಲ್ ಆಗಿದೆ.

ಗ್ರಾಫಿಕ್ಸ್ (GPU) ಮತ್ತು ಗೇಮಿಂಗ್ ಸಾಮರ್ಥ್ಯ:

ಗೇಮರುಗಳು ಮತ್ತು ವಿಡಿಯೋ ಮಾಡುವವರಿಗೆ ಗ್ರಾಫಿಕ್ಸ್ ಪವರ್ ಮುಖ್ಯವಾಗಿದೆ. ಇಲ್ಲಿ Snapdragon Adreno 840 GPU ಸ್ಪಷ್ಟ ಮುನ್ನಡೆ ಸಾಧಿಸಿದೆ. ಪರೀಕ್ಷೆಗಳಲ್ಲಿ Adreno 840 ಗ್ರಾಫಿಕ್ಸ್, A19 Pro ಚಿಪ್ನ GPU ಗಿಂತ ಸುಮಾರು ಶೇ.20 ರಷ್ಟು ಹೆಚ್ಚು ಫ್ರೇಮ್-ರೇಟ್ ನೀಡಲಾಗುತ್ತದೆ. ಈ ಪವರ್ ಮತ್ತು ‘ಅನ್ರಿಯಲ್ ಎಂಜಿನ್ 5’ ಹೊಸ ಗೇಮಿಂಗ್ ತಂತ್ರಜ್ಞಾನಗಳ ಬೆಂಬಲದಿಂದಾಗಿ ಆಂಡ್ರಾಯ್ಡ್ ಫೋನ್‌ಗಳು ವೇಗದ ಗೇಮಿಂಗ್ ಅನುಭವ ನೀಡುತ್ತವೆ. A19 Pro ಚಿಪ್ Apple ನ iOS ನಲ್ಲಿ ಹೆಚ್ಚು ಸ್ಥಿರವಾದ ಗೇಮಿಂಗ್ ನೀಡಿದರೂ ಕಚ್ಚಾ ಗ್ರಾಫಿಕ್ಸ್ ಶಕ್ತಿಯಲ್ಲಿ Snapdragon ಮುಂದೆ ಇದೆ.

SD 8 Elite 5th Gen vs Apple A19 Pro Bionic

ಪವರ್ ಪರ್ಫಾರ್ಮೆನ್ಸ್ ಮತ್ತು ಹೀಟ್ ಕಂಟ್ರೋಲ್:

ಬ್ಯಾಟರಿ ಲೈಫ್ ವಿಷಯದಲ್ಲಿ ಎರಡೂ ಚಿಪ್‌ಗಳು ಬೇರೆ ದಾರಿ ಹಿಡಿದಿವೆ. A19 Pro ಚಿಪ್ ಸಾಮಾನ್ಯವಾಗಿ ಫೋನ್ ಬಳಸುವಾಗ ಕಡಿಮೆ ಶಕ್ತಿಯನ್ನು ಬಳಸುತ್ತದೆ. iOS ಮತ್ತು ಚಿಪ್ನ ಉತ್ತಮ ಹೊಂದಾಣಿಕೆಯಿಂದಾಗಿ ಇದು ಸಾಧ್ಯವಾಗಿದೆ. ಸ್ನಾಪ್‌ಡ್ರಾಗನ್ 8 ಎಲೈಟ್ ಜನ್ 5 ಹಳೆಯ ಚಿಪ್‌ಗಿಂತ ಹೆಚ್ಚು ಸುಧಾರಿಸಿದೆ ಆದರೆ ಗರಿಷ್ಠ ಪವರ್ಫುಲ್ ಬಳಸುವಾಗ ಹೆಚ್ಚು ವಿದ್ಯುತ್ ಪಡೆಯಲಾಗುತ್ತದೆ. ಇದರಿಂದ ಫೋನ್ ಬಿಸಿಯಾಗುವ ಸಾಧ್ಯತೆಯಿದೆ. ಇದನ್ನು ನಿಯಂತ್ರಿಸಲು ಫೋನ್ ತಯಾರಕರು ಉತ್ತಮ ಕೂಲಿಂಗ್ ಸಿಸ್ಟಮ್ ಬಳಸಬೇಕು.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸಾಮರ್ಥ್ಯ:

ಪ್ರಸ್ತುತ ಈ ಚಿಪ್ಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನ ಎರಡೂ ಕಂಪನಿಗಳು ತಮ್ಮ ನ್ಯೂರಲ್ ಎಂಜಿನ್ಗಳನ್ನು ಸುಧಾರಿಸಿವೆ. Snapdragon 8 Elite Gen 5 ಹೊಸ Hexagon NPU ಹೊಂದಿದೆ. ಇದು ಒಂದು ಸೆಕೆಂಡಿನಲ್ಲಿ ಟ್ರಿಲಿಯನ್ ಗಟ್ಟಲೆ AI ಲೆಕ್ಕಾಚಾರಗಳನ್ನು (TOPS) ಮಾಡಲು ಸಾಧ್ಯ. ಇದು ಕ್ಯಾಮೆರಾ ಮತ್ತು ಹೊಸ ಜನರೇಟಿವ್ AI ಕೆಲಸಗಳಿಗೆ ಸಹಾಯ ಮಾಡುತ್ತದೆ. A19 Pro ನ್ಯೂರಲ್ ಎಂಜಿನ್ ಆಪಲ್ AI ವೈಶಿಷ್ಟ್ಯಗಳಿಗಾಗಿ (Apple Intelligence) ತಯಾರಾಗಿದೆ. ಇದು ನಿಮ್ಮ ಮಾಹಿತಿಯನ್ನು ನಿಮ್ಮ ಫೋನಿನಲ್ಲೇ ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ. ಕಚ್ಚಾ AI ವೇಗದಲ್ಲಿ Snapdragon ಮುಂದಿದ್ದರೂ Apple AI ಸಿಸ್ಟಮ್ ಹೆಚ್ಚು ಸರಿಯಾಗಿ ಕೆಲಸ ಮಾಡುತ್ತದೆ.

Also Read: 65 Inch Smart TV: ಅಮೆಜಾನ್ ಸೇಲ್‌ನಲ್ಲಿ 65 ಇಂಚಿನ VW ಸ್ಮಾರ್ಟ್ ಟಿವಿ ಮೇಲೆ ಭರ್ಜರಿ ಡಿಸ್ಕೌಂಟ್‌ಗಳು!

ಇಕೋಸಿಸ್ಟಮ್ ಮತ್ತು ಬಳಕೆದಾರರ ಅನುಭವ:

ಈ ಚಿಪ್‌ಗಳಲ್ಲಿ ಒಂದನ್ನು ಆಯ್ಕೆ ಮಾಡುವುದು ನೀವು ಬಳಸುವ ಆಪರೇಟಿಂಗ್ ಸಿಸ್ಟಮ್ (OS) ಅನ್ನು ಅವಲಂಬಿಸಿರುತ್ತದೆ. ಇದು A19 Pro ಚಿಪ್‌ನ ಶಕ್ತಿ ಕೇವಲ iPhone ನಲ್ಲಿ ಸಿಗುತ್ತದೆ ಇಲ್ಲಿ Apple ನಿಮಗೆ ಅತ್ಯುತ್ತಮ ಸಾಫ್ಟ್‌ವೇರ್ ಬೆಂಬಲ ಮತ್ತು ಸ್ಥಿರವಾದ ಅನುಭವವನ್ನು ಖಚಿತಪಡಿಸುತ್ತದೆ. Snapdragon 8 Elite Gen 5 ಚಿಪ್, ಹಲವು ಬೇರೆ ಬೇರೆ Android ಕಂಪನಿಗಳ ಫೋನ್‌ಗಳಲ್ಲಿ ಲಭ್ಯವಿದೆ. ನಿಮಗೆ ಹೆಚ್ಚು RAM ಮತ್ತು ಸ್ಟೋರೇಜ್ ಆಯ್ಕೆಗಳಲ್ಲಿ UFS 4.1 ಸ್ಟೋರೇಜ್ ಸಿಗುತ್ತವೆ. ಆದರೆ ನಿಮ್ಮ ಫೋನ್‌ನ ಅಂತಿಮ ಕಾರ್ಯನಿರ್ವಹಣೆ ಮತ್ತು ಅಪ್‌ಡೇಟ್‌ಗಳು ನೀವು ಖರೀದಿಸುವ ಕಂಪನಿಯ ಮೇಲೆ ನಿರ್ಧಾರವಾಗುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo