ಭಾರತದಲ್ಲಿ Vivo Y31 Series ಸದ್ದಿಲ್ಲದೆ ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ
Vivo Y31 Series ಸದ್ದಿಲ್ಲದೆ ಬಿಡುಗಡೆಗೊಳಿಸುವುದರೊಂದಿಗೆ ಕಂಪನಿ ತನ್ನ Y-ಸರಣಿಯನ್ನು ವಿಸ್ತರಿಸಿದೆ.
Vivo Y31 ಮತ್ತು Vivo Y31 Pro 5G ಎಂಬ ಎರಡು ಹೊಸ ಸ್ಮಾರ್ಟ್ ಫೋನ್‌ಗಳನ್ನು ಬಿಡುಗಡೆ ಮಾಡಿದೆ.
Vivo Y31 Series ಡೀಸೆಂಟ್ ಬೆಲೆಗೆ ಉತ್ತಮ ಪ್ರೊಸೆಸರ್, ಕ್ಯಾಮೆರಾ ಮತ್ತು ಬ್ಯಾಟರಿಯನ್ನು ಹೊಂದಿವೆ.
ಭಾರತದಲ್ಲಿ Vivo Y31 Series ಸದ್ದಿಲ್ಲದೆ ಬಿಡುಗಡೆಗೊಳಿಸುವುದರೊಂದಿಗೆ ಕಂಪನಿ ತನ್ನ Y-ಸರಣಿಯನ್ನು ವಿಸ್ತರಿಸಿದೆ. ಪ್ರಸ್ತುತ Vivo Y31 ಮತ್ತು Vivo Y31 Pro 5G ಎಂಬ ಎರಡು ಹೊಸ ಸ್ಮಾರ್ಟ್ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಹೊಸ ಸ್ಮಾರ್ಟ್‌ಫೋನ್‌ಗಳು ಮಧ್ಯಮ ಶ್ರೇಣಿಯ ಮತ್ತು ಬಜೆಟ್ ವಿನ್ಯಾಸ ಸೇರುತ್ತವೆ. ಇವು ಹೊಸ ಮತ್ತು ಇಂತರೆಸ್ತಿನಗ ವೈಶಿಷ್ಟ್ಯಳೊಂದಿಗೆ ಉತ್ತಮ ಮತ್ತು ಆಕರ್ಷಕ ವಿನ್ಯಾಸವನ್ನು ಹೊಂದಿವೆ. ಈ ಹೊಸ ಮಾದರಿಗಳು ಉತ್ತಮ ಪ್ರೊಸೆಸರ್, ಕ್ಯಾಮೆರಾ ಮತ್ತು ಬ್ಯಾಟರಿ ವಿಷಯದಲ್ಲಿ ಸಾಕಷ್ಟು ಸುಧಾರಣೆಗಳ ಸಂಪೂರ್ಣ ವಿವರಗಳನ್ನು ಈ ಕೆಳಗೆ ಪಡೆಯಬಹುದು.
SurveyVivo Y31 Series ಡಿಸ್ಪ್ಲೇ ವಿವರಗಳು:
ಈ Vivo Y31 Series ಉತ್ತಮ ಡಿಸ್‌ಪ್ಲೇಗಳನ್ನು ಹೊಂದಿದೆ. ಸಾಮಾನ್ಯ Vivo Y31 ಫೋನ್ 6.68 ಇಂಚಿನ LCD ಪರದೆಯನ್ನು ಹೊಂದಿದೆ. ಇದು HD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರವನ್ನು ಹೊಂದಿದೆ. ಇದು 1,000 ನಿಟ್ಸ್ ಪ್ರಖರತೆಯನ್ನು (ಪ್ರಕಾಶಮಾನ) ತಲುಪುತ್ತದೆ. ಇದು ಪರಿಸರದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಆದರೆ Y31 Pro 5G ಸ್ವಲ್ಪ ದೊಡ್ಡದಾದ 6.72-ಇಂಚಿನ LCD ಪರದೆಯನ್ನು ಹೊಂದಿದೆ. ಇದು ಪೂರ್ಣ HD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರವನ್ನು ಹೊಂದಿದೆ. ಪ್ರೊ ಮಾದರಿಯ ಡಿಸ್ಪ್ಲೇ ಹೆಚ್ಚು ತೀಕ್ಷ್ಣವಾದ ಚಿತ್ರವನ್ನು ಮತ್ತು 1,050 ನಿಟ್ಸ್ ಗರಿಷ್ಠ ಪ್ರಖರತೆಯನ್ನು ಹೊಂದಿದೆ. ಎರಡೂ ಫೋನ್‌ಗಳ ರಕ್ಷಣೆಗಾಗಿ ಗಾರ್ಡಿಯನ್ ಗ್ಲಾಸ್ ಇದೆ.
Vivo Y31 ಮತ್ತು Vivo Y31 Pro 5G ಕ್ಯಾಮೆರಾ
ಕ್ಯಾಮೆರಾ ವಿಷಯದಲ್ಲಿ ಎರಡೂ ಫೋನ್‌ಗಳು 50MP ಪ್ರಾಥಮಿಕ ಸೆನ್ಸರ್ ಅನ್ನು ಹೊಂದಿದ್ದು ವಿವರವಾದ ಚಿತ್ರಗಳನ್ನು ಸೆರೆಹಿಡಿಯಲಾಗುತ್ತದೆ. Vivo Y31 ಡ್ಯುಯಲ್-ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. 50MP ಮುಖ್ಯ ಸೆನ್ಸರ್ ಮತ್ತು 0.08MP ಸೆಕೆಂಡರಿ ಸೆನ್ಸರ್ ಹೊಂದಿದೆ. Vivo Y31 Pro 5G ಸಹ ಡ್ಯುಯಲ್ ರಿಯರ್ ಕ್ಯಾಮೆರಾ ಕಾನ್ಫಿಗರೇಶನ್ ಹೊಂದಿದೆ ಆದರೆ ಇದು 50MP ಮುಖ್ಯ ಲೆನ್ಸ್‌ನೊಂದಿಗೆ 2MP ಡೆಪ್ಟ್ ಸೆನ್ಸರ್ ಹೊಂದಿದೆ. ಇದು ಸುಧಾರಿತ ಪೋರ್ಟ್ ರೇಟ್ ಶಾಟ್‌ಗಳಿಗೆ ಸಹಾಯಕವಾಗಿದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ ಎರಡೂ ಫೋನ್‌ಗಳು 8MP ಫ್ರಂಟ್-ಫೇಸಿಂಗ್ ಕ್ಯಾಮೆರಾವನ್ನು ಹೊಂದಿದೆ.
Vivo Y31 ಮತ್ತು Vivo Y31 Pro 5G ಹಾರ್ಡ್‌ವೇರ್
Vivo Y31 ಮತ್ತು Y31 Pro 5G ವಿಭಿನ್ನ ಪ್ರೊಸೆಸರ್‌ಗಳನ್ನು ಹೊಂದಿದೆ. Vivo Y31 Qualcomm Snapdragon 4 Gen 2 ನಿಂದ ಚಾಲಿತವಾಗಿದೆ. ಆದರೆ Y31 Pro 5G ಫೋನ್ MediaTek ಡೈಮೆನ್ಸಿಟಿ 7300 5G ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಪ್ರೊ ಮಾದರಿಯ ಚಿಪ್‌ಸೆಟ್ 4nm ಪ್ರಕ್ರಿಯೆಯಲ್ಲಿ ನಿರ್ಮಿಸಲಾಗಿದೆ. ಉತ್ತಮ ಮತ್ತು 5G ಸಂಪರ್ಕವನ್ನು ಒದಗಿಸುತ್ತದೆ. Y31 4GB ಮತ್ತು 6GB RAM ಮತ್ತು 128GB ಆಂತರಿಕ ಸಂಗ್ರಹಣೆಯಲ್ಲಿ ಲಭ್ಯವಿದೆ. Y31 Pro 5G 8GB RAM ಮತ್ತು 128GB ಅಥವಾ 256GB ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿದೆ. ಎರಡೂ Vivo ದ FuntouchOS 15 ಜೊತೆಗೆ Android 15 ನಲ್ಲಿ ಫೋನ್ ಕಾರ್ಯನಿರ್ವಹಿಸುತ್ತದೆ.
Vivo Y31 ಮತ್ತು Vivo Y31 Pro 5G ಬ್ಯಾಟರಿ ಮತ್ತು ಸೆನ್ಸರ್‌ಗಳು
Vivo Y31 ಮತ್ತು Vivo Y31 Pro 5G ಎರಡೂ ಬೃಹತ್ 6,500mAh ಬ್ಯಾಟರಿಯನ್ನು ಹೊಂದಿದೆ. ಇದು ದೀರ್ಘಕಾಲದ ಬಳಕೆಯನ್ನು ಹೊಂದಿದೆ. ಇವು 44W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಇದು ಫೋನ್‌ಗಳನ್ನು ತ್ವರಿತವಾಗಿ ಚಾರ್ಜ್ ಮಾಡುತ್ತದೆ. ಬಾಳಿಕೆ ವಿಷಯದಲ್ಲಿ Y31 IP68 ಮತ್ತು IP69 ಜಲ ಮತ್ತು ಧೂಳು ಪ್ರತಿರೋಧವನ್ನು ಹೊಂದಿದೆ ಆದರೆ Y31 Pro 5G IP64 ರೇಟಿಂಗ್ ಹೊಂದಿದೆ. ಎರಡೂ ಫೋನ್‌ಗಳು ಸುರಕ್ಷಿತವಾಗಿ ಅನ್‌ಲಾಕ್ ಮಾಡಲು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ.
Vivo Y31 Series ಬೆಲೆ ಮತ್ತು ಲಭ್ಯತೆ
Vivo Y31 ಫೋನ್ ಆರಂಭಿಕ 4GB RAM + 128GB ಸ್ಟೋರೇಜ್ ಮಾದರಿಯ ಬೆಲೆ ₹14,999 ರಿಂದ ಮತ್ತು 6GB RAM + 128GB ಮಾದರಿಯ ಬೆಲೆ ₹16,499. Vivo Y31 Pro 5G ನ 8GB RAM + 128GB ಸ್ಟೋರೇಜ್ ಮಾದರಿಯ ಬೆಲೆ ₹18,999 ಮತ್ತು 8GB RAM + 256GB ಮಾದರಿಯ ಬೆಲೆ ₹20,999 ರೂಗಳಾಗಿವೆ. ಈ ಸ್ಮಾರ್ಟ್‌ಫೋನ್‌ಗಳು ಫ್ಲಿಪ್‌ಕಾರ್ಟ್, ವಿವೋ ಇಂಡಿಯಾದ ಅಧಿಕೃತ ಇ-ಸ್ಟೋರ್ ಮತ್ತು ಇತರ ರಿಟೇಲ್ ಮಳಿಗೆಗಳಲ್ಲಿ ಲಭ್ಯವಿವೆ. ಗ್ರಾಹಕರು ಕೆಲವು ಕಾರ್ಡ್‌ಗಳ ಮೇಲೆ ಬ್ಯಾಂಕ್ ಡಿಸ್ಕೌಂಟ್ ಮತ್ತು ಜೀರೋ ಡೌನ್‌ಪೇಮೆಂಟ್ ಆಯ್ಕೆಗಳನ್ನು ಸಹ ಪಡೆಯಬಹುದು. Vivo Y31 ರೋಸ್ ರೆಡ್ ಮತ್ತು ಡೈಮಂಡ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ ಆದರೆ Y31 Pro 5G ಮೋಚಾ ಬ್ರೌನ್ ಮತ್ತು ಡ್ರೀಮಿ ವೈಟ್ ಬಣ್ಣಗಳಲ್ಲಿ ಲಭ್ಯವಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile